logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಘಟಿಯಿಸು
ಉಂಟಾಗಲಿರುವ (ಜಟಮಟಿಸಿಕೊಂಡು ನಿಮ್ಮೀ ಘಟಿಯಿಸುವ ಈ ಸಂಧಿ ಕೌರವರ್ಕಳೊಳ್ ಎನ್ನಿಂ ಘಟಿತ ಜರಾಸಂಧ ಉರಸ್ತಟ ಸಂಧಿವೊಲ್ ಒಂದೆ ಪೊೞ್ತಱೊಳ್ ವಿಘಟಿಸದೇ: ಪಂಪಭಾ, ೯. ೨೩);

ಘಟಿಸು
ಸಂಭವಿಸು (ತಾಯ ಬೞಯನುೞಯದ ಕಱುವಿನಂತೆ ನಾಮಪದಂಗಳ್ ಅರ್ಥದೊಳ್ ಅನುಗತಂಗಳಾಗೆ ಸಮಾಸಂ ಘಟಿಸುಗುಂ: ಶಬ್ದಮದ, ೧೭೩ ವೃತ್ತಿ)

ಘಟೀಯಂತ್ರ
ಬಾವಿಯಿಂದ ನೀರೆತ್ತುವ ರಾಟಣ (ಮದನರಾಜವಿಜಯತಂತ್ರಂಗಳೆನಿಪ ಘಟೀಯಂತ್ರಂಗಳುಂ: ಪುಷ್ಪದಂಪು, ೯. ೨೨ ವ)

ಘಟೆ
ಆನೆಗಳ ಗುಂಪು (ದುಷ್ಪ್ರೇಕ್ಷನುಂ ರಿಪುಘಟಾ ವಿಘಟನ ಮೃಗೇಂದ್ರನುಂ ಅಪ್ಪ ಪೂರ್ಣಚಂದ್ರನುಂ .. .. ಅಖಿಲ ಘೋೞಾಯಿಲರ್ .. .. ಕದನಕ್ಷೆಣಿಗೆ ನಡೆದರ್: ಪಂಪರಾ, ೧೩. ೨೯ ವ)

ಘಟೋದ್ಭವ
ದ್ರೋಣ (ಯಾದವವಂಶಜರುಂ ನಾನಾದೇಶ ನರೇಂದ್ರರುಂ ಘಟೋದ್ಭವನ ಧನುರ್ವೇದಮನೆ ಕಲಲ್ ಬಂದಾಳಾದರ್: ಪಂಪಭಾ, ೨. ೫೬)

ಘಟೋಧ್ನಿ
ದೊಡ್ಡ ಕೆಚ್ಚಲುಳ್ಳ ಹಸು (ಕಾಡಿ ಕಱೆಯದ ಘಟೋಧ್ನಿಯ ಕೋಡಿಯನೋಡಿಸದ ಕೆಱೆಯ ಕೇಡಂ ಕಾಣರೆ: ಲೀಲಾವತಿ೧. ೪೮)

ಘಟ್ಟಣೆ
ತಾಗುವಿಕೆ, ಘರ್ಷಣೆ (ಬಾಳ್ವಾಳ್ಗಳ ಘಟ್ಟಣೆಯೊಳ್ ಬಳ್ವಳ ಬಳೆದೊಗೆದು ನೆಗೆದ ಕಿಡಿಗಳ ಬಂಬಲ್ಗಳ್ವೆರಸು ಪೊಳೆದು ನೆಗೆದುದು ಬಾಳ್ವೊಗೆ: ಪಂಪಭಾ, ೧೦. ೮೪)

ಘಟ್ಟನ
ಹೊಡೆತ (ಚಟುಳಿತ ಚಕ್ರನೇಮಿ ಪರಿವರ್ತನ ಘಟ್ಟನಘಾತನಿರ್ಭರ ಸ್ಫುಟಿತ ಧರಾತಳಂ: ಪಂಪಭಾ, ೧೧. ೧೪೭)

ಘಟ್ಟಾಘಟ್ಟಿ
ಪರಸ್ಪರ ಹೊಡೆದಾಟ (ಇಲ್ಲಿ ಘಟ್ಟಾಘಟ್ಟಿಯಿಂ ಮಲ್ಲಾಮಲ್ಲಿಯಿಂ ಮಾೞ್ಪ ಯುದ್ಧಂಗಳ್ ಸಂಸ್ಕೃತ ಕರ್ಣಾಟಕದೊಳ್ ತತ್ಸಮಂಗಳ್: ಶಬ್ದಮದ, ೧೯೬ ಪ್ರ)

ಘಟ್ಟಿ
ಶ್ರೀಗಂಧ (ಮೌಕ್ತಿಕಕುಂಡಳಂ ಕುಚಂಗಳೊಳ್ ಒಲೆದಾಡೆ ಲೀಲೆಯೊಳೆ ಘಟ್ಟಿಮಗುೞ್ವುದು ಅಂಗನಾಜನಂ: ಆಚವರ್ಧ, ೧. ೬೫)


logo