logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಚಕ್ಷುಷ್ಮಂತ
ಮುಂದಾಲೋಚನೆಯವನು (ಚಕ್ಷುಷ್ಮಂತರ ಕಣ್ಗಂ ಮನಕ್ಕಂ ಇತ್ತುದು ಮುದಮಂ: ಶಾಂತಿಪು, ೧೦. ೧೩೭)

ಚಕ್ಷುಸಿ
[ಬೇಕಾದುದನ್ನು ಕಾಣಬಲ್ಲ] ಒಂದು ವಿದ್ಯೆ (ಹಿಮವಂತದಲ್ಲಿ ರಾಕ್ಷಸಿ ಕೊಟ್ಟ ಚಕ್ಷುಸಿಯೆಂಬ ವಿದ್ಯೆಯಿಂ ಕಣ್ಣನಭಿಮಂತ್ರಿಸಿಕೊಂಡು: ಪಂಪಭಾ, ೭. ೩೭ ವ)

ಚಕ್ಷೂರಾಗ
ನೋಟದಲ್ಲಿ ತೋರಿಸುವ ಪ್ರೀತಿ (ಚಕ್ಷೂರಾಗದೊಳ್ ಬೆಂದು ಒಳಗೊಳಗೆ ಎರ್ದೆವೊತ್ತುತ್ತುಮಿರ್ಪ ಅಂಗನಾಸಂಕುಳಮಂ ತೞ್ಕೈಸಿ .. .. ಭಾರತೀಚಿತ್ತಚೋರಂ: ಲೀಲಾವತಿ, ೧೩. ೧೬೧)

ಚಚ್ಚರಂ
ಬೇಗನೆ (ಚಚ್ಚರಂ ಒಳಪೊಯ್ದು ನೀಂ ನಿನಗೆ ಮಾಡುವುದೆಂದು ಅಮರೇಂದ್ರಪುತ್ರನಂ ಕರೆವವೊಲಾದುವು ಆ ಪುರದ ವಾತವಿಧೂತವಿನೂತನಕೇತುಗಳ್: ಪಂಪಭಾ, ೪. ೩೪)

ಚಚ್ಚರಿಕೆ
ಚಟುವಟಿಕೆ, ತೀವ್ರತೆ (ಚಯ್‌ಚಯ್ಯೆಂಬಾಗಳ್ ಮೆಯ್ ಮೆಯ್ ಚಲದಿಂ ಮುಟ್ಟಿ ಪೊಣರ್ದು ತಳ್ತಿಱವ ಉರ್ಕಿಂ ಕೆಯ್ ಚೆಚ್ಚರಿಕೆಯ ಚಲದಿಂ ಕೆಯ್ ಚಳಿವಿನೆಗಂ ಇಱದರ್ ಎರಡು ಬಲದೊಳಂ ಅದಟರ್: ಪಂಪಭಾ, ೧೩. ೩೪)

ಚಚ್ಚಾರವ
ಪುಂಗಿಯ ನಾದ (ಮಾಗಧಾಮರಂ ವಿನಮಿತಸರ್ವಾಂಗಂ ಚಚ್ಚಾರವಕೆ ಭುಜಂಗನ ಕೊರಲಂತೆ ಬಾಗಿದಂ: ಆದಿಪು, ೧೨. ೧೧೧)

ಚಟಾಚ್ಛಾಟನ
ಜುಟ್ಟಿನ ಮಿಡಿತ (ನಿಶಿತ ಅಸಿಪತ್ರಪತಿತ ಪ್ರಚಂಡ ಸುಭಟ ಮಸ್ತಕೋಚ್ಚಳಿತ ಚಟಾಚ್ಛಾಟನ ದುರ್ನಿರೀಕ್ಷ್ಯ: ಪಂಪಭಾ, ೧೩. ೫೧ ವ)

ಚಟಾರಿಸು
ವಂಚಿಸು (ದಾನಕ್ಕೆ ಕೊಟ್ಟುದಂ ನೆರೆ ತಾನಿಕ್ಕದೆ ಋಷಿಯರಂ ಚಟಾರಿಸಿ ಬಯ್ತು .. .. ಪೆಂಡಿರಸುಗತಿಗಿಳಿವರ್: ಸಮಯಪ, ೫. ೧೦೧)

ಚಟುಳ
ಚಂಚಲ; ಚುರುಕುತನ (ಚಟುಳಚಳತ್ ಮೀನೋಏನಪ್ರತಾನಂ ಶುಂಭತ್ ಗಂಭೀರಮಂ ರಂಜಿಸಿದುದು: ರಾಜಶೇವಿ, ೧. ೯೦)

ಚಟುಳತೆ
ಚುರುಕುತನ (ನಡೆಯೆ ಚಟುಳತೆಗೆ ಕಣೆಯಂ ಸಡಿಲ್ದೊಡೆ ಅದಂ ಎಡದ ಕೆಯ್ಯೊಳ್ ಓಸರಿಸುತ್ತುಂ ನಡೆದು ಗವಾಕ್ಷಂಬರಂ ಓಗಡಿಸದೆ ನವವರನಂ ಅಬಲೆ ನೋಡಿದಳೊರ್ವಳ್: ಶಾಂತಿಪು, ೬. ೯)


logo