logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಲಾಂಗಲಿ
ಲಾಂಗಲಹಸ್ತ, ಬಲರಾಮ (ಅರುಣಾಧರ ಪಾಂಡುರದಶನರುಚಿರಗಳಂ ಆನನದಿನೊಗೆಯೆ ಲಾಮಗಲಿ ನುಡಿದಂ: ಜಗನ್ನಾವಿ, ೧೫. ೫೦)

ಲಾಂಗೂಲ
ಬಾಲ (ಚಮರೀ ಲೋಲ ಲಾಂಗೂಲ ಮಾಲಾವಲಿ ವಿಕ್ಷೇಪಂಗಳಿಂ ತತ್ ಚಮರರುಹ ಮಹಾಶೋಭೆ ಕೈಗಣ್ಮೆ: ಪಂಪಭಾ, ೪. ೧೪)

ಲಾಂಛನ
ಚಿಹ್ನೆ (ಅಂಕಂ ಲಕ್ಷಣಂ ಅದುವೆ ಕಳಂಕಾಭಿಜ್ಞಾನ ಚಿಹ್ನ ಲಾಂಛನಲಕ್ಷ್ಮಾಖ್ಯಂ ಕುಱಪದೆನಿಸುಗುಂ: ಅಭಿಧಾವ, ೧. ೧. ೬೯); ಗುರುತು (ಅನ್ನೆಗಮಿತ್ತ ಲಾಂಛನಚ್ಛಲದಿಂ ಶೋಕಾನಲದಗ್ಧಮಪ್ಪ ಮಹಾಶ್ವೇತಾಹೃದಯಮಂ ವಿಡಂಬಿಸುವಂತೆ: ಕಾದಂಸಂ, ೫. ೭ ವ)

ಲಾಂಛಿತ
ಗುರುತಿರುವ (ಕೊಳದ ತಡಿಯೊಳ್ ಹಳಿಕುಳಿಶಶಂಖಚಕ್ರ ಲಾಂಛಿತಮಪ್ಪ ಅಡಿವಜ್ಜೆಯಂ ಕಂಡು: ಪಂಪಭಾ, ೧೩. ೭೬ ವ)

ಲಾಂತ
ಸ್ವರ್ಗ (ಚಿಲಾವರ್ತರಂ ಲಾಂತಮಂ ಪಿಡಿದರ್ಪಂತಿರೆ ಮಾೞ್ಪೆಂ: ಪಾರ್ಶ್ವನಾಪು, ೧೧. ೮೪)

ಲಾಂತವ
[ಜೈನ] ಒಂದು ಕಲ್ಪ (ಸೌಧರ್ಮ ಈಶಾನ ಸನತ್ಕುಮಾರ ಮಾಹೇಂದ್ರ ಬ್ರಹ್ಮ ಬ್ರಹ್ಮೋತ್ತರ ಲಾಂತವ ಕಾಪಿಷ್ಠ ಶುಕ್ರ ಮಹಾಶುಕ್ರ ಶತಾರ ಸಹಸ್ರಾರ ಆನತ ಪ್ರಾಣತ ಅರಣ್ಯ ಅಚ್ಯುತಮೆಂಬ ಪದಿನಾಱುಂ ಕಲ್ಪಂಗಳೊಳಂ: ವಡ್ಡಾರಾ, ಪು ೯೭, ಸಾ ೨೬)

ಲಾಕುಳ
ಯೋಗದಂಡ (ವಲ್ಕಲಮನಾಂತು ಕಮಂಡಲಮಂ ಕರಾಗ್ರದೊಳ್ ಧರಿಯಿಸಿ ಬಲ್ಪಿನಿಂ ಪಿಡಿದು ಲಾಕುಳಮಂ: ತ್ರಿಷಷ್ಟಿಪು, ೫. ೧೫)

ಲಾಕ್ಷಾ
ಅರಗು (ನವ ಲಾಕ್ಷಾಮುದ್ರೆಯನೊಡೆದು ಅವಧರಿಪುದುಂ ಆಗಳ್ ಅರ್ಕನುದಯಂಗೆಯ್ದಂತೆವೊಲ್ ಆಯ್ತು ತನ್ನೃಪೇಶ್ವರಭವನದೊಳ್ ಆಶ್ಚರ್ಯಂ ಆದಂ ಅಪ್ಪನ್ನೆವರಂ: ಸುಕುಮಾಚ, ೧೦. ೧೧೫)

ಲಾಕ್ಷಾಗೃಹ
ಅರಗಿನ ಮನೆ (ಆ ಲಾಕ್ಷಾಗೃಹದಾಹಮೊಂದೆ ವಿಷಸಂಯುಕ್ತಾನ್ನಂ ಅಂತೊಂದೆ ಪಾಂಚಾಲೀನಿಗ್ರಹಂ ಒಂದೆ ಟಕ್ಕುವಗೆಯಿಂ ಗೆಲ್ದಿರ್ದ ಜೂದೊಂದೆ: ಪಂಪಭಾ, ೯. ೨೨)

ಲಾಕ್ಷಾಗೇಹ
ಅರಗಿನ ಮನೆ (ನರಕನಗರಲಗ್ನ ಆಕಸ್ಮಿಕಾಗ್ನಿ ಸ್ಫುಲಿಂಗಸ್ಫುರತ್ ಅವಿರಳ ಲಾಕ್ಷಾಗೇಹಪೂರೈಕಭಾವ ತ್ವರಿತವಿಚಳತ್ ಅಸ್ಥಿಗ್ರಂಥಿಸಂಸ್ಥಾನಬಂಧರ್: ಆದಿಪು, ೫. ೮೯)


logo