logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಒಗುಮಿಗು
ಆಧಿಕ್ಯ (ನೆನೆದುರಿವ ತಲೆಯ ಕಿಚ್ಚಿನೊಳೊಗುಮಿಗೆ ನೆಯ್ವೊಯ್ವ ತೆಱದೆ ಪೊಣ್ಮಿದ ಮುನಿಸಿಂ ಭುಗಿಲನುರುದೆೞ್ದು: ಕಬ್ಬಿಗಕಾ, ೧೧೮)

ಒಗೆ
ಹುಟ್ಟು, ಕಾಣಿಸಿಕೊ (ಕಮಲೋದ್ಭವನ ಅಮಳಿನ ಹೃತ್ಕಮಲದೊಳ್ ಒಗೆದರ್ ಸುರೇಂದ್ರಧರಕರ್ ಆ ವಾಗಮಳರ್ ನೆಗೞರ್ದರ್ ಪುಲಹ ಮರೀಚಿ ಅತ್ರಿ ಅಂಗಿರಸ್ ಪುಳಸ್ತ್ಯ ಕ್ರತುಗಳ್: ಪಂಪಭಾ, ೧. ೬೦); ವಸ್ತ್ರಪ್ರಕ್ಷಾಲನ, ಬಟ್ಟೆಯನ್ನು ಶುದ್ಧಗೊಳಿಸು (ಒಕ್ಕು .. .. ವಸ್ತ್ರಪ್ರಕ್ಷಾಳನಯೋ: ಶಬ್ದಮದ, ಧಾ ೯೪)

ಒಗೆತರ್
ಕಾಣಿಸಿಕೊ, ಹುಟ್ಟಿ ಬರು (ಅಂಬುಜಮುಖಿ ಪುತ್ರನೆನ್ನ ದೊರೆಯಂ ನಿನಗಕ್ಕೆ ಎಂಬುದುಂ ಒದವಿದ ಅಂಬುಜಮಿತ್ರನನೆ ಪೋಲ್ವ ಮಗಂ ಒಗೆತಂದಂ: ಪಂಪಭಾ, ೧. ೯೪); ಉಂಟಾಗು (ಪೇಳ್ದಳ್ ಮುದಮೊಗೆತರೆ ತಾಂ ಕಂಡ ಕನಸೆಲ್ಲಮಂ: ರಾಜಶೇವಿ, ೪. ೨೭)

ಒಗ್ಗಡಿಸು
ಒಂದಾಗು (ಒಡೆದು ಕಟವೆರಡುಂ ಒಗ್ಗಡಿಸದೆ ಮದವುಣ್ಮಿ ಪೊಣ್ಮಿರಲ್ .. .. ವಿಜಯ ಗಜಮಂ ಕಂಡಳ್: ಸೂಕ್ತಿಸು, ೭. ೩೬)

ಒಗ್ಗುಗೆಡು
ಬೇರೆಯಾಗು (ಮೊಗ್ಗರಂಬೊಯ್ದು ಅಗಲಿಸಿ ನಡೆದು ಬಗ್ಗಿಸಿ ಬಯ್ದು ಒಗ್ಗುಗೆಡದೆ ಮುಂಕಣಿಸಿ: ಗಿರಿಜಾಕ, ೬. ೬೬ ವ)

ಒಚ್ಚತ
ಸಂತೋಷ (ಬಿಚ್ಚುಮಂ ವಿದ್ಯೆಗಳೊಳೆಲ್ಲಂ ಒಚ್ಚತಂ ನೋಡಿದೊಡೆ ಒಂದೊಂದರ್ಕೆ ಮಚ್ಚರಿಸಿದಂತೆ ಪಚ್ಚು ಪಸರಿಸಿ ನಿಚ್ಚಯ್ಸಲ್: ಸುಕುಮಾಚ, ೩. ೬ ವ); ಒಂದೇ ಸಮನೆ (ಮೆಯ್ಗೆ ಮೆಚ್ಚಿದಂತೆ ಒಚ್ಚತಂ ಕಾದಂಬರಿಯೊಳ್ ನೆರೆದು .. .. ನೆಗಳುತ್ತಮಿರ್ಪೆಂ: ಕಾದಂಬ, ೯. ೧೧ ವ); ವಿಶಿಷ್ಟ (ಅಮರ್ದಿಂಗೊಚ್ಚತಮಲ್ತು ಮತ್ತಿವರ ವಾಕ್ಪೀಯೂಷ ಪೂರಕ್ಕಮುಂಟು ... .. ಸೌಖ್ಯಂ .. .. ಎನಿಪರ್ ಈಗೊಳ್ಪಂ ಕವೀಂದ್ರೋತ್ತಮರ್: ನೇಮಿನಾಪು, ೧. ೩೨)

ಒಚ್ಚತಂಗೊಳ್
ಪಡೆದುಕೊ ಪೂವಿನ ಬಿಲ್ಲನೊಚ್ಚತಂಗೊಂಡು ಅರ್ಚಿಸುತ್ತಿರ್ಪ ನಿಡುವುರ್ವಿನ ನೀಱೆಯರಿಂ: ಗಿರಿಜಾಕ, ೭. ೧೧ ವ)

ಒಜ್ಜರಂಬರಿ
ಝರಿಯಂತೆ ರಭಸದಿಂದ ಹರಿ (ಗುಜ್ಜರ ಮಂಡಲದೊಳ್ ಒಜ್ಜರಂಬರಿದು ಮಱುಮಂಡಲದೊಳ್ ಪರೆಪುವಡೆದು: ಅನಂತಪು, ೧೪. ೪೭ ವ)

ಒಟ್ಟ
(ಓಷ್ಠ) ತುಟಿ (ತೋಳತಳ್ಪನಾಳಿಸುವ ಇರದೆ ಒಟ್ಟಂ ಸವಿವ ಬಾಯ್ಬಿಡುತಂದೊಡಮೆಟ್ಟಿದಂತೆ ಚುಂಬಿಸುವ: ಚಂದ್ರಪ್ರಪು, ೮. ೭೭)

ಒಟ್ಟಜ
ಕಪ್ಪ, ಕಾಣಿಕೆ (ತಾನೊತ್ತೆಯಿಡಲ್ ಪೋದಡೆ ನೀನಿನ್ನಮಗೆಮ್ಮ ತಂದೆಯೈಯೊತ್ತಗೆ ಕಯ್ಯಾನೆಮೆನೆ ಮೆಚ್ಚಿ ಸುಲಇವಂ ಮಾನಿನಿರಜ್ಜನೊಟ್ಟಜಮಂ ಮಚ್ಚಿದವೊಲ್; ಅಜಿತಪು, ೨. ೯೯)


logo