logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಕಂಠೀರವವಾಹನೆ
ಸಿಂಹವಾಹನೆ, ದುರ್ಗೆ (ಕೂರಸಿಯೊಳ್ ನೆಲಸುಗೆ ಕಂಠೀರವವಾಹನೆ ಚಳುಕ್ಯಕಂಠೀರವನಾ: ಗದಾಯು, ೧. ೫)

ಕಂಠೀರವಾಸಂದಿ
[ಕಂಠೀರವ+ಆಸಂದಿ] ಸಿಂಹಾಸನ (ಸೌಂದರಾನೇಕಮಣಿ ರುಚಿಜಳಸ್ಯಂದಿಯಂ ಮಂದರೋತ್ತುಂಗ ಕಂಠೀರವಾಸಂದಿಯಂ: ಆದಿಪು, ೭. ೨೭ ರಗಳೆ)

ಕಂಠೋಷ್ಟಂಬರಂ
ಕತ್ತು ತುಟಿಯವರೆಗೆ (ಭಕ್ಷ್ಯರಾಶಿವೆರಸು ಆ ಕಂಠೋಷ್ಟಂಬರಂ ಉಂಡು ಒಯ್ಯನೆ ಪಾರ್ವಂ ಬಂದು: ಪಂಚತಂತ್ರ, ೨೫೪)

ಕಂಡ
[ಖಂಡ] ಮಾಂಸಖಂಡ (ವಿನತಾಪುತ್ರನ ವಜ್ರ ತುಂಡ ಹತಿಗಂ ಮೆಯ್ಯಾಂತು ಕಂಡಂಗಳುಳ್ಳಿನಂ ಅಂಗಂಗಳಂ ಒಡ್ಡಿ ಒಡ್ಡಿ ತನುವಂ ಕೊಟ್ಟಂತು: ಪಂಪಭಾ, ೪. ೨೬)

ಕಂಡಣಿಸು
ಕೆತ್ತು, ಕಂಡರಿಸು (ಮಾಣಿಕ್ಯದಿಂ ಕಡೆದು ಕಂಡಣಿಸಿ ಕೆತ್ತಿಸಿದ ತೆನೆಗಳಿಂ .. .. ಕಣ್ಗೆ ಮಂಗಳವಿನಿಸಿ ಸೊಗಯಿಸುತಿರ್ಪುದು: ಧರ್ಮಪ, ೧. ೫೪ ವ)

ಕಂಡದಿಂಡೆ
ಮಾಂಸಖಂಡದ ರಾಶಿ (ತಲೆಗಳ ಬಟ್ಟಲಿಂ ಮೊಗೆದು ನೆತ್ತರನಾಗಳೆ ಈಂಟಿಯೀಂಟಿ ಮೆಯ್ಗಲಿಗಳ ಕಂಡದಿಂಡೆಗಳ ಬಕ್ಕಣಮಂ ತವೆ ಮೆಲ್ದು ಮೆಲ್ದು: ಕಬ್ಬಿಗಕಾ, ೨೨೧)

ಕಂಡಪಟ
ತೆರೆ, ಪರದೆ (ತೊಡಂಬೆಯ ಮೂಡಿಗೆಯ ಕದಳಿಕೆಯ ಕಂಡಪಟಂಗಳುಮಂ: ಪಂಪಭಾ, ೫. ೪೭ ವ)

ಕಂಡರಣೆಗೆಯ್
ಕೆತ್ತನೆಯ ಕೆಲಸ ಮಾಡು (ಬಳ್ಳಿಮಿಂಚಿನೊಳ್ಗುಡಿಯನೆ ಕೊಂಡು ಕಂಡರಣೆಗೆಯ್ದರೊ ಪೇೞೆನೆ: ಅನಂತಪು, ೬. ೧೯)

ಕಂಡರಿಸು
ಕೆತ್ತು, ಕಂಡರಣೆಗೆಯ್ (ಎಸಳ್ಗಳನೆಯ್ದೆ ಕಂಡರಿಸಿ ಸುವರ್ಣಚೂರ್ಣಮಂ ಪಸರಿಸಿ: ಆದಿಪು, ೧೧. ೧೧೬)

ಕಂಡವಡ
ಕಾಂಡಪಟ (ತಳಿರ್ಗಳ ಕಂಡವಡಂಗಳೆ ತಳಿರ್ಗಳ ಪಾಸುಗಳೆ ತಳಿರ್ಗಳೋವರಿಗಳೆ: ಆದಿಪು, ೧೧. ೭೯)


logo