logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಚಂದ್ರಿಕೆ
ಬೆಳೆದಿಂಗಳು (ಮದೀಯ ಮನೋಗತ ಕಾಮಸಾಗರದ ಒದವಿಂಗೆ ನಲ್ಲಳ ವಿಲೋಚನ ಚಂದ್ರಿಕೆಯೊಂದೆ ಸಾಲದೇ: ಪಂಪಭಾ, ೫. ೧೧)

ಚಂದ್ರೋಪಲ
ಚಂದ್ರಕಾಂತ (ಚಂದ್ರೋಪಲಸಿತ ಭಸಿತಾನಂತಕಾಂತೋತ್ತಮಾಂಗಂ .. .. ನಂದಿಕೇಶಂ: ರಾಜಶೇವಿ, ೧. ೧)

ಚಂಪಕ
ಸಂಪಿಗೆ (ನಱುಸುಯ್ಯ ಕಂಪಿನಿಂಪಿಂಗೆ ಎಱಗುವ ಮದಭೃಂಗಮಾಲೆ ಬಿೞ್ತರುತಿರೆ ಪೂತೆಱಗಿದ ಚಂಪಕಲತೆಯಂ ನೆಱೆ ಪೋಲ್ತಳ್ ವಿರಹಿದಹನ ದಾಹಿನಿಯಾಗಳ್: ಶಾಂತೀಶ್ವಪು, ೫. ೧೧೩); ಕೆಂಬಣ್ಣ (ಸಂಜೆಯ ಸೂೞ್ಗೆವಂದ ಚಂದ್ರಮನ ಸೊಂಪಿನಂತೆ ಚಂಪಕಮಾಗೆ ಪೂತ ಸಂಪಗೆಯ ಸಾಲ್ಗಳ್: ಅನಂತಪು, ೧. ೯೦ ವ)

ಚಂಪಕಮಾಲೆ
ಕೊರಳ ಆಭರಣ (ಪಿರಿದೊಂದುತ್ಸುಕ ಭಾವದಿಂ ಸರಿಗೆಯಂ ಕಾಲೊಳ್ ಕಟೀಸೂತ್ರಮಂ ಕೊರಲೊಳ್ ಚಂಪಕಮಾಲೆಯಂ: ಆದಿಪು, ೧೧. ೨೨)

ಚಂಪು
ಗದ್ಯಪದ್ಯ ಮಿಶ್ರಿತ ಕಾವ್ಯಪ್ರಕಾರ (ಎಲ್ಲರ್ ಅಱವಂತಿರೆ ಚಂಪುವೆನಿಪ್ಪ ಬಂಧದಿಂ ಕನ್ನಡದಿಂದೆ ಪೇಳ್ವೆದನಿದಂ ಓದುಗೆ ಕೇಳುಗೆ ಕೂರ್ತು ಸಜ್ಜನರ್: ಧರ್ಮಪ, ೧. ೩೭)

ಚಂಪೆಯ
ಡೇರೆ (ಮಡಲ್ಗೊಂಡ ಮಲ್ಲಿಗೆಯ ಮಂಡವಿಗಳೊಳಂ ಸಂಪಗೆಯ ಜೊಂಪದ ಚಂಪೆಯದೊಳಂ .. .. ಬಿಟ್ಟ ಬೀಡು: ಕಬ್ಬಿಗಕಾ, ೧೮೪ ವ)

ಚಂಬಕವಱೆ
ಒಂದು ಬಗೆಯ ಚರ್ಮವಾದ್ಯ (ಮೊರೆವ ಚಂಬಕವಱೆಯ ಮೊಳಗುವ ಪಳಹದ ಸೂಳೈಪ ನಿಸ್ಸಾಳದ: ರಾಜಶೇವಿ, ೬. ೧೧ ವ)

ಚಕಾರಚತುಷ್ಕ
ನಾಲ್ಕು ಚಕಾರಗಳು, ಚಕಾರ ಹೆಚ್ಚು ಬಳಸುವ ವ್ಯಾಸನ ವೈಶಿಷ್ಟ್ಯ (ಭಾರತಾದಿಯೊಳ್ ವಿರಚಿಸಿ ಪೇೞ್ವ ಪದ್ಯದ ಚಕಾರಚತುಷ್ಕ: ಸಮಯಪ, ೧೦. ೧೭೫)

ಚಕಿತ
ಭಯಗೊಂಡ (ಅಳುರ್ವ ಕೋಪಶಿಖಿಗಳ ನಡುವಿರ್ತಲೆವೊತ್ತಿದ ಪುಳ್ಳಿಯ ಪುೞುವೊಲಿರ್ದಂ ಅತಿಚಕಿತಚಿತ್ತಂ ಅಪರಾದಿತ್ಯಂ: ಗದಾಯು, ೧. ೨೩)

ಚಕೋರ
ಬೇಳುದಿಂಗಳನ್ನೇ ಕುಡಿಯುವುದೆಂದು ಹೇಳಲಾಗುವ ಒಂದು ಕಲ್ಪಿತ ಪಕ್ಷಿ (ಶುಕ ಕಾರಂಡ ಚಕೋರ ಸಾರಸ ಮಯೂರಾಕಾರದಿಂ ವ್ಯಾಘ್ರ ಸಿಂಹ ಕುರಂಗಾಂಬುಜ ವಕ್ರ ಮತ್ಸ್ಯ ಮಕರೇಭಾಕಾರದಿಂ ಚೆಲ್ವುವೆತ್ತು: ಸುಕುಮಾಚ, ೧೦. ೫೩)


logo