logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಧ್ಯಾನ
ಚಿಂತನೆ (ಧ್ಯಾನದೊಳಭವಂ ನೆಱೆದಿನಿಸಾನುಮನರೆಮುಚ್ಚಿ ಕಣ್ಗಳಂ: ಪಂಪಭಾ, ೮. ೧೩)

ಧ್ಯಾನಂಬೆಱು
ಧ್ಯಾನಮಾಡು (ಭಕ್ತಿಯಿಂ ತತ್ಪದ ಧ್ಯಾನಂಬೆತ್ತು ದಯಾಬ್ಧಿಯಂ ಘನತಪಂಗೆಯ್ದೊಚ್ಚತಂ ಮಚ್ಚಿಪೆಂ: ಶಬಶಂವಿ, ೨. ೮೯)

ಧ್ಯಾನಚಕ್ರ
[ಜೈನ] ಚಿಂತನೆಯಿಂದ ಹುಟ್ಟುವ ಚಕ್ರ (ಆ ಮುನಿಯ ಮನೋಗಾರದೊಳ್ ಧ್ಯಾನಚಕ್ರಂಂ ಪುಟ್ಟತ್ತು ಆ ರಾಜ್ಯಾಶ್ರಮಮುನಿಯ ಆಯುಧಾಗಾರದೊಳ್ ಚಕ್ರರತ್ನಂ ಪುಟ್ಟಿತ್ತು: ಆದಿಪು, ೬. ೨೪ ವ)

ಧ್ಯಾನಚತುಷ್ಟಯ
[ಜೈನ] ಆರ್ತ, ರೌದ್ರ, ಧರ್ಮ, ಶುಕ್ಲ ಎಂಬ ನಾಲ್ಕು ಬಗೆಯ ಧ್ಯಾನಗಳು (ಆರ್ತ ರೌದ್ರ ಧರ್ಮ ಶುಕ್ಲಾಭಿಧಾನಚತುಷ್ಟಯಮುಮಂ: ಸುಕುಮಾಚ, ೩. ೩೯ ವ)

ಧ್ರವ
ಏಳು ಬಗೆಯ ತಾಳಕ್ರಮಗಳಲ್ಲಿ ಒಂದು (ಧ್ರವ ಮಟ್ಠೆಯಂ ಪಡಿಮಟ್ಠೆಯಂ ಅಟ್ಟತಾಳ ಎಕ್ಕತಾಳ ರೂಪಕಂ ರಚ್ಚೆಯ ಎಂಬ ಏೞುಂ ತೆಱದ ತಾಳಕ್ರದಿಂದ: ಧರ್ಮಪ, ೨. ೨೦ ವ)

ಧ್ರುವ
ಸ್ಥಿರ (ಧ್ರುವಂ ಸನಾತನಂ ನಿತ್ಯಂ ಅವಿನಶ್ವರ: ಅಭಿಧಾವ, ೧. ೩. ೨೦); ಒಂದು ನಕ್ಷತ್ರ (ಹಾರಲತೆಯಂತೆ ಕಂಠಯೋಗ್ಯಮುಂ ಗ್ರಹಪಂಕ್ತಿಯಂತೆ ಧ್ರುವಪ್ರತಿಬದ್ಧಮುಂ .. .. ಅಪ್ಪ ಗೀತೆಯಿಂ: ಕಾದಂಬ, ೪. ೫೪ ವ); ಒಂದು ತಾಳದ ಹೆಸರು (ಸಾಮಾನಿಕ ಜನತತಿ ಚೇತೋಮಂ ಪ್ರಾಸಾದಿಕ ಅಂತರ ಆಕ್ಷೇಪಕ ವಿನಿಷ್ಮಾಮಪ್ರವೇಶ ಗಾನರಸಾಮೃತಮೆಸೆಗುಂ ಧ್ರುವಪ್ರಯೋಗಾನುಗತಂ: ಅಜಿತಪು, ೫. ೧೦); ಆಕಾಶ (ಉರುವಣೆಯಿಂದ ಎೞ್ದು ಧ್ರುವಮಂಡಲದೊಳ್ ವಿಜೃಂಭಿಪ ಓಂಕಾರಮೂರ್ತಿಯಂ ಕಾಣ್ಬ ಸದ್ವಿವೇಕದಂತೆ: ಉದ್ಭಟಕಾ, ೪. ೬ ವ)

ಧ್ರುವಂ
ತಪ್ಪದೆ (ಅವನೋದುವನಿತು ಬುದ್ಧಿಯೆ ತವುತಂದೊಡೆ ಪಂಚಪದದ ನಾಮಾಕ್ಷರಮಂ ಧ್ರುವಂ ಓದುವುದವು ತೊಡರ್ವುದುಮವಶ್ಯಂ ಓದಲಸದವಱ ಮೊದಲಕ್ಕರಮಂ: ಆದಿಪು, ೨. ೫೫)

ಧ್ರುವಕ್ಷೇತ್ರ
ಕುದುರೆಯ ದೇಹದ ಮೇಲಿನ ರೋಮದ ಹತ್ತು ಸುಳಿಗಳಿರುವ ಜಾಗ (ಸಂಗತ ದಶಧ್ರುವಕ್ಷೇತ್ರಂಗಳ್ ಶುಭಲಕ್ಷಣಂಗಳ್ ಅಮೃತೋದ್ಭವವಾಹಂಗಳ್ ಅಜಮೃಗ್ಯುಳೂಕಭವಂಗಳ್ ಪದಿನೆಂಟು ಕೋಟಿ ಜಾಶತ್ಯಶ್ವಂಗಳ್: ಶಾಂತಿಪು ೧೦. ೧೨೮)

ಧ್ವಂಸನ
ಬೀಳು, ನಾಶ [ಮಾಡುವುದು] (ದಶಮುಖಧಸನ ಸೇವಾಸಮಾಜದಂತೆ ಪ್ಲವಗತಿಪ್ರಕೀರ್ಣಮುಂ: ಕುಸುಮಾಕಾ, ೧. ೨೨ ವ)

ಧ್ವಜ
ಪತಾಕೆ (ಆದಿತ್ಯಂ ಮಸುಳ್ವನ್ನೆಗಂ ಧ್ವಜಘಟಾಟೋಪಂಗಳಿಂದಂ ಲಯಾಂಭೋದಂಗಳ್ ಕವಿವಂತೆವೋಲ್ ಕವಿವುದುಂ ಕಾಲ್ಗಾಪು ಕಾಲ್ಗಾಪಿನೊಳ್ ಜೋದರ್ ಜೋದರೊಳ್ .. .. ಅಗುರ್ವಪ್ಪನ್ನೆಗಂ: ಪಂಪಭಾ, ೧೦. ೯೩)


logo