logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಗಣೋಪಗ್ರಹಣ
[ಜೈನ] ಒಂದು ಗರ್ಭಾನ್ವಯಕ್ರಿಯೆ, ಗಣವನ್ನು ಸೇರುವುದು (ಗಣೋಪಗ್ರಹಣ .. .. ಅಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿನಿರ್‍ವಾಣ ಪರ್‍ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಗತಕ
ಚಾಂಚಲ್ಯ (ಜೊತ್ತು ಗತಕಂ ಗನ್ನಂ ಕಜಾಕರ್ಷಣಂ ಸರಸಂ ಚಾರು ನಖಕ್ಷತಂ .. .. ಪಿರಿದುಣ್ಮಲ್ ವಧು ನಲ್ಲನೊಳ್ ನೆರೆವುತಿರ್ದಳ್: ತ್ರಿಷಷ್ಟಿಪು, ೨೪. ೧೮೦)

ಗತಕಿ
ಕೃತಕಿ, ಕಪಟಿ (ಋತ್ವಕ್ಕತ್ವಂ: ಕೃತಕಿ ಗತಕಿ, ಗದಗಿಯುಮಕ್ಕುಂ: ಶಬ್ದಮದ, ಪ್ರ)

ಗತಜೀವಿತ
ಸತ್ತವನು (ಕೆಲರ್ .. .. ದೆಸೆಯನೆ ನೋಡಿ ನೋಡಿ ಗತಜೀವಿತರಾದರ್: ಶಾಂತಿಪು, ೪. ೩೦ ವ)

ಗತಪ್ರಜ್ಞ
ಪ್ರಜ್ಞಾಹೀನ (ನಿರೀಕ್ಷಿಸಿ ನಿಕೃಷ್ಟದುಷ್ಟಗಣರಂ ಗತಪ್ರಜ್ಞರಂ: ಸುಕುಮಾಚ, ೨. ೧೮)

ಗತಪ್ರತ್ಯಾಗತ
ಮೊದಲಿನಿಂದ ಕಡೆಯವರೆಗೆ ಹಾಗೂ ಕೊನೆಯಿಂದ ಆರಂಭದವರೆಗೆ (ಶ್ರುತಕೀರ್ತಿ ತ್ರೈವಿದ್ಯವ್ರತಿ ರಾಘವಪಾಂಡವೀಯಮಂ ವಿಬುಧ ಚಮತ್ಕೃತಿಯೆನಿಸಿ ಗತಪ್ರತ್ಯಾಗತದಿಂ ಪೆೞ್ದು ಅಮಲಕೀತಿಯಂ ಪ್ರಕಟಿಸಿದಂ: ಪಂಪರಾ, ೧. ೨೫)

ಗತಪ್ರಾಣನಾಗು
ಪ್ರಾಣ ಕಳೆದುಕೊ, ಸಾಯು (ಪದ್ಮಪತ್ರೌಘಂಗಳಿಂ ತಮ್ಮಣ್ಣಂಗೆ ನೀರಂ ತೀವಿಕೊಂಡು ಸರೋವರದಿಂದ ಪೊಱಮಟ್ಟು ಒಂದೆರಡಡಿಯನಿಡುತೆ ಗತಪ್ರಾಣನಾಗಿ ಬಿೞರ್ದಂ: ಪಂಪಭಾ, ೮. ೩೯ ವ)

ಗತವಿವೇಕ
ವಿವೇಕರಹಿತ (ಇನ್ನಾವ ಸಂತಸಂ ಗತವಿವೇಕ ಪೇೞ್ ನಿನಗೆ ಅಸಾರಸಂಸಾರದೊಳ್: ಆದಿಪು, ೩. ೬೦)

ಗತವೇದ
[ಜೈನ] ಇಂದ್ರಿಯಾಭಿಲಾಷೆಯನ್ನು ಕಳೆದುಕೊಂಡವನು (ವೇದನಬಂಧಮಂ ಸಮಯೋನದ್ವ್ಯಾವಳಿಕಾ ಸಮಯಂಗಳಿಂ ವಿದಾರಿಸಿ ಗತವೇದನಾಗಿ: ಶಾಂತಿಪು, ೧೧. ೧೧೧ ವ)

ಗತಶ್ರೀಕ
ಸಂಪತ್ತು ಕಳೆದುಕೊಂಡವನು, ದುರದೃಷ್ಟವಂತ (ಗತಶ್ರೀಕನಪ್ಪನಂ ಸೇವಿಪರಾರ್: ರಾಜಶೇವಿ, ೯. ೬೫)


logo