logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಕಂಜಜ
ತಾವರೆಯಲ್ಲಿ ಜನಿಸಿದವನು, ಬ್ರಹ್ಮ (ಉಡುರಾಜಿ ಲತಾಂತಮದಾಗೆ ಕಂಜಜಂ ಪೂಜಿಪ ಹೇಮಲಿಂಗಮೆನೆ ರಾಜಿಸಿತಂದು ಸುವರ್ಣಭೂಧರಂ: ಉದ್ಭಟಕಾ, ೧. ೪೦)

ಕಂಜಜಾತಾಕರ
ತಾವರೆಯ ಕೊಳ (ಕಂಜತಾಕರದಲ್ಲಿ ವಲಂ ಜನಿಸಿದ ಸುೞಯ ಮಧ್ಯದೊಳ್ ಮಿಸುಪ ರಜಃಪುಂಜಂ: ಉದ್ಭಟಕಾ, ೫. ೬೧)

ಕಂಜಪ್ರಿಯ
ಸೂರ್ಯ ಮಂಜಿನ ಮೞೆಯೊಳ್ ಮಸುಳ್ದಿರೆ ಕಂಜಪ್ರಿಯಕುಮುದಬಂಧುಗಳ್: ಆದಿಪು, ೬. ೬೧)

ಕಂಜವಕ್ತ್ರೆ
ತಾವರೆಯ ಮುಖದವಳು (ಅೞಲ್ದೆರೆದೊಂದಿದ ಲುಂದುಗಳ್ಗೆ ನೀರ್ಗುಡಿದವೊಲಾದುದುಚ್ಚಳಿಸಿ ಸೂಸುವ ಕಣ್ಬನಿ ಕಂಜವಕ್ತ್ರೆಯಾ: ಆದಿಪು, ೧೨. ೨೬)

ಕಂಜಾತ
ತಾವರೆ (ತದ್ಗುರು ಕರಕಂಜಾತ ಜಾತನೆನಿಸಿದಂ ಈತಂ: ರಾಜಶೇವಿ, ೧. ೬೪)

ಕಂಜಾಸನ
ಬ್ರಹ್ಮ (ನೀನಿತು ಅಂಜಿದೊಡಂ ಕುಂಜರಾರಿ ಕೊಲ್ಲದೆ ಮಾಣಂ ಕಂಜೋದರನುಂ ಹರನುಂ ಕಂಜಾಸನನುಂ ಕಡಂಗಿ ಕಾವೊಡಮೀಗಳ್: ಪಂಚತಂತ್ರ, ೨೩೧)

ಕಂಜಾಸ್ತ್ರ
ಮನ್ಮಥ (ಕಂಜಾಸ್ತ್ರನಂ ನಗುವಂತೆ ಒಪ್ಪುವನಂ ಮೃಗಾಕ್ಷಿ ನಡೆ ನೋಡುತ್ತಿರ್ದಳಾ ಭೂಪನಂ: ರಾಜಶೇವಿ, ೭. ೨೧)

ಕಂಜೋದರ
ಹೊಕ್ಕುಳಲ್ಲಿ ತಾವರೆಯನ್ನು ಹೊಂದಿದವನು, ವಿಷ್ಣು (ನೀನಿತು ಅಂಜಿದೊಡಂ ಕುಂಜರಾರಿ ಕೊಲ್ಲದೆ ಮಾಣಂ ಕಂಜೋದರನುಂ ಹರನುಂ ಕಂಜಾಸನನುಂ ಕಡಂಗಿ ಕಾವೊಡಮೀಗಳ್: ಪಂಚತಂತ್ರ, ೨೩೧)

ಕಂಟ
ತಾಳೆಗರಿಯ ಮೇಲೆ ಬರೆಯಲು ಬಳಸುತ್ತಿದ್ದ ಸಾಧನ (ಕಂಟಮೊನೆ ಬಾಳ್ಮೊನೆಯಾಗಿರೆ: ಅನಂತಪು, ೨. ೨೪)

ಕಂಟಕ
ಮುಳ್ಳು (ಸಕಳೋರ್ವೀತಳಪೂಜ್ಯಮಪ್ಪ ಭವದೀಯ ಪ್ರಾಜ್ಯರಾಜ್ಯಕ್ಕೆ ಕಂಟಕನಾದಂ ಕ್ರಮದಿಂದೆ: ಪಂಚತಂತ್ರ, ೧೬೦); ಪುಲಕ (ಅನುಜನ ಭುಜಪ್ರತಾಪಕ್ಕೆ ಅನುರಾಗಮೆಯ್ದಿ ತಡೆಯದೆ ಅನುರಾಗಮಂ ಇತ್ತುದಂ ಉದಗ್ರ ಕಂಟಕಾಂಚಿತ ಘನಭುಜದಿಂದಪ್ಪಿ ಭುಜಬಲಂ ಬಲದೇವಂ: ಶಾಂತೀಶ್ವಪು, ೮. ೧೧೯); ತೊಂದರೆ ಮಾಡುವವನು (ದಶಕಂಠನಂ ತ್ರಿದಶಕಂಟಕನಂ ಕೊಲಲೆಂದು ರಾಮನಾದಂದಿನ ಸಾಹಸಂ ಮನದೊಳ್ ಆವರಿಸಿತ್ತು ಅಕಳಂಕರಾಮನಾ: ಪಂಪಭಾ, ೪. ೧೯)


logo