logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಧುರಭರ
ಯುದ್ಧಕಾರ್ಯ (ಕರೆದೊಡೆ ಜೂದಿಂಗಂ ಧುರಭರಕೆ ಆಖೇಟಕ್ಕೆ ಭೂಭುಜಂಗೆ ಆಗದು ಮೆಯ್ಗರೆದಿರಲೆಂಬ ಪುರಾತನ ಗುರುವಚನಂ ತನಗೆ ನಿಟ್ಟೆಪಟ್ಟುದಱಂದಂ: ಪಂಪಭಾ, ೬. ೭೧)

ಧೂತಪಾಪೆ
ಅಘನಾಶಿನಿ (ಪರಿಗತ ಕೃಷ್ಣವೇಣಿಯುರರೀಕೃತಪುಷ್ಕರೆ .. .. ಗೋಮತಿ ಧೂತಪಾಪೆ ಭಸುರಲೋಕಪಾವನೆ: ರಾಜಶೇವಿ, ೨. ೭)

ಧೂಪ
ಸುವಾಸನೆ (ಧೂಪದ ಸುಯ್ಯುಮಂ ರತಿಯ ಸೌಭಾಗ್ಯಮುಮಂ ಮನೋಮಥನ ಮದನ ಮೋಹನ ಸಂತಾಪನ ವಶೀಕರಣಂಗಳೆಂಬ ಕಾಮದೇವಂ ಅಯ್ದು ಅರಲಂಬಿಂ ಶಕ್ತಿಗಳುಮಂ ಒಂದುಮಾಡಿ ಲೋಕಮೆಲ್ಲಮಂ ಮರುಳ್ಮಾಡಲೆಂದು ಪೆಣ್ಮಾಡಿದಿನಕ್ಕುಂ: ಪಂಪಭಾ, ೪. ೭೫ ವ)

ಧೂಪಗುಂಡಿಗೆ
ಧೂಪದ ಪಾತ್ರೆ [ಸೂರ್ಯಕಾಂತದ ಧೂಪಗುಂಡಿಗೆಯೊಳಳವಱಯ ಸೆಜ್ಜೆವಳನಿಕ್ಕಿದ ಕೇಶಸಂಸ್ಕಾರಕಾಳಾಗರುಧೂಪಂ: ಆದಿಪು, ೫. ೨೨ ವ)

ಧೂಪೋದ್ಧಾರ
ಧೂಪ ಸಮರ್ಪಣೆ (ಮೂಱುಂ ಪೊತ್ತುಂ ಅರ್ಚನಾಪುರಸ್ಸರಂ ಧೂಪೋದ್ಧಾರಂಗೆಯ್ಯೆ: ಆದಿಪು, ೫. ೨೩)

ಧೂಮ
ಹೊಗೆ (ಕರಂಗಳಡಂಗಿ ಕಿಲುಂಬುಗೊಂಡ ಕನ್ನಡಿಗೆಣೆಯಾಯ್ತು ಭಾನುವಳಯಂ ದಿವಿಜಾಪಗೆ ನೋಡೆ ನೋಡೆ ಕರ್ಪಡರ್ದೆಣೆಯಾದುದು ಆ ಯಮುನೆಗೆ ಅಗ್ಗದ ಯಾಗದ ಧೂಮದ ಏೞ್ಗೆಯೊಳ್: ಪಂಪಭಾ, ೬. ೩೬)

ಧೂಮಜ್ವಾಲೆ
ಹೊಗೆಸಹಿತವಾದ ಬೆಂಕಿ (ನೆಗೆವ ಧೂಮಜ್ವಾಲೆಗಳ್ ಬಿೞ್ದ ಪೆರ್ಗಿಡಿಗಳ್ ಪೊಣ್ಮುವ ಫೂತ್ಕ್ರಿಯಾರಭಸಂ ಆದಂ ಭೀತಿಯಂ ಮಾಡೆ: ಆಚವರ್ಧ, ೧೪. ೬೮)

ಧೂಮಧ್ವಜ
ಹೊಗೆಯ ಬಾವುಟವುಳ್ಳವನು, ಅಗ್ನಿ (ಜೀಮೂತವಿಮುಕ್ತ ಧಾರೆಗಳಿಂದಂತಾ ಮುನಿಜನಾಪಕಾರಕ ಧೂಮಧ್ವಜನೆಯ್ದೆ ನಂದಿ ಪೋದತ್ತಾಗಳ್: ನೇಮಿನಾಪು, ೬. ೩೭)

ಧೂಮಪ್ರಭೆ
[ಜೈನ] ಏಳು ನರಕಗಲಲ್ಲಿ ಒಂದು ನರಕ (ಮೂಱು ಲಕ್ಕೆ ಬಿಲದಿಂ ಪುದಿರ್ದನೆಯ್ದನೆಯದೆನಿಪ ಧೂಮಪ್ರಭೆಯೊಳ್: ಮಲ್ಲಿನಾಪು, ೧೩. ೧೧೯)

ಧೂಮಮಾಳೆ
ಹೊಗೆಯ ಪಂಕ್ತಿ (ಭ್ರಾಜಿತ ಧೂಮಮಾಳೆಮಧುಪಾವಳಿ ಕೇಸುರಿ ಕೆಂದಳಿರ್ ತದುವೀಘಜಮುದಗ್ರವಹ್ನಿಯೆನೆ ಪೊತ್ತಿಸಿದಂ ದೀಪಮೆನಿಪ್ಪುವು ತಳ್ತಶೋಕೆಗಳ್: ಶಾಂತಿಪು, ೭. ೧೩೨)


logo