logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಫಣಿಲೋಕ
ನಾಗಲೋಕ (ಅನಿಮಿಷಲೋಕಮಂ ವಿಬುಧರಿಂ ಫಣಿಲೋಕಮಂ ಉಗ್ರಸಾಧನದಿಂ .. .. ಅದೇನನುಕರಿಸಿತ್ತೊ ರಾಜಭವನಂ: ಶಾಂತಿಪು, ೩. ೧೨)

ಫಣಿವೈರಿ
ಹಾವಿನ ಶತ್ರು, ಗರುಡ (ಗಜ ವೃಷಭ ಅಂಕುಶ ಚಕ್ರ ಅಂಬುಜ ಹಂಸ ಮಯೂರ ಮತ್ಸ್ಯ ಫಣಿವೈರಿ ಮತಂಗಜರಿಪು ಚಿಹ್ನ ವಿಶಾಲಧ್ವಜಂಗಳಿಂ ಧ್ವಜಮಹೀತಳಂ ಸೊಗಯಿಸುಗುಂ: ಆದಿಪು, ೧೦. ೩೩)

ಫಣಿಶಯನ
ಹಾವನ್ನೇ ಹಾಸಿಗೆಯಾಗುಳ್ಳವನು, ವಿಷ್ಣು (ರಕ್ಷಿಪುದೀ ಕಾಳಿಯ ಫಣೀಂದ್ರನಂ ಫಣಿಶಯನಾ: ಜಗನ್ನಾವಿ, ೩. ೧೦೪)

ಫಣೀಂದ್ರ
ಆದಿಶೇಷ (ಪಡೆಮೆಚ್ಚೆ ಗಂಡನ ಗಂಡಗಾಡಿಯಂ ಕಂಡು ಫಣೀಂದ್ರನ ಕನ್ನೆ ಕನಕಲತೆಯೆಂಬ ನಾಗಕನ್ನೆ ಕಣ್ಬೇಟಗೊಂಡು: ಪಂಪಭಾ, ೪. ೧೫ ವ)

ಫಣೀಂದ್ರಕೇತು
ಸರ್ಪಕೇತನ, ದುರ್ಯೋಧನ (ಆಂ ಮರುಳೆನೊ .. .. ನೀಂ ಮರುಳಯೋ ಪೇೞ ಪೇೞದೊಡೆ ಪೋಗದಿರು ಈಶ್ವರನಾಣೆ ಎಂದು ಪುಲ್ಮರುಳ್ ಇನಿಸಾನುಮಂ ತಗೆದು ಕಾಡಿದುದಲ್ಲಿ ಫಣೀಂದ್ರಕೇತುವಂ: ಪಂಪಭಾ, ೧೩. ೫೫)

ಫಣೀಂದ್ರಾಲಯ
ನಾಗರಾಜನ ಮನೆ ಅಂದರೆ ಪಾತಾಳಲೋಕ (ಬಾಳದಿನೇಶಬಿಂಬದ ನೆೞಲ್ ಜಲದೊಳ್ ನೆಲಸಿತ್ತೊ ಮೇಣ್ ಫಣೀಂದ್ರಾಳಯದಿಂದಮುರ್ಚಿದ ಫಣಾಮಣಿ ಮಂಗಳರಶ್ಮಿಯೋ: ಪಂಪಭಾ, ೧. ೯೬)

ಫಲ
ಹಣ್ಣು (ಪುಷ್ಫಫಲಪತ್ರಶಾಖಾ ನಿಮಿತ್ತಂ ವನಮಂ ತೊೞಲ್ವ ಮುನಿಕುಮಾರರಂ ಕೊಲ್ವುದುಮದಂ ಕಂಡು ದುರ್ವಾಸಂ ಮುಳಿದು: ಪಂಚತಂತ್ರ, ೩೬೮ ವ); ಪ್ರಯೋಜನ (ಕೊಂಬ ಕಾರ್ಯವನೂ, ಕುಡುವಕಾರ್ಯವನೂ, ಮಾಡುವಕಾರ್ಯವನೂ ಇವೆಲ್ಲವನ್ನೂ, ಆ ಹೊತ್ತೇ ಮಾಡದಿರ್ದೊಡೆ ಕಾಲವಾ ಫಲವಂ ಕಿಡಿಸುವುದು: ಪಂಚತಂತ್ರ, ೩೭೧, ಶ್ಲೋಕ ೧೭೮ ಟೀಕೆ); ಫಲಿತಾಂಶ (ಹಿರಣ್ಯರೋಮನಾ ಪಕ್ಷಿಗಳಂ ಕಾದ ಪುಣ್ಯದ ಫಲವೆನಿತಾದೊಡಂ ತನ್ನ ಮುನ್ನಿನ ದುಷ್ಕತವನನುಭವಿಸಿದಲ್ಲದೆ ಪೋಗದೆಂಬುದನಱಪುವಂತೆ: ಪಂಚತಂತ್ರ, ೪೨೫ ವ)

ಫಲಕ
ಹಣ್ಣು (ನವಕಳಿಕಾಂಕುರಪ್ರಕರಮಂ ನವಕೋಕಿಲಕುಟ್ಮಲಂಗಳಂ ನವಫಲಕಂಗಳಂ .. .. ತೋಱದುವಂದಿನ ಬಂದ ಮಾವುಗಳ್: ಅಜಿಪು, ೬. ೨೪); ಗುರಾಣಿ (ಉಗ್ರದಾಡೆ ಅಸಿ ಫಲಕಂ ಚಲ್ಲಣದುಡೆ ಪೊಂದೊಡರ್ ಒಪ್ಪಲ್ ರಣಧೀರನೆನಿಪ್ಪ: ತ್ರಿಷಷ್ಟಿಪು, ೩೩. ೩)

ಫಲಪೂರ
ಮಾದಳ (ಫಲಪೂರಂ ಜನ್ಮಸಾಫಲ್ಯಸಂಸ್ಥಿತಿಯಂ ಮಾಡಿದುದೆಂದು ನೋಡಿದಳಲಂಪಿಂ: ಪುಷ್ಪದಂಪು, ೩. ೧೦೬)

ಫಲವತಿ
ಗರ್ಭಿಣಿ (ಪಲಕಾಲಂ ಪುಷ್ಪವತಿಯೆನಾದಪೆನೆಂದುಂ ಫಲವತಿಯಾದಪೆನಿಲ್ಲ ಎಂದು ಲತಾಲಲಿತಾಂಗಿ ಬಾಡಿ ಪಾಡೞದೆಂಗುಂ: ಸುಕುಮಾಚ, ೯. ೯೮)


logo