logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಘಟ್ಟಿಕೆ
ಉಂಟಾಗುವಿಕೆ; ಗೊಂಚಲು (ಕುಸುಮ ಕುಟ್ಮಲಳದ ಘಟ್ಟಿಕೆಗಳಂ ಪಿಡಿದಿರ್ಪ ಪರಿಚಾರಿಕಾಜನಂಗಳುಮಂ: ತ್ರಿಷಷ್ಟಿಪು, ೩. ೧೦೫ ವ)

ಘಟ್ಟಿಮಗುೞ್ಚು
ಗಂಧ ತೇಯುವಾಗ ಮೇಲೆ ಕೆಳಗೆ ಮಾಡುವುದು (ಮನಂಬುಗೆ ನಳಿತೋಳ ಕೋಳೆಸೆಯೆ ಘಟ್ಟಿಮಗುೞ್ಚುವ ಘಟ್ಟಿವೞಯಂ ಭೋಂಕನೆ ಕಂಡು ಕೀಚಕಂ: ಪಂಪಭಾ, ೮. ೫೯ ಮತ್ತು ೫೯ ವ)

ಘಟ್ಟಿವಳ್ತಿ
ಗಂಧ ತೇಯುವವಳು (ವಿವಿಧಗಂಧಂಗಳಂ ಆಂ ಅವಯವದೊಳ್ ಮಾಡುವ ಘಟ್ಟಿವಳ್ತಿಯೆಂ ದೇವಿ ಗಂಡವಳ್ತಿಯೆಂ ಅಲ್ಲೆಂ: ಪಂಪಭಾ, ೮. ೫೬)

ಘಟ್ಟಿವಳ್ಳ
ಗಂಧ ತೇಯುವವನು (ಅಲರ್ಗಣ್ ಘಟ್ಟವಳ್ಳರ ಪಸರದಂತೆ ಕಂಪಂ ಪರಕಲಿಸೆ: ಹರಿವಂಶ, ೫. ೫ ವ)

ಘಟ್ಟಿಸು
ಅಪ್ಪಳಿಸು (ಚಾತುರ್ವಲಂಗಳ್ ಮೊದಲ ಸಮಕಟ್ಟುಗೆಟ್ಟು ತಡವರಿಸಿ ತಟ್ಟುಪೊಟ್ಟೆಂದು ಎಚ್ಚು ಮಿಟ್ಟುಂ ಇಱದು ತಱದು ಘಟ್ಟಿಸೆಯುಂ: ಪಂಪಭಾ, ೧೦. ೭೦ ವ)

ಘನ
ಮೋಡ (ಘನದ ಕರಗಿದುದುನಱು ಅಪಘನದ ವಿಳಾಸಮನದೆಂತು ನಂಬುವುದೊ: ಆದಿಪು, ೪. ೬೫); ಘನವಾದುದು, ದೃಢವಾದುದು (ಘನಾಘನದಿಂದಂ ಅಱಯಲಾದುದು ಘನಾಘನಂ ಜವನ ದಾೞಗಿಲ್ಲೆಂಬಿನಿತಂ: ಆದಿಪು, ೪. ೬೫); ತಾಳ, ಗಂಟೆ, ಗೆಜ್ಜೆ ಮುಂತಾದ ತಾಳವಾದ್ಯ (ಅತಿಮೃದುರವದಾಯಿಗಳಂ ತತ ಘನ ಸುಷಿರ ಅವನದ್ಧವಾದ್ಯಂಗಳನೇಂ ಮತಮಱದು ಓಲಗಿಪುದೊ ದಂಪತಿಗೆಂದುಂ ಅವಾರ್ಯತೂರ್ಯಕ್ಷ್ಮಾಜಂ: ಆದಿಪು, ೫. ೩೫); ದಪ್ಪನಾದ (ಉತ್ತುಂಗ ಸುಸೂಕ್ಷ್ಮ ಪಾರ್ಶ್ವ ಕೃಶ ಕೋಮಳ ನಿಮ್ನ ಘನ ಉನ್ನತ ಪ್ರದೇಶಂಗಳಂ ಆ ಸಮಾನತಳದಲ್ಲಿಯೆ ಚಿತ್ರಕಂ ಎಯ್ದೆ ತೋರ್ಪವೋಲ್: ಪಂಪಭಾ, ೧೩. ೨೧)

ಘನಗರ್ಜನೆ
ಗುಡುಗು (ಘುಳುಘುಳಿಸುತ್ತಮಿರ್ಪ ಘನಗರ್ಜನೆ ಭೋರೆನುತಿರ್ಪ ವೃಷ್ಟಿ: ತ್ರಿಷಷ್ಟಿಪು, ೮. ೫೩)

ಘನಗ್ರಾವ
ಆಲಿಕಲ್ಲು (ಮೌಕ್ತಿಕ ಅಸೃಕ್ಕಣೋತ್ಕರಂ ಎತ್ತಂ ಸುರಿವಂತೆ ಸೂಸಿತು ಘನಗ್ರಾವಂ ಇಂದ್ರಗೋಪವ್ರಜಂ: ರಾಜಶೇವಿ, ೮. ೧೧೫)

ಘನಘಟಾಟೋಪ
[ಘನಘಟಾ+ಆಟೋಪ] ಮೋಡದ ರಾಸಿಯ ಅಬ್ಬರ, ಗುಡುಗು (ಸಮುದ್ಯತ್ ರಜತಗಿರಿ ತಟ ಸ್ಪಷ್ಟ ಸಂಶ್ಲಿಷ್ಟ ಮೌರ್ವೀನಿನದಂ ಪರ್ವಿತ್ತು ಅಕಾಂಡಪ್ರಳಯ ಘನಘಟಾಟೋಪ ಗಂಭೀರನಾದಂ: ಪಂಪಭಾ, ೧೨. ೧೩೭)

ಘನಘಟೆ
ಮೋಡದ ರಾಶಿ (ಘನಘಟೆ ನಭದಿಂದಂ ಧಾತ್ರಿಗೆತ್ತೆತ್ತ ಬಂದತ್ತೆನಿಸಿ ತಳರ್ದುದೆತ್ತಂ .. .. ಆಶಾಚಕ್ರಗಂಧೇಭಚಕ್ರಂ: ಆದಿಪು, ೧೧. ೫೦)


logo