logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಗಂಧರ್ವವಿವಾಹ
ಪರಸ್ಪರರು ಮೆಚ್ಚಿಕೊಂಡು ಮಾಡಿಕೊಳ್ಳುವ ಮದುವೆ (ಗಂಧರ್ವವಿವಾಹಮನಾ ಬಂಧೂಕಾಧರೆಯವರ್ಗೆ ಮಾಡಿದರೊಲವಿಂ: ಲೀಲಾವತಿ, ೧೩. ೪)

ಗಂಧಲಂಪಟತೆ
ಸುಗಂಧದಲ್ಲಿ ಅತಿ ಆಸಕ್ತಿ (ರಟತ್ ಅಳಿಸಂದೋಹಂ ಎಂತೆಱಗುಗುಗುಂ ದಳಿತಾಂಬುರುಹಕ್ಕೆ ಗಂಧಲಂಪಟತೆಯಿಂ: ಆದಿಪು, ೩. ೯೦)

ಗಂಧವಹ
ಗಂಧವನ್ನು ಹೊತ್ತೊಯ್ಯುವುದು, ಗಾಳಿ (ವನಲತಾಳಿಪ್ರಸೂನಾವಳೀ ಗಂಧವಹಂ ಮೆಲ್ಪಿಂದೆ ದಲ್ .. .. ತಣ್ಗಂಪನೀ ಬೀಱದಪುದು: ಕಾದಂಸಂ, ೮. ೬)

ಗಂಧವಹನ
ಗಂಧವಹ (ವಿಷಾಹಾರಂ ಹಾರಂ ಹೃದಯದಹನಂ ಗಂಧವಹನಂ .. .. ವನಿತೆಗವನಿಂ ಚಿತ್ತಭವನಿಂ: ಲೀಲಾವತಿ, ೭. ೮೩)

ಗಂಧವಾರಣ
ಗಂಧಗಜ (ಅನ್ಯ ನರೇಂದ್ರ ಗಂಧವಾರಣ ಮದವಾರಣಂ ವಿಜಯಕಾರಣಂ ಅಮ್ಮನಗಂಧವಾರಣಂ: ಗದಾಯು, ೧. ೧೭)

ಗಂಧವಾರಿ
ಶ್ರೀಗಂಧದ ಪರಿಮಳದ ನೀರು (ಸಾಂದಿನೊಳ್ ಕತ್ತುರಿಯೊಂದು ಕೋೞ್ಗೆಸಱೊಳ್ ಓಕುಳಿ ಚಂದನ ಗಂಧವಾರಿಯೊಳ್ ಪಂಪಭಾ, ೧೪. ೨೦)

ಗಂಧವಾಹ
ಗಂಧವಹ (ಆಮೋದದಿಂ ಎತ್ತಂ ಗಂಧವಾಹಂ ಮಗಮಗಿಸೆ ಬೆಡಂಗೀ ನಗೇಂದ್ರೋಪಕಂಠಂ: ಆದಿಪು, ೧೩. ೬೮)

ಗಂಧಶಾಲಿ
ಒಂದು ಬಗೆಯ ಸುವಾಸನೆಯ ಬತ್ತ (ಪೊನ್ನ ನೀರ್ಗಳಂ ಪರಿಯಿಸಿದಂತೆ ಕಂಪುವಡೆದೇಂ ಪಸುರ್ಗೊಂಡುವೊ ಗಂಧಶಾಲಿಗಳ್: ಲೀಲಾವತಿ, ೬. ೧೩೦)

ಗಂಧಶಾಳಿ
ಸುಗಂಧಯುಕ್ತ ಬತ್ತ, ಕಮ್ಮಗಡಲೆ ಬತ್ತ (ದೇವಮಾತೃಕಮೆನಿಪ್ಪ ಪೊಲಂ ನವಗಂಧಶಾಳಿಯಿಂ ಬೆಳೆವುದು ರಮ್ಯ ನಂದನ ವನಾಳಿ ವಿಯೋಗಿಜನಕ್ಕೆ ಬೇಟಮಂ ಬಳೆವುದು: ಪಂಪಭಾ, ೧. ೫೪)

ಗಂಧಶಾಳಿವನ
ಗಂಧಶಾಲಿಯ ಗದ್ದೆ (ಪೊಂಬಣ್ಣದ ಕೆಂಪಿಡಿದಿರೆ ಸೊಗಯಿಪುವು ಗಂಧಶಾಳಿವನಂಗಳ್: ಆದಿಪು, ೧. ೬೦)


logo