logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಧಾತಕೀಷಂಡ
[ಜೈನ] ಪುಷ್ಕರದ್ವೀಪದ ಒಂದು ಭಾಗ; ಧಾತಕೀವೃಕ್ಷ ಹೇರಳ ವಾಗಿರುವ ಜಾಗ (ಧತಕೀಷಂಡಂ ಈಕ್ಷಣಭದ್ರಂ ಸಸಮುದ್ರಮಂ ಬಳಸಿ ಜಂಬೂದ್ವೀಪವಿನ್ಯಾಸಮಂ: ಚಂದ್ರಪ್ರಪು, ೧. ೭೨)

ಧಾತು
ಲೋಹ (ಸಧಾತು ಕುಭೃದ್ಯುಗಕ್ಕೆ ಸಿಂದೂರಿತಗಂಧಸಿಂಧುರಯುಗಕ್ಕೆ ಎಣೆಯೆಂಬಿನಂ ಅಣ್ಮಿ ಕಾದಿದರ್ ಕೌರವರಾಜನುಂ ಕುರುಕುಲಾಂತಕನುಂ: ಗದಾಯು, ೮. ೧೭); ರೇತಸ್ಸು, ವೀರ್ಯ (ಮಸೆವುದು ಮಾಸಲಿರ್ದ ಪೞವೇಟಮಂ ಇಚ್ಛೆಯ ಬಿಚ್ಚತಿಕ್ಕೆಯಂ ಪೊಸೆಯಿಪುದು ಒಳ್ಕಮಂ ನಡೆಪುತಿರ್ಪುದು ಧಾತುವಂ ಒಳ್ಳಿತೆಯ್ದೆ ಪಾಟಿಸುವುದು ಕೂಟದೊಳ್ ಕುಶಲನಪ್ಪುದು: ಶಾಂತಿಪು, ೮. ೯೧)

ಧಾತುಮಳ
[ಜೈನ] ಇಂದ್ರಿಯಗಳಿಂದ ಹುಟ್ಟುವ ಕೊಳೆ, ಬೆವರು ಮುಂತಾದವು (ಧಾತುಮಳದೋಷರಹಿತಂ ವೀತನಖ ಶ್ಮಶ್ರು ಕೇಶ ಲೋಮಂ ಶೋಭಾನ್ವೀತಪರಿಪೂರ್ಣಯೌವನಂ: ಆದಿಪು, ೬. ೩೮)

ಧಾತೃಪುತ್ರ
ಬ್ರಹ್ಮಪುತ್ರ, ನಾರದ (ಸರಸೀಜೋದರಂ ಆದರದಿಂದಂ ಧಾತೃಪುತ್ರನಂ ಬೆಸಗೊಂಡಂ: ಕರ್ಣನೇಮಿ, ೧೧. ೭೨)

ಧಾತ್ರ
ಬ್ರಹ್ಮ (ಏಂ ಜಾಣನೋ ಧಾತ್ರಂ ರೂಪನಿಷ್ಪಾದನವಿಧಿಯೊಳಿವಂ ಮುನ್ನಮೇಂ ನೋಂಪಿಯಂ ನೋಂತನೊ: ಅದಿಪು, ೩. ೯೧)

ಧಾತ್ರಿ
ಸಾಕುತಾಯಿ, ದಾದಿ (ಧಾತ್ರಿಯೊಳನ್ಯರ ತೇಜೋಮಾತ್ರಮನಾಂ ಸಲಿಸೆನೆಂಬ ತೆಱದಿಂ ಪೊಯ್ಯಲ್ ಧಾತ್ರಿಯ ಕಯ್ಯಿಂ ನಿಮಿರ್ವಂ ಕ್ಷತ್ರಶಿಖಾಮಣಿ ಮಣಿಪ್ರದೀಪಾಂಕುರಮಂ: ಪಂಪರಾ, ೩. ೧೨೫); ಭೂಮಿ (ರಥದಿಂ ಧಾತ್ರಿಗೆ ಪಾಯ್ದು ಕೊಂಡು ಗದೆಯಂ ಕೆಯ್ಸಾರ್ದುದು ಅಸ್ಮತ್ ಮನೋರಥಂ ಇಂದು ಎಂದು ಕಡಂಗಿ: ಪಂಪಭಾ, ೧೧. ೬೬); ನೆಲ್ಲಿ (ಧಾತ್ರೀತರು ಆಮಲಕ: ಅಭಿಧಾವ, ೧. ೮. ೧೨)

ಧಾತ್ರಿಕಾ[ಕೆ]
ದಾದಿ (ಅನಂತರಂ ಅಮರ ಧಾತ್ರಿಕಾನಿಕಾಯಮುಮಂ .. .. ಜಗತ್ಪತಿ ಪಿತೃಗಳುಮಂ ಬೀೞ್ಕೊಂಡು: ಅರ್ಧನೇಮಿ, ೮. ೧೬೭ ವ)

ಧಾತ್ರೀಜನ
ದಾದಿಯರು (ಗುರುಜನ ಅಭಿಷಕ್‌ಜನ ಗಣಕಜನ ಗಣಿಕಾಜನ ಧಾತ್ರೀಜನ ಕುಲಮಹತ್ತರಿಕಾಜನಮನಂ ಸಮರ್ಪಿಸುವುದುಂ ಅನಂತರಂ: ಮಲ್ಲಿನಾಪು, ೪. ೬೨ ವ)

ಧಾತ್ರೀಧರ
ಪರ್ವತ (ಮಹಾಪ್ರಾಸಾದದಂತಿರ್ಪುದು ಆವಗಂ ಆಶ್ಚರ್ಯಮನಪ್ಪುಕೆಯ್ದು ವಿಜಯಾರ್ಧಖ್ಯಾತ ಧಾತ್ರೀಧರಂ: ಶಾಂತೀಶ್ವಪು, ೮. ೭)

ಧಾತ್ರೀಫಳ
ನೆಲ್ಲಿಕಾಯಿ (ಪೆಸರ್ವೆತ್ತ ಧಾತ್ರಿಯಂ ನೀರಸಮಂ ಮಾಡಿತ್ತು ಮತ್ತೆ ಧಾತ್ರೀಫಳಮಂ ರಸಮಯಮಂ ಮಾಡಿತು ಮಾಗಿ: ಶಾಂತೀಶ್ವಪು, ೧೨. ೭೫ ಎ)


logo