logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಕಂಸಧ್ವಂಸಿ
ಕಂಸನನ್ನು ಕೊಂದವನು, ಶ್ರೀಕೃಷ್ಣ (ವೀರನಂ ವೀರಶ್ರೀಯೊಳ್ ನೆರಪುವಂತೆ ಉತ್ತರೆಯೊಳ್ ನೆರಪಿ ಕಂಸಧ್ವಂಸಿಯಂ ದ್ವಾರಾವತಿಗೆ ಕೞಪಿ: ಪಂಪಭಾ, ೯. ೯ ವ)

ಕಂಸಸೂದನ
ಕಷ್ಣ (ಉಗ್ರಸೇನ ಭಯಭೇದನಂ ಉದ್ಧತ ಕಂಸಸೂದನಂ: ಜಗನ್ನಾವಿ, ೨. ೮೪)

ಕಂಸಾಂತಕ
[ಕಂಸ+ಅಂತಕ] ಕಂಸನನ್ನು ಕೊಂದವನು, ಕೃಷ್ಣ (ಅಂತಪ್ಪದಟನಂ ಆಜಿಯೊಳ್ ಎಂತು ಇದಿರಾಂತು ಗೆಲ್ದಿರ್ ಎನೆ ನೃಪನಂ ಕಂಸಾಂತಕನೆಂದಂ: ಪಂಪಭಾ, ೧೨. ೧೨೬)

ಕಂಸಾರಿ
ಕಂಸನ ಶತ್ರು, ಶ್ರೀಕೃಷ್ಣ (ನೀಂ ಬರೆ ಪೆಱತೇಂ ಕಂಸಾರೀ ಯುಷ್ಮತ್ ಪದಪಾಂಸುಗಳಿಂದೆ ಆಂ ಪವಿತ್ರಗಾತ್ರನೆಂ ಆದೆಂ: ಪಂಪಭಾ, ೯. ೩೨)

ಕಂಸಾರಿಸಖ
ಕೃಷ್ಣನ ಗೆಳೆಯ, ಅರ್ಜುನ (ಕಂಸಾರಿಸಖಂ ಪರಿಧ್ವಂಸಿತರಿಪುನೃಪಸಮೂಹಂ ಒಡ್ಡಿದನಾಗಳ್ ಹಂಸವ್ಯೂಹಮಂ: ಪಂಪಭಾ, ೧. ೧೧೦)

ಕಂಸಾಳ
[ಕಾಂಸ್ಯ+ತಾಳ] ಕಂಚಿನ ತಾಳ (ಸುಗತಿಯನುಗುಳ್ವ ಕರಡೆಗಳ ಮೇಳೈಪ ಕಂಸಾಳದ ಗರ್ಗರಿಸಪ ಗಿರ್ಗಟೆಗಳ: ಗಿರಿಜಾಕ, ೧೦. ೭೭ ವ)

ಕಃ ಕೇನಾರ್ಥಿ ಕೋ ದರಿದ್ರಃ
ಯಾರು ಏನನ್ನು ಬೇಡುತ್ತಾನೆ, ಯಾರು ಬಡವ (ಆ ದೀನಾನಾಥರ್ಗೆ ವೃದ್ಧದ್ವಿಜಮುನಿನಿಕರಕ್ಕೆ ಅಂದು ಎಡಱು ಪೋಪಿನಂ ಕಃ ಕೇನಾರ್ಥೀ ಕೋ ದರಿದ್ರಃ ಎನುತುಂ ಅನಿತುಮಂ ಧರ್ಮಜಂ ಸೂಱೆಗೊಟ್ಟಂ: ಪಂಪಭಾ, ೬. ೪೦)

ಕಕುದ
ಗೂಳಿಯ ಹಿಣಿಲು (ಧವಳಾತಪ ವಾರಣಕಕುದ ವಿಭೂತಿಯನುೞದು ನೆಗೞ್ವುಪಾಸಕನಾದಂ: ಆದಿಪು, ೬. ೬); ಶಿಖರ, ಶ್ರೇಷ್ಠ (ನೃಪಕಕುಧಮಂ ಸ್ಫೀತಚ್ಛತ್ರಾದಿ ಭೂತಿ ವಿಭೂತಿಯಂ: ವರ್ಧಮಾಪು, ೭. ೫೨)

ಕಕುದ್ಮತ್
ಎತ್ತು (ಕಕುಭಂ ಮುಂಗಾಲ್ ಕಕುದ್ಮತ್ ಅತಿ ವಿಷಮ ವಿಷಾಣಂ .. .. ಹರಿಗೆ ಮುನಿದು ಬರ್ಪಂತೆ ಬಂದತ್ತಿಭೇಂದ್ರಂ: ನೇಮಿನಾಪು, ೮. ೮೨)

ಕಕುಭ
ದಿಕ್ಕು (ಕಕುಭಾವಳಯಂ ಮುಸುಕಿದ ಮೇಘಂಗಳ ಮೊರ್ಬುಂ ಪರ್ಬಿದತ್ತು ಧರಣೀತಳಮಂ: ತ್ರಿಷಷ್ಟಿಪು, ೩೭. ೭); ಮತ್ತಿಯ ಗಿಡ (ಕಕುಭ ಅಶೋಕ ಕದಂಬ ಲುಂಗ ಲವಲೀ ಭೂರ್ಜ ಆರ್ಜುನ ಅನೋಕಹ ಪ್ರಕರಂ: ಪಂಪಭಾ, ೫. ೮೦); ವೀಣೆಯ ಬುರುಡೆ (ಶೃಂಗಾರಾರ್ದ್ರಂ ಕಕುಭಜನಿತಂ .. .. ಸರಿಗಮಪಧನ್ಯುತ್ತರಾಭೋಗವಧ್ನ್ಯಂಗಂ: ಲೀಲಾವತಿ, ೨. ೩೦)


logo