logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಚತುರ್ವರ್ಗ
ನಾಲ್ಕು ಪುರುಷಾರ್ಥಗಳು (ಸಮನಿಪ ಧರ್ಮಕ್ಕವಿರುದ್ಧಂ ಅರ್ಥಂ ಅರ್ಥಕ್ಕೆ ಕಾಮಂ ಅವಿರುದಧಂ ಅನುಕ್ರಮದೊಳೆ ಕಾಮಕ್ಕಂ ಕಡೆಯ ಮೋಕ್ಷಂ ಅವಿರುದ್ಧಮೆನೆ ಚತುರ್ವರ್ಗಫಲಂ: ಅಜಿತಪು, ೨. ೪೭)

ಚತುರ್ವಲ
ಚತುರಂಗಬಲ ನೆರೆದು ಚತುರ್ವಲಂಬೆರಸು ಬಂದುಱದೊಡ್ಡಿದ ಗಂಡರಾರುಂ ಎನ್ನಱಯದ ಗಂಡರೇ: ಪಂಪಭಾ, ೧೧. ೮೯)

ಚತುರ್ವಾರ್ಧಿ
ನಾಲ್ಕು ಸಾಗರ (ದಾಂಟೆ ಕೀರ್ತಿ ಚತುರ್ವಾರ್ಧಿಯನಿರ್ದನಂದು ಸುಖದಿಂ ವಿದ್ವಿಷ್ಟವಿದ್ರಾವಣಂ: ಪಂಪಭಾ, ೩. ೮೫)

ಚತುರ್ವಾಸರ
(ಎನಗೆ ಇಂದಿಂಗೆ ಆಱುತಿಂಗಳ್ ಸಮನಿಸಿದಪುದಿಲ್ಲ ಎಲ್ಲಿಯುಂ ಬಂದಿಮಂಚಲ್ ಖನನಪ್ರಾರಂಭ ಚೌರ್ಯಾದಿಗಳ್ ಅನಶನಂ ಈಗಳ್ ಚತುರ್ವಾಸರಂ ಸುಕುಮಾಚ, ೭. ೧೮)

ಚತುರ್ವಿಂಶತಿ
ಇಪ್ಪತ್ತನಾಲ್ಕು (ಚತುರ್ವಿಂಶತಿ ಅರ್ಹತ್ ಪ್ರತಿಮಾವಿರಾಜಮಾನ: ಆದಿಪು, ೧೬. ೩೭ ವ)

ಚತುರ್ವಿಧದಾನ
[ಜೈನ] ಆಹಾರ, ಔಷಧ, ವಿದ್ಯೆ ಮತ್ತು ಅಭಯಗಳೆಂಬ ನಾಲ್ಕು ದಾನಗಳು (ಸಂದ ಚತುರ್ವಿಧದಾನಂ ಅಗುಂದಲೆಯೆನೆ ಮಾಡಿ; ಕರ್ಣನೇಮಿ, ೨. ೮೦)

ಚತುರ್ವಿಧದೇವನಿಕಾಯ
[ಜೈನ] ಭವನವಾಸಿ, ವ್ಯಂತರ, ಜ್ಯೋತಿಷ್ಯ ಮತ್ತು ಕಲ್ಪವಾಸಿಗಳೆಂಬ ನಾಲ್ಕು ಪ್ರಕಾರದ ದೇವತೆಗಳ ಸಮೂಹ (ಮೂಱುಲಕ್ಕೆ ದೃಢಬ್ರತಾದಿ ಶ್ರಾವಕರುಂ ಅಯ್ದುಲಕ್ಕೆ ಸುವ್ರತೆ ಮೊದಲಾಗೆ ಪರಮಶ್ರಾವಕಿಯರುಂ: ಆದಿಪು, ೧೬. ೪೦ ವ)

ಚತುರ್ವಿಧ ಪುರುಷಾರ್ಥವೃತ್ತಿ
ಹಣಸಂಪಾದನೆ ಮತ್ತು ಕಾಪಾಡಿಕೊಳ್ಳುವ ನಾಲ್ಕು ಬಗೆಗಳು (ಅಲಬ್ಧಲಾಭಂ ಲಬ್ಧಪರಿರಕ್ಷಣಂ ರಕ್ಷಿತವಿವರ್ಧನಂ ವರ್ಧಿತತೀರ್ಥ ಪ್ರತಿಪಾದನಂ ಎಂಬ ಚತುರ್ವಿಧ ಪುರುಷಾರ್ಥವೃತ್ತಿಯಾಗಿರ್ಪುದು: ಪಂಚತಂತ್ರ, ೭೫ ವ)

ಚತುರ್ವಿಧಶುಕ್ಲಧ್ಯಾನ
[ಜೈನ] ಪೃಥಕ್ತ್ವವಿತರ್ಕವಿಚಾರ, ಏಕತ್ವವಿತರ್ಕವಿಚಾರ, ಸೂಕ್ಷ್ಮಕ್ರಿಯಾ ಪ್ರತಿಪಾತಿ, ವ್ಯುಪರತ ಕ್ರಿಯಾನಿವೃತ್ತಿ ಎಂಬ ನಾಲ್ಕು ಬಗೆಯ ಶುಕ್ಲಧ್ಯಾನಗಳು (ಚತುರ್ವಿಧಶುಕ್ಲಧ್ಯಾನದೊಳ್ ಪೂರ್ವಾಪರವಿಷಯ ವಿವಿಕ್ತಾರ್ಥವ್ಯಂಜನವೀರ್ಯ ವಿಧಿವ್ಯಂಜನಯೋಗ ಸಂಕ್ರಮಣಲಕ್ಷಣಲಕ್ಷಿತಮಪ್ಪ ಪೃಥಕ್ತ್ವವಿತರ್ಕವಿಚಾರಮೆಂಬ ಮೊದಲ ಶುಕ್ಲಧ್ಯಾನದೊಳ್: ಆದಿಪು, ೬. ೩೪ ವ)

ಚತುರ್ವಿಧಾಮರ
ಚತುರ್ನಿಕಾಯ (ನಿರುತಂ ಭಾವನರುಂ ವನಾವಸಥರುಂ ಜ್ಯೋತಿಷ್ಕರುಂ ಕಲ್ಪವಾಸರುಂ ಆಆಗಿರ್ದ ಚತುರ್ವಿಧಾಮರರ್ ಉದಾರರ್: ಪುಷ್ಪದಂಪು, ೧೦. ೧೩)


logo