logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಧೃತಿಗೆಡು
ಧೃತಿಗುಂದು (ಮದನಮದೋದ್ರೇಕದಿಂ ಎನ್ನಿದಿರೊಳ್ ಧೃತಿಗೆಟ್ಟ ಸಿಗ್ಗಿನಿಂ ತನ್ನೊಳ್ ಪೊಲ್ಲದಂ ಎತ್ತಾಚರಿಸುಗುಮೋ: ಕಾದಂಸಂ, ೪. ೫೫)

ಧೃಷ್ಟ
ಧೈರ್ಯವುಳ್ಳವನು (ಧೃಷ್ಟಂ ವರವಕ್ರೋಕ್ತಿ ವಿಶಿಷ್ಟಂ .. .. ಎನಿಪ್ಪ ದೂತಮುಖ್ಯನಂ: ಪಾರ್ಶ್ವನಾಪು, ೨. ೫೦); ಉದ್ಧಟ (ಧೃಷ್ಟನಾತಂ ವಿಯಾತಂ: ಅಭಿಧಾವ, ೨. ೧. ೬)

ಧೇನುಕ
ಕತ್ತೆಯಾಕೃತಿಯ ಒಬ್ಬ ರಾಕ್ಷಸ (ಧೇನುಕನೆಂಬ ರಾಶಭರಾಕ್ಷಸಂಕಾದಿರ್ಪಂ: ಜಗನ್ನಾವಿ, ೪. ೩೯ ವ)

ಧೈರ್ಯಕ್ಷರಣೆ
ಮನಸ್ಸಿನ ಅಸ್ಥಿರತೆ (ಅಂತು ಕಂತುಶರ ಪರವಶನಾಗಿ ಧೈರ್ಯಕ್ಷರಣೆಯುಂ ಇಂದ್ರಿಯಕ್ಷರಣೆಯುಂ ಒಡನೊಡನಾಗೆ: ಪಂಪಭಾ, ೨. ೪೨ ವ)

ಧೈವತ
ಸಂಗೀತದ ಸಪ್ತಸ್ವರಗಳಲ್ಲಿ ಆರನೆಯದು (ಶೃಂಗಾರಾರ್ದ್ರಂ ಕಕುಭಜನಿತಂ ಧೈವತಂ ಸಂಗ್ರಹನ್ಯಾಸಾಂಗಂ: ಲೀಲಾವತಿ, ೨. ೩೦); ನೋಡಿ, ಸಪ್ತಸ್ವರ

ಧೋಧೂಯಮಾನ
ಬೀಸುತ್ತಿರುವ (ಧೋಧೂಯಮಾನ ಧವಳಚಾಮರಸಹಸ್ರಸಂಛಾದಿತ: ಆದಿಪು, ೧೧. ೧೪ ವ)

ಧೌತ
ತೊಳೆದ, ನೆನೆದ (ಒಗೆತರ್ಪ ಬಹುಳ ಬಾಷ್ಪಾಂಬುಗಳಿಂ ಧೌತಮಾದುವೇಕೆಯೋ ನಿನ್ನೀ ಸೊಗಯಿಪ ಕಪೋಲ: ಕಾದಂಬ, ೨. ೪೧); ಶುಭ್ರ (ಸುರಭಿಜಲಪರಿರಚಿತಸ್ನಾನರುಂ ಪರಿವೃತಶುಭ್ರವಸನಸಮಂಚಿತ ಕೋಮಳಕಳೇವರರುಂ: ರಾಜಶೇವಿ, ೪. ೨೬ ವ)

ಧೌತಾಸಿನಿಭ
ತೊಳೆದ ಕತ್ತಿಯಂತಿರುವ (ಧೌತಾಸಿನಿಭನಭೋಮಂಡಳನುಂ ಜನಿತಜಗಜ್ಜನ ಆನಂದನುಂ: ಆದಿಪು, ೧೦. ೬೭ ವ)

ಧೌರೇಯ
ಜವಾಬ್ದಾರಿ ಹೊತ್ತವನು (ವಿಶ್ವವಿಶ್ವಂಭರಾಧಾರಣಾ ಧವರೇಯನುಂ ಆಸಾದಿತ ಯುವರಾಜಪದವಿವಿರಾಜನುಂ: ವರ್ಧಮಾಪು, ೬. ೬೮ ವ)

ಧ್ಯಾತೃ
ಧ್ಯಾನಮಾಡುವವನು (ಧ್ಯಾನಂ ಧ್ಯೇಯಂ ಧ್ಯಾತೃ ಫಲಮೆಂದು ಚತುರಂಗಮಕ್ಕುಂ: ಅಜಿತಪು, ೮. ೨೯ ವ)


logo