logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಧಾರೆಗೆದಱು
ಪ್ರವಾಹದಂತೆ ಹರಡಿಕೊ (ಧಾರೆಗೆದಱ ಪೇರೈಸಿ ಸೂಸುವ ಉಭಯಕಟತಟದ ಸೊರ್ಕುಕದಡಿನ ತೆರ್ಕೆಗಡಲ್ಗಳ್: ಅನಂತಪು, ೧೩. ೨೧ ವ)

ಧಾರ್ತರಾಷ್ಟ್ರ
ಕೌರವ, ಧೃತರಾಷ್ಟ್ರನ ಮಗ, ದುರ್ಯೋಧನ (ಅದ್ಭುತನಟನಿಟಿಲಾಳೋಲಕೀಲಾಕ್ಷಿವೊಲ್ ದಳ್ಳಿಸೆ ಕೋಪಾರಕ್ತನೇತ್ರಂ ನಿಜಭುಜಗದೆಯಂ ತೂಗಿದಂ ಧಾರ್ತರಾಷ್ಟ್ರಂ: ಗದಾಯು, ೭. ೩೦); ಕೊಕ್ಕು ಕಾಲುಗಳು ಕಪ್ಪಾಗಿರುವ ಒಂದು ಬಗೆಯ ಹಂಸ (ಚರಣಾನನಂಗಳ್ ಆಧೂಸರಮಾಗಿರೆ ಮಲ್ಲಿಕಾಕ್ಷಂ ಅವಱೊಳ್ ಕರ್ಪೊಂದಿರೆ ಧಾರ್ತರಾಷ್ಟ್ರಂ ತಾಮ್ರರುಚಿಯಾದಂದು ರಾಜಹಂಸನೆನಿಕ್ಕುಂ: ಅಭಿಧಾವ, ೧೯. ೧೯)

ಧಾರ್ಮಿಕ
ಉಪಾಸಕ, ಸಾಧಕ (ಹಾಸ್ಯ ಬೀಭತ್ಸಾದಿ ನಾನಾ ರಸಂಗಳಿಂದೊಂದಿದ ಜರತ್ ದ್ವರವಿಳ ಧಾರ್ಮಿಕಜನಂಗಳಿಂ: ಕಾದಂಬ, ೮. ೪)

ಧಾರ್ಷ್ಡ್ಯ
ದಿಟ್ಟತನ (ಸ್ತವಂಗೆಯ್ವುದದೆಮಗೆ ದಲ್ ಗೌರವಂ ಬಿನ್ನಪಂಗೆಯ್ವುದೆ ಧಾರ್ಷ್ಟ್ಯಂ: ಕಾದಂಬ, ೬. ೧೨೩)

ಧಾವಳಿ
ಮಡಿಬಟ್ಟೆ (ಪಾರ್ವಂ ಧಾವಳಿಯಂ ಹಿಳಿದು ನಭದೊಳ್ ಒಣಗಿಕ್ಕಿದೊಡೆ: ಸಮಯಪ, ೧೨. ೩೨)

ಧಾಳಾಧಾಳಿ
ಧಾವಿಸಿ ಬರು (ದೇವತಾರಾಧನೆಗೆ ಕಾಲಾತಿಕ್ರಮಮಾಗಲೀಯದೆ ಧಾಳಾಧಾಳಿಯಲ್ಲಿ ಬರ್ಪ ಪರಿಚಾರಕರ ನೆರವಿಯುಮಂ: ಪಂಚತಂತ್ರ, ೧೯೦ ವ)

ಧಿಕ್ಕರಿಸು
ನಿಂದಿಸು (ಪಿರಿಯರೆವೆಂದು ಧಿಕ್ಕರಿಸಿ ಬಯ್ವುದು ತಕ್ಕುದೆ: ಶಬ್ದಮದ, ೩೨೧, ಪ್ರ ೨)

ಧಿರು
ಭಲೆ (ಧಿರು ಮಾಧವಿಯೂರ್ವಸಿ ಹೋಯಿರೆ ನಚ್ಚಣಿ ರಂಭೆ ಭಲ ತಿಲೋತ್ತಮೆ .. .. ಎನೆ ಪೊಗರಲ್ತೆ ಸುರಭರತಿಯರ್: ಅನಂತಪು, ೪. ೯೧)

ಧಿಷಣ
ಪ್ರತಿಭಾವಂತ (ಧಿಷಣರ ಕೃತಿಗಳೊಳೆಸವ ಅಭಿಲಷಿತಗುಣಂಗಳನೆ ಬಿಸುಟು ಮಾತ್ಸರ್ಯ ಮಹಾವಿಷಮಮತಿಯಿಂದೆ ದೋಷಾಮಿಷಮನೆ ಪೊರ್ದಿರ್ಪುವಲ್ತೆ ಕುಕವಿಬಕಂಗಳ್: ಆದಿಪು, ೧. ೨೨)

ಧಿಷ್ಣ್ಯ
(ಆ ಪುರವರೇಣ್ಯಂ ಧಿಷ್ಣ್ಯಮಾಗಿಯುಂ ನಕ್ತಂಚರಯುಕ್ತಮಲ್ತು ಅಗಣ್ಯ ಪುಣ್ಯಜನಮಯಮಾಗಿಯುಂ ವಿಬುಧರಹಿತಮಲ್ತು: ಶಾಂತೀಶ್ವಪು, ೧. ೧೩೨ ವ)


logo