logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಚತುರ್ಥಕಾಲ
ಸುಷಮಕಾಲ (ಪಾಪವರ್ತನಮನಯಂ ಪ್ರವರ್ತಿಸದು ವರ್ತಿಪುದು ಎಯ್ದಿ ಚತುರ್ಥಕಾಲ ವರ್ತನಮೆನೆ: ಪಾರ್ಶ್ವನಾಪು, ೬.೧೧)

ಚತುರ್ಥಧ್ಯಾನ
[ಜೈನ] ಆರ್ತ, ರೌದ್ರ, ಧರ್ಮ, ಶುಕ್ಲ ಎಂಬ ನಾಲ್ಕು ಬಗೆಯ ಧ್ಯಾನಗಳಲ್ಲಿ ಕೊನೆಯದು (ಅಪಗತಯೋಗಗುಣಸ್ಥಾನನುಂ ಚತುರ್ಥಧ್ಯಾನಾನಳದಗ್ಧ ಶೇಷಾಶೇಷ ಕರ್ಮೇಂಧನನುಮಾಗಿ: ಆದಿಪು, ೧೬. ೭೪ ವ)

ಚತುರ್ಥಸ್ನಾನ
ಮುಟ್ಟಾದವಳು ನಾಲ್ಕನೆಯ ದಿನ ಮಾಡುವ ಸ್ನಾನ (ಮರುದೇವಿ ಮಹಾದೇವಿ ಚತುರ್ಥಸ್ನಾನದೊಳ್ ಕಲ್ಪದ್ರುಮ ದುಕೂಲವಸನೆಯುಂ ಊರ್ಜಿತ ದಶನಮಯೂಖ ಜಳಪ್ರಕ್ಷಾಳಿತದಶನವಸನೆಯುಂ .. .. ಆಗಿ (ಆದಿಪು, ೭. ೨೬)

ಚತುರ್ಥಾಂಶ
ನಾಲ್ಕನೆಯ ಒಂದು ಭಾಗ (ಪಲ್ಯೋಪಮ ಚತುರ್ಥಾಂಶಂ ಜಘನ್ಯದಿಂ ಪಲ್ಯೋಪಮಾಷ್ಟಮ ಭಾಗಮಕ್ಕುಂ: ಸುಕುಮಾಚ, ೧೦. ೫೯ ವ)

ಚತುರ್ದಂತ
ನಾಲ್ಕು ಹಲ್ಲು[ಗಳುಳ್ಳದ್ದು], ಐರಾವತ (ಲಲಿತಾಂಗುಲಿ ಭಾಸುರಭದ್ರ ಲಕ್ಷಣಾಲಂಕೃತಂ ಚತುರ್ದಂತಂ: ಅಜಿತಪು, ೫. ೬೬)

ಚತುರ್ದಶ
ಹದಿನಾಲ್ಕು (ಚತುರ್ದಶ ಮಹಾನದಿಗಳ ನೀರುಮಂ ತೞತೞ ತೊಳಗುವ ಕಳಧೌತಕಳಶಂಗಳೊಳ್ ತೆಕ್ಕನೆ ತೀವಿ ತಂದ ವಾರವನಿತಾ ಜನಕ್ಕಂ: ಪಂಪಭಾ, ೧೪. ೧೭ ವ)

ಚತುರ್ದಶಗುಣ
ಸಂಗೀತದ ಹದಿನಾಲ್ಕು ಗುಣಗಳು (ವರ್ಣ ಅಲಂಕಾರ ಸ್ವರ ಪದ ಸಮಾಸ ಉಚ್ಛ್ವಾಸ ಸಭಾ ಆದೇಶ ತಾಳ ಲಯ ಯತಿ ಫಣಿಸ್ಥಾನ ದೇಶ ಕಾಲಜ್ಞತೆಗಳೆಂಬ ಚತುರ್ದಶಗುಣಂಗಳೊಳ್ ಕೂಡಿ ಬಾಜಿಸದಾಗಳ್: ಹರಿವಂಶ, ೫. ೨ ವ)

ಚತುರ್ದಶಗುಣಸ್ಥಾನ
[ಜೈನ] ಮೋಹ ಹಾಗೂ ಯೋಗಗಳ ನಿಮಿತ್ತದಿಂದ ಆತ್ಮನ ದರ್ಶನ ಮತ್ತು ಚಾರಿತ್ರ ರೂಪ ಗುಣಗಳ ಕ್ರಮವಿಕಾಸ ರೂಪ ಅವಸ್ಥೆಗಳು; ಮಿಥ್ಯಾದೃಷ್ಟಿ, ಸಾಸಾದನ, ಮಿಶ್ರ, ಅಸಂಯತ ಸಮ್ಯಗ್ದೃಷ್ಟಿ, ಸಂಯತಾಸಂಯತ, ಪ್ರಮತ್ತಸಂಯತ, ಅಪ್ರಮತ್ತಸಂಯತ, ಅಪೂರ್ವಕರಣ, ಅನಿವೃತ್ತಿಕರಣ, ಸೂಕ್ಷ್ಮಲೋಭ, ಉಪಶಾಂತ ಕಷಾಯ, ಕ್ಷೀಣಕಷಾಯ, ಸಯೋಗಕೇವಲಿ, ಅಯೋಗಕೇವಲಿ (ಚತುರ್ದಶಗುಣಸ್ಥಾನಂಗಳಂ ನಂಬಿ ಪೊರ್ದಿದವರ್ ಪೊರ್ದಿದರಲ್ತೆ ಮುಕ್ತಿವನಿತಾ ಕಾಂಚೀಗುಣಸ್ಥಾನಮಂ: ಆದಿಪು, ೧೫. ೧೯)

ಚತುರ್ದಶಪೂರ್ವ
[ಜೈನ] ಶ್ರುತಾಂಗಗಳ ವಿವರಣೆ ನೀಡುವ ಹದಿನಾಲ್ಕು ಪೂರ್ವಗ್ರಂಥಗಳು: ಉತ್ಪಾದ, ಅಗ್ರಾಯಣೀ, ವೀರ್ಯಾನುವಾದ, ಅಸ್ತನಾಸ್ತಪ್ರವಾದ, ಜ್ಞಾನಪ್ರವಾದ, ಸತ್ಯಪ್ರವಾದ, ಆತ್ಮಪ್ರವಾದ, ಕರ್ಮ ಪ್ರವಾದ, ಪ್ರತ್ಯಖ್ಯಾನ, ವಿದ್ಯಾನುವಾದ, ಕಲ್ಯಾಣವಾದ, ಪ್ರಾಣವಾಯು, ಕ್ರಿಯಾವಿಶಾಲ, ಲೋಕಬಿಂದುಸಾರ (ಇತ್ತ ಗಂಧಭಾಜನ ಮುನಿಯುಂ ದ್ವಾದಶಾಂಗ ಚತುರ್ದಶಪೂರ್ವಮಪ್ಪ ಆಗಮಮೆಲ್ಲಮಂ ಕಲ್ತು ಪಲಕಾಲಂ ಉಗ್ರೋಗ್ರ ತಪಶ್ಚರಣಂಗೆಯ್ದು: ವಡ್ಡಾರಾ, ಪು ೪೯, ಸಾ ೧೩)

ಚತುರ್ದಶಭುವನ
ಹದಿನಾಲ್ಕು ಲೋಕಗಳು (ಈ ಚತುರ್ದಶಭುವನಮೇ ಬೆಲೆಯೆನಿಪ ಕೃತಿಯಂ ಅಮಳಾಕೃತಿಯಂ: ನೇಮಿನಾಪು, ೧. ೪೬)


logo