logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಧೀಂಕಿಡು
ಹಾರು, ನೆಗೆ (ಇದೊಂದು ಧೂಲಿಚಿತ್ರದ ಖಣವೆಂದು ಮೈಯೊರಸಿ ಧೀಂಕಿಡುವರ್ ಕಡೆಯೊಳ್ ಲತಾಂಗಿಯರ್: ಅನಂತಪು, ೬. ೪೪)

ಧೀಂಕು
ತುಳಿತ (ಧೀಂಕಿಗೆಯ್ದದು ಧಾರಿಣಿ ಮುಳಿಸಿಂಗೆಯ್ದದು ಮೂಱುಲೋಕಂ ಆ ಮದಗಜದಾ: ನೇಮಿನಾಪು, ೮. ೮೪)

ಧೀಮಂತ
ಮೇಧಾವಿ (ಮಾಹಾ ಮಹಿಭುಜರ್ ಶೌರ್ಯೋಗ್ರ ಧೀಮಂತರ್ ಅಂಕದ ಸಾಮಂತರ್ ಉದಾರವೀರವಿಭವ ಶ್ರೀಮನ್ನೆಯರ್: ಪುಷ್ಪದಂಪು, ೮. ೩೯)

ಧೀರ
ಧೈರ್ಯವಂತ (ಧೀರಂ ಮದೀಯ ತನಯಂ ಮಾರನಿಭಂ ತೊರಷೆದನೆನ್ನ ಕಾರಣದಿಂದಂ ಚಾರುತರಸ್ತ್ರೀಯರಂ: ಕರ್ಣನೇಮಿ, ೩. ೨೮)

ಧೀರತೆ
ಧೈರ್ಯ (ಧೀರತೆಯನೊಡನೆ ತೊರೆದು ತಪೋರಮಣ ಸಹಸ್ರಮಂತು ಬಳಸಿರ್ಪಿನೆಗಂ: ಅನಂತಪು, ೯. ೭೮)

ಧೀವರ
ಬೆಸ್ತ (ತೊಡರೆ ಮೀನ್ ಮೃಗಲಾಂಛನ ಧೀವರಂ ತಡಿಗೆ ಬೀಸಿದ ಜಾಲಮಂ: ಲೀಲಾವತಿ, ೩. ೨)

ಧೀವರೆ
ಬೇಟೆಗಾತಿ ಬನದ ಧಿವರೆಯರ್ಕಳ ಕಣ್ಣ ಬೆಳ್ಪು ಬೆಳ್ಳಂಗೆಡೆದತ್ತೊ ಪೇೞಂ ಎನೆ ನಿರ್ಮಳಮಾದುದು ನೀರಜಾಕರಂ: ನೇಮಿನಾಪು, ೫. ೧೦೦)

ಧುನಿ
ನದಿ (ಅನಿಲಹತಿಯಿಂದಂಬರ ಧುನಿಯಿಂದೆ ಸಿಡಿಲ್ದ ಫೇನಪಿಂಡಂಗಳ್: ತ್ರಿಷಷ್ಟಿಪು, ೯. ೨೪)

ಧುರ
ಯುದ್ಧ (ಬಧಿರಿತ ಸಮಸ್ತ ದಿಕ್ತಟಂ ಅಧಿರಿತ ಸರ್ವ ಇಭ್ಯಗರ್ವಿತಂ ಕ್ಷುಭಿತಾಂಭೋಸಲಿಲಂ ಪರೆದುದು ಧುರ ವಿಧಾನ ಪಟುಪಟಹ ಕಹಳ ಭೇರೀರಭಸಂ: ಪಂಪಭಾ, ೧೨. ೧೭೧)

ಧುರಂಧರ
ಹೊಣೆಗಾರ, ಭಾರ ಹೊತ್ತವನು (ಬಲದೇವ ವಾಸುದೇವರಾಗಿ ಪುಟ್ಟಿ ನಿಜಗುರುಪರೋಕ್ಷದೊಳ್ ಧರಾಭಾರಧುರಂಧರರಾಗಿರೆ: ಆದಿಪು, ೩. ೭೬ ವ)


logo