logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಛದ್ಮಸ್ಥ
[ಜೈನ] ಕೇವಲಜ್ಞಾನಿಯಾಗಲು ಹಿಂದಿನ ಅವಸ್ಥೆಯಲ್ಲಿರುವವನು (ಪ್ರಥಮಶುಕ್ಲಧ್ಯಾನಪರಿಣತಿಯಿಂ ಕ್ಷೀಣಕಷಾಯವೀತರಾಗ ಛದ್ಮಸ್ಥ ಗುಣಸ್ಥಾನ ವ್ಯವಸ್ಥಿತನಾಗಿ: ಸುಕುಮಾಚ, ೮. ೬೨ ವ)

ಛದ್ಮಸ್ಥಕಾಲ
[ಜೈನ] ಛದ್ಮಸ್ಥ ಅವಸ್ಥೆಯಲ್ಲಿರುವವನು (ತತ್ ನೇಮೀಶ್ವರನುಂ ಛದ್ಮಸ್ಥಕಾಲಂ ಅಯ್ವತ್ತಾಱುದಿನಂ ಪೋಗೆ: ಕರ್ಣನೇಮಿ, ೧೩. ೮೩ ವ)

ಛದ್ಮಸ್ಥಗುಣಸ್ಥಾನ
[ಜೈನ] ಜ್ಞಾನಾವರಣ ಮತ್ತು ದರ್ಶನಾವರಣಗಳು ಛದ್ಮ, ಅದರಲ್ಲಿರುವವರು ಛದ್ಮಸ್ಥ; ೪ ರಿಂದ ೧೦ ಗುಣಸ್ಥಾನವರೆಗಿನವರು ಸರಾಗಛದ್ಮಸ್ಥರು, ೧೦ ರಿಂದ ೧೨ ರವರೆಗಿನವರು ವೀತರಾಗಛದ್ಮಸ್ಥರು (ವೀತರಾಗಛದ್ಮಸ್ಥಗುಣಸ್ಥಾನಂ ಏಕತ್ವವಿತರ್ಕವಿಚಾರಾಭಿಧಾನ ಪರಿಣತಂ ಅಪರಿಮಿತಪ್ರದೇಶನಿರ್ಜರಾದಿ ಕ್ರಿಯಾಕಳಾಫಂ: ಆದಿಪು, ೧೦. ೧೪ ವ)

ಛನ್ನ
ಆವರಿಸಿದ (ಉನ್ನತ ಧವಳಚ್ಛತ್ರಚ್ಛನ್ನ ವಿಯತ್ತಳನಂ ಇಂದುಕುಳತಿಳಕನಂ ಇಂತು ಅನ್ನೆಯದಿಂದ ಈ ಪೞುವಿನೊಳ್ ಎನ್ನರಸನಂ ಇಂತು ಬಿದಿಯೆ ತಂದಿಕ್ಕುವುದೇ: ಪಂಪಭಾ, ೨. ೨೨); ಮುಚ್ಚಿದ (ಸಿತಮೃದುಳಪ್ರಚ್ಛದಚ್ಛನ್ನ ಶಯ್ಯಾತಲದೊಳ್ .. .. ಸುಖಸೀನನಾಗಿರ್ದನಾಗಳ್: ಕಾದಂಸಂ, ೧. ೨೮)

ಛಪ್ಪಿಸು
ಆಕ್ರಮಣ ಮಾಡು (ವರ್ಗ ದ್ವಿತೀಯಾಕ್ಷರಂಗಳ್ಗೆ: ಛಲ್ಲಿ ಮಾಡಿದಂ [ಛಲ್ಲಂ ಮಾಡಿದಂ ಛರ್ಪಿಸಿದಂ ಛಪ್ಪಿಸಿದಂ: ಶಬ್ದಮದ, ೨೫ ವೃತ್ತಿ)

ಛರ್ದಿ
ವಾಂತಿ (ಚರಿಗೆವೊಲ್ಲೊಡೆ ಆರುಂ ನಿಱಸುವರಿಲ್ಲ ಮೂಱತ್ತು ನಿಱಸಿದೊಡಂ ಛರ್ದಿಯಕ್ಕುಂ: ವಡ್ಡಾರಾ, ಪು ೧೭೧, ಸಾ ೯)

ಛರ್ದಿಗೆಯ್
ವಾಂತಿಮಾಡಿಕೊ (ಸುವ್ರತೆಯರ್ ಎಂಬ ಆರ್ಯಿಕೆಯರ್ಗೆ ಆಹಾರದಾನಮಂ ಮಾಡಿದೊಡೆ ಅವರುಂ ಉಪವಾಸ ಶ್ರಮದಿಂ ಛರ್ದಿಗೆಯ್ಯೆ: ಶಾಂತೀಶ್ವಪು, ೮. ೧೩೨ ವ)

ಛರ್ದಿಸು
ಛರ್ದಿಗೆಯ್ (ಕೊಳ್ಳಿರೆ ನಿಮ್ಮ ಕೂೞಂ ಎನುತುಂ ಕೆಯ್ಯಂದಮೆರ್ದತ್ತ ಛರ್ದಿಸಿದಾಗಳ್: ಹರಿವಂಶ, ೯. ೩೦)

ಛಲ
ನೆಪ (ಉಪದೇಶಂಗೆಯ್ದು ಕಾವ್ಯಚ್ಛಲದಿಂ ಅಖಿಲ ಧರ್‍ಮಂಗಳಂ .. .. ಕಲ್ಪಾಂತಪರೀತ ಖ್ಯಾತಿಯಂ ತಾಳ್ದಿದ ಪರಮ ಕವಿಶ್ರೇಷ್ಠರಾದರ್: ಪಂಪರಾ, ೧. ೨೮)

ಛವಿ
ಕಾಂತಿ (ತನ್ನೊಳಗಣ ಪನ್ನಗನಂ ಮುಂ ನೀಂ ಪಿಡಿದು ಒಗೆಯೆ ಕಾಯಲಾಱದೆ ಪಿರಿದುಂ ಬನ್ನದ ಕರ್ಪೆಸೆದುದು ತೊಱೆಗೆ ಇನ್ನುಂ ಹರಗಳ ತಮಾಳ ನೀಳಚ್ಛವಿಯಿಂ: ಪಂಪಭಾ, ೫. ೫೪)


logo