logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಕಂಪು
ಬಂಡು, ಮಕರಂದ (ಕಂಪಂ ಕೊಳಲ್ಬರ್ಪ ಭೃಂಗನಿಕಾಯಂ ಕವಿದಲ್ಲಿ ಮೆಲ್ಲನುಗೆ ತೇಂಕುವ ಪೂವಿನ ಸಂಕರಂಗಳಂ: ಆದಿಪು, ೧. ೬೨)

ಕಂಪುಗು
ಸುಗಂಧ ಸೂಸು (ಸಂಪಗೆ ಕರಂ ಮಿಗೆ ಕಂಉಗೆ ನಂದನಂಗಳೊಳ್: ಕರ್ಣನೇಮಿ, ೧೩. ೧೭)

ಕಂಪುಗೊಳ್
ಮೂಸಿನೋಡು (ಕಂಪುಗೊಳಲ್ಕೆ ಉಸಿರ್ಧ ಉಸುರಿನಿಸಂ ಪೊಱಮಟ್ಟೆಸೞ ತುದಿಯನೆಯ್ದಲೊಡಂ: ಆದಿಪು, ೧೧. ೧೧೫)

ಕಂಪುನಾಱು
ಕಂಪಿನಿಂದ ಗಮಗಮಿಸು (ಸೊಡರ್ಗುಡಿ ಒಯ್ಯನಾಗೆ ಪೊಸಮಲ್ಲಿಗೆ ಕಂಪುನಾಱೆ ತಣ್ಪಿಡಿದ ಎಲರ್ ಊದೆ ಗಾವರದ ಮೆಲ್ಲುಲಿ ತುಂಬಿಯ ಗಾವರಂಂಗಳ ಗೆಡೆಗೊಳೆ: ಪಂಪಭಾ, ೪. ೧೧೦); ದುರ್ನಾತ (ಕೆಂಡಂಗಳೊಳ್ ಸುೞದು ಬೇವ ಪೆಣಂಗಳ್ ಕಂಪುನಾಱುವುದರ್ಕೆ ಸೈರಿಸಲಾರದೆ ಕೋಳ್ದಾಂಟಿನೊಳ್ ಕೊಳುಗುಳವಂ ಕೞದು ಪೋಗಿ: ಪಂಪಭಾ, ೧೩. ೭೧ ವ)

ಕಂಬ
ಧಾನ್ಯವನ್ನಳೆಯುವ ಒಂದು ಅಳತೆ (ಒಕ್ಕಲಮಗನದೊಂದು ಕಂಬಮನೊಯ್ದಿಟ್ಟು ಆ ಊರಿನ ಬಾದುಬ್ಬೆಗೆ ಸಾಯಿರಮಂ ಬೆಳೆದನೆಂದು ನುಡಿವರ್ ಮೂಢರ್: ಸಮಯಪ, ೯. ೪೧)

ಕಂಬಳ
ಕಂಬಳಿ, ಉಣ್ಣೆಯ ಹೊದಿಕೆ (ರತ್ನದ್ವೀಪದಿಂದೊರ್ವ ಪರದಂ ಸರ್ವರತ್ನ ಕಂಬಳಂಗಳಂ ಲಕ್ಷ ದೀನಾರಂಗಳ್ ಬೆಲೆಯಪ್ಪವಂ ಉಜ್ಜೇನಿಗೆ ಮಾಱಲ್ಕೊಂಡು ಬಂದಂ: ವಡ್ಡಾರಾ, ಪು ೨೫, ಸಾ ೨೦)

ಕಂಬಳತೀರ್ಥ
ಒಂದು ಕ್ಷೇತ್ರದ ಹೆಸರು (ಅಲ್ಲಿಂದಿತ್ತ ಕಂಬಳತೀರ್ಥವೆಂಬುದಾದುದು: ವಡ್ಡಾರಾ, ಪು ೯೩, ಸಾ ೧೯)

ಕಂಬಿ
ಹೆಗಲ ಕಲ್ಲಿ (ಚಮರಂ ಜತು ಪೇರುಡು ಪೀಲಿ ಎಂಬಿವಂ ತುಂಬಿದ ಕಂಬಿಯಂ ತಳೆದು ಅದೇಂ ತಳರ್ದತ್ತೊ ಪುಳಿಂದಸಂಕುಳಂ: ರಾಜಶೇವಿ, ೫. ೧೧೪); ಕುದುರೆ ಬಾಯಲ್ಲಿನ ಲೋಹದ ತುಂಡು (ಕಂಬಿಯ ಕಡಿಯಣದ ಕೀಲಣದ ಹೋರಟೆಯ ಘಾರಾಘಾರಿಯೊಳ್ ಜೋಳಿಸುವ ಲಾಲಾಜಲಂ ಖುರಹತಿಯಿಂ ನೆಗೆದ ದೂಳ್ಗೆ ಚಳಿಯಂಗುಡೆ: ಗಿರಿಜಾಕ, ೬. ೫೫ ವ); ಭಾರ ಹೊರುವ ಅಡ್ಡೆ (ಜಾಲಮನೊಪ್ಪಿರೆ ಮಾೞ್ಪ ಕಲ್ಲಿಯಂ ಕಾಸಿನ ಕಂಬಿಯಂ ಸಮೆವ ಮಾರ್ಘಣನುಮಂ ಗಱಗಟ್ಟುತಿರ್ಪ .. .. ವನೇಚರರು: ಜಗನ್ನಾವಿ, ೧೬. ೧೬); ಸೌಟು (ಕಂಬಿ ಕದ್ರು ತಾಂ ದರ್ವಿ ದಾರುಹಸ್ತಕಮೆನಿಪ್ಪುದದು ಖಿಜಿಕಾಖ್ಯಂ: ಅಭಿಧಾವ, ೧೧೦. ೩೩)

ಕಂಬು
ಶಂಖು (ಅಗಲದೆ ರೇಖಾತ್ರಯದಿಂದಗಲದೆ ಪೊಗರ್ವಟ್ಟ ಬಂಧುರಚ್ಛವಿಯಿಂ ಕಂಬುಗಳಂ ನಗುವಂತಿರೆ ಕಂಬುಗಳಂ ಕರಮೆಸೆಗುಂ ಆ ವಣಿಕ್ಪತಿಸತಿಯಾ: ಸುಕುಮಾಚ, ೯. ೮೯)

ಕಂಬುಕಂಧರ
ಶಂಖುವಿನಂತಹ ಕೊರಳು (ಇದು .ಮದನಕಂದಳಂ .. .. ಸಂದಯಮೇನೆನೆ ಸುದತಿಯ ಕಮನೀಯ ಕಂಬುಕಂಧರಮೆಸೆಗುಂ: ಮಲ್ಲಿನಾಪು, ೩. ೫೮)


logo