logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಘೋಷ
ಗೊಲ್ಲರ ಹಳ್ಳಿ (ಚತುರ್ಮುಖಂ ಈಕ್ಷಿಸಲೆ ಬಂದನೆಂಬೀ ಭ್ರಮೆಯಂ ನೂರ್ಮಡಿಸಿದುದು ಆ ಘೋಷ ಬಹಿರ್ಮಹಿಯೊಳ್ ನಟ್ಟ ಗೊಲ್ಲ ದೇವತೆ: ಲೀಲಾವತಿ, ೫. ೯೮)

ಘೋಷಣೆವಡೆ
ಕೀರ್ತಿ ಹೊಂದು (ತ್ರಿಣಯನಶೌರ್ಯಂ ತಾಂ ಘೋಷಣೆವಡೆವುದು ಲೋಕಲಯದೊಳ್ ಎನ್ನಂ ಪೋಲ್ತಿರ್ದಂ: ಜಗನ್ನಾವಿ, ೭. ೨೮)

ಘೋಷಾಕರ
ಕಣಜ (ಘೋಷಾಕರ ಸಂಗ್ರಹಾಕರ ಗೋವ್ರಜಂಗಳುಮಂ: ಅದಿಪು, ೮. ೬೩ ವ)

ಘೋಷಿಸು
ಸಾರಿ ಹೇಳು (ಆನಂದಭೇರಿಯಂ ಪೊಯ್ಸಿ ಘೋಷಿಸಲ್ವೇೞ್ದು: ಆದಿಪು, ೧೪. ೧೦೪ ವ)

ಘೋೞಯಿಲ
ಕುದುರೆ ಸವಾರ, ರಾವುತ (ಘೋೞಯಿಲರ್ ತಗುಳ್ದು ತತ್ತಱ ತಱದಿಕ್ಕಿ ದೇಗುಲಕೆ ಪೆರ್ಮರನಂ ಕಡಿವಂತೆ ಮಾಡಿದರ್: ಪಂಪಭಾ, ೮. ೯೫)

ಘೋೞಾಯಿಲ
ಕುದುರೆ ಸವಾರ (ದುಷ್ಪ್ರೇಕ್ಷನುಂ ರಿಪುಘಟಾ ವಿಘಟನ ಮೃಗೇಂದ್ರನುಂ ಅಪ್ಪ ಪೂರ್ಣಚಂದ್ರನುಂ.. .. ಅಖಿಲ ಘೋೞಾಯಿಲರ್ .. .. ಕದನಕ್ಷೆಣಿಗೆ ನಡೆದರ್: ಪಂಪರಾ, ೧೩. ೨೯ ವ)

ಘೋೞಾಯ್ತ
ಕುದುರೆ ಸವಾರ (ನಾಗಾಯ್ತರ ಗಳಘರ್ಜನೆ ಘೋೞಾಯ್ತರ ಬಹಳಧ್ವಾನಂ ಆ ಸಭಾಭ್ಯಂತರದೊಳ್: ಜಗನ್ನವಿ, ೧೧. ೭೪)

ಘೋೞಾಯ್ಲ
ಕುದುರೆ ಸವಾರ (ಘೋೞಾಯ್ಲರ್ ಪೊಳೆಯಿಸೆ ಬಿಸಿಲ್ಗುದುರೆಗಳ್ ಪೊಳೆವಂತೆ ಪೊಳೆವ ಕಡುಗುದುರೆಗಳುಮಂ .. .. ಒಡ್ಡಿ ನಿಂದಾಗಳ್: ಪಂಪಭಾ, ೧೦. ೫೧ ವ)

ಘ್ರಾಣ
ಮೂಗು (ಮೂಗು ನಾಸಿಕಾ ಘ್ರಾಣ ಸಿಂಘನೀ ಘೋಣಾಖ್ಯಂ: ಅಭಿಧಾವ, ೧. ೧೨. ೧೭)

ಘ್ರಾಣಗಹ್ವರ
ಮೂಗಿನ ಹೊಳ್ಳೆ (ಘ್ರಾಣಗಹ್ವರದಿಂ ಘೋರಸಮೀರನಂ ಪಸರಿಸುತ್ತಿರ್ದತ್ತುದಾತ್ತ ಹಯಂ: ಮಲ್ಲಿನಾಪು, ೮. ೧೨೦)


logo