logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಒಕ್ಕಲಿಗ
ಬೇಸಾಯ ಮಾಡುವವನು (ಮಲೆ ತಲೆದೋಱದೆಂದುದನೆ ಕೊಟ್ಟುದು ಡಂಗಮಡಂಗಿ ಬಂದುದು ಒಕ್ಕಲಿಗವೆಸರ್ಗೆ ಪೂಣ್ದುದು: ಪಂಪಭಾ, ೨. ೯೦); ರೈತ (ಒರ್ವಂ ಒಕ್ಕಲಿಗಂ ಒಂದು ಪೇಱು ಮಣ್ಣಂ ತಂದು ಶ್ರೀಪರ್ವತದ ಮೇಗೊಟ್ಟಿದೊಡೆ: ವಡ್ಡಾರಾ, ಪು ೧೮೭, ಸಾ ೨೩)

ಒಕ್ಕಲಿಸು
ವ್ಯಾಪಿಸು (ದಿವಿಜರ ಕಿವಿಯಂ ಜಕ್ಕುಲಿಸಿ ನೆಗೆದು ಭುವನಮಂ ಒಕ್ಕಲಿಸಿದುದು ಆ ಗಭೀರಭೇರೀ ನಿನಾದಂ: ಕರ್ಣನೇಮಿ , ೧೧. ೮೪)

ಒಕ್ಕಳ
[ಒರ್+ಕಳ] ಒಂದು ಕೊಳಗ (ಉಪ್ಪಿಲ್ಲದೆ ಕೇಳ್ ಒಕ್ಕಳ ತುಪ್ಪವನೆಱೆದುಣ್ಬೆನೆಂಬೊಡೆ ಉಂಬ ಉಣಿಸೇಂ ಸ್ವಾದಪ್ಪುದೇ: ಧರ್ಮಾಮೃ, ೧. ೫೦)

ಒಕ್ಕು
ಹೊರಕ್ಕೆ ಸುರಿ (ತಿಸುಳದೊಳ್ ಉಚ್ಚಳಿಪ್ಪ ಪೊಸನೆತ್ತರೆ ಕೆಂದಳಿರಾಗೆ ಕಣ್ಗೆ ಅಗುರ್ವಿಸುವಿನಂ ಒಕ್ಕು ನೇಲ್ವ ಕರುಳೋಳಿಯೆ ಬಾಳಮೃಣಾಳಮಾಗೆ ಮಿಕ್ಕಸುರರ ಮೆಯ್ಯೊಳಾದ ವಿರಹಾಗ್ನಿಯಂ ಆಱಸುತಿಂತೆ ತನ್ನ ಕೂರಸಿಯೊಳ್ ಅಡರ್ತು ಕೊಂದಸಿಯಳ್ ಇರ್ಕೆ ಅಸಿಯೊಳ್ ಪಡೆಮೆಚ್ಚೆ ಗಂಡನಾ: ಪಂಪಭಾ, ೧. ೬); ಬೆಳೆಯಿಂದ ಕಸ ಬೇರ್ಪಡಿಸು, ಒಕ್ಕಣ ಮಾಡು ಹಾಗೂ ಶಕುನ ಹೇಳು (ಒಕ್ಕು ಖಲಕರಣೇ ಶಕುನೇಚ: ಶಬ್ದಮದ, ಧಾ ೧೩)

ಒಕ್ಕೈಸು
ಸೇರು, ಒಂದುಗೂಡು (ಉಭಯಕಟದ ಸೊರ್ಕುಕದಡಿನ ತೆರ್ಕೆಗಡಲ್ಗಳ್ ಒಕ್ಕೈಸಿ ಜಗಮನಿಕ್ಕಲೆಂದು : ಅನಂತಪು, ೧೨. ೩೦ ವ)

ಒಖ್ಖಾಣಿಸು
ವ್ಯಾಖ್ಯಾನಿಸು (ಕವಿಮಾರ್ಗದೊಳ್ ಒಖ್ಖಾಣಿಪ ಠವಣಿಪ ಕಮ್ಮೈಸುವ ಎಡೆಯೊಳ್ ವಖ್ಖಾಣಿಸಲುಂ ಠವಣಿಸಲುಂ ಕಮ್ಮೈಸಲುಂ ಇವನಂತಾರ್ ಬಲ್ಲರ್ ಎನಿಸಿದಂ ಕವಿರತ್ನಂ: ಅಜಿತಪು, ೧. ೮೨)

ಒಗಂಟುವೇೞ್
ಅರ್ಥ ತಿಳಿಯದಂತೆ ಮಾತಾಡು, ಒಗಟು ಹೇಳು (ಅರ್ಥಮಂ ಪ್ರಕಟಿಸಿ ಪೇೞದೆ ಒಗಂಟುವೇೞ್ವಕವಿಯುಂ ಕವಿಯೇ: ಪಾರ್ಶ್ವಪು, ೧. ೭೫)

ಒಗಂಟೆ
ಒಗಟು, ಅರ್ಥ ತಿಳಿಯದ ಹೇಳಿಕೆ (ಒಗಂಟೆ ತಾಂ ಪ್ರಹೇಳಿಕೆಯಕ್ಕುಂ: ಅಭಿಧಾವ, ೧. ೧೩. ೩೬)

ಒಗಸುಗಂ
ಅತಿಶಯವಾಗು (ನೆಗೞ್ದಮರಾಂಗನಾಜನದ ರೂಪುಗಳೆಲ್ಲಂ ಈಕೆಯೊಂದು .. .. ಮೆಲ್ಪಿನ ತೊದಳ್ನುಡಿಗಪ್ಪೊಡಮೆಯ್ದೆ ವಾರವೇಂ ಒಗಸುಗಂ ಎಂದು ತಳ್ತಗಲನಾಕೆಯಂ ಲಲಿತಾಂಗವಲ್ಲಭಂ: ಆದಿಪು, ೨. ೭೫)

ಒಗು
ಹೊರಸೂಸು; ಹೊಮ್ಮುವಿಕೆ; ತ್ಯಜಿಸು (ಆಳ್ದನ ಕಜ್ಜಮಂ ಒಕ್ಕು ಸತ್ತರಂ ನಗುವವೊಲಿರ್ದಂ ಅಂಗಪತಿ ನೆಮ್ಮೀ ನಿಜೋನ್ನತ ಕೇತುದಂಡಮಂ: ಗದಾಯು, ೫. ೧೦)


logo