logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಚಂಡಾಂಶು
ಚಂಡರುಚಿ, ಸೂರ್ಯ (ದೀಪ್ಯಮಾನ ಪ್ರತಾಪಸ್ಥಗಿತಾಶಾಚಕ್ರಚಂಡಾಂಶುವಂ: ಆದಿಪು, ೮. ೨೬)

ಚಂಡಾತಕ
ಹೆಂಗಸರ ಒಂದು ಉಡುಪು (ಅರ್ಧೋರುಂ ಚಂಡಾತಕಂ: ಅಭಿಧಾವ, ೧. ೧೩. ೨೧)

ಚಂಡಾಮಯ
ತೀವ್ರವಾದ ಕಾಯಿಲೆ (ಕಂಡೊಡೆ ಪೆಸರ್ಗೊಂಡೊಡೆ ಕಿಡುಗುಂ ಚಂಡಾಮಯವೆನಿಪ ಔಷಧಮಂಡಳಿಯಿಂ ಸೇವ್ಯಮಲ್ಲಿ ಗಂದಿಗವಸರಂ: ಪುಷ್ಪದಂಪು. ೨. ೮೪)

ಚಂಡಾಲೆ
ಹೊಲೆಯ ಹೆಂಗಸು (ಕನ್ನೆ ಚಂಡಾಲೆ ದರ್ಶನತಾತ್ಪರ್ಯದೆ ರಾಜಕೀರಸಹಿತಂ ಬಂದಿರ್ದಳ್: ಕಾದಂಸಂ, ೧. ೧೨)

ಚಂಡಾಳ
ಹೊಲೆಯ (ಚಂಡಾಳಂ ತಾಂ ಹೊಲೆಯಂ: ಅಭಿಧಾವ, ೧. ೧೧. ೮೭)

ಚಂಡಾಳಿ
[ಚಂಡ+ಅಳಿ] ದುಷ್ಟ ದುಂಬಿ (ಚಂಡಾಳೀ ಚಂಡಗೀತಧ್ವನಿಯನೊದೆದು .. .. ಉಣ್ಮಿ ಪೊಣ್ಮಿತ್ತು .. .. ತೂರ್ಯಪ್ರಣಾದಂ: ಲೀಲಾವತಿ, ೩. ೫೮)

ಚಂಡಿ
ದುರ್ಗೆ (ಪುಳಿಂದಪತಿಯಾಡುವ ಬೇಂಟೆಗೆ ಬೆರ್ಚಿ ಪೋಗಿ ಚಂಡಿಯ ಮಱೆಯಂ .. .. ಪೊಕ್ಕು: ನೇಮಿನಾಪು, ೩. ೫೫)

ಚಂಡಿಕೆ
ಜುಟ್ಟು, ತಲೆಗೂದಲು (ಪಂಜರಮಂ ಪೊತ್ತಿರದೆೞ್ತಂದಂ ಚಂಡಿಕೆವೆರಸಿದ ಚಂಡಾಲಬಾಲಕಂ ಮತ್ತಿರ್‍ವಂ: ಕಾದಂಸಂ, ೧. ೧೫); ದುರ್ಗೆ (ಸರಸಿಜಭವಂಗೆ ವಿಷ್ಣುಗೆ ಸರಸಿಜಮಿತ್ರಂಗೆ ಶಿಖಿಗೆ ಚಂಡಿಕೆಗೆ ಈತಂ ಗುರು: ಸಮಯಪ, ೮. ೧೦೯)

ಚಂಡಿಸು
ಹಟಮಾಡು (ಚಂಡಿಪ ಚಪಲೆಯ ನುಡಿಗೇಗೊಂಡಳ್ ಹಿತಮತಮನೇಕೆ ಕೇಳವೊ ಕಿವಿಗಳ್: ಲೀಲಾವತಿ, ೧೪. ೪೭)

ಚಂದ
ಒಂದು ಜಾತಿಯ ಮರ (ಕುರವಕ ಚಂಪಕ ಅರ್ಜುನ ತಮಾಳ ಕುಚಂದನ ಚಂದ ನಾಗ ಜಂಬಿರ ಪನಸು ಆಮ್ರ ನಿಂಬ ಕುಟಜ ಆದಿ ಮಹಾಕುಜಸಂಕುಳಂಗಳಿಂ; ಹರಿವಂಶ, ೭. ೭); ಸೊಬಗು (ತಾನುಂ ಮಾಕಂದಮೆನಿಸಲ್ ನೆಗಳ್ಚಿದ ಚಂದಮನಾಂತಂತೆ ನೇಱಲಲ್ಲೆಸೆದಿರ್ಕುಂ: ರಾಜಶೇವಿ, ೨. ೪೬)


logo