logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಒಮ್ಮೊೞ
ಒಂದು ಮೊಳ (ಮಱೆದುಂ ಸಾವದ್ಯಮೆಂದೊಡಂ ಒಮ್ಮೊೞ ಪಾವಿಂಗೆ ಅಂಜದುದಂ ಅಂಜುವರ್ ಸಲೆ ಜೈನರ್: ಸಮಯಪ, ೫. ೯)

ಒಯ್
ತೆಗೆದುಕೊಡು ಹೋಗು (ಕನಕಶ್ರೀಯಂ ಗಗನಗಾಮಿನೀವಿದ್ಯೆಯಿಂ ಒಯ್ದು: ಶಾಂತಿಪು, ೩. ೬೦ ವ)

ಒಯ್ಕನೆ
ನೇರವಾಗಿ (ನೆಱೆಯೆ ಧನುರ್ವಿದ್ಯೆಯ ಕಣ್ದೆಱೆವಿನೆಗಂ ಕಲ್ತ ನಿಮ್ಮ ಮಕ್ಕಳ ಮೆಯ್ಯೊಳ್ ಮೆಱೆದಪ್ಪೆಂ ಎನ್ನ ವಿದ್ದೆಯಂ ನೆರೆದು ನೋೞ್ಪುದನಿಬರುಮೀಗಳ್: ಪಂಪಭಾ, ೨. ೬೫)

ಒಯ್ಯನಾಗು
ಕ್ಷೀಣವಾಗು, ಕಾಂತಿಹೀನವಾಗು (ಸೊಡರ್ಗುಡಿ ಒಯ್ಯನಾಗೆ ಪೊಸಮಲ್ಲಿಗೆ ಕಂಪುನಾಱೆ ತಣ್ಪಿಡಿದ ಎಲರ್ ಊದೆ ಗಾವರದ ಮೆಲ್ಲುಲಿ ತುಂಬಿಯ ಗಾವರಂಂಗಳ ಗೆಡೆಗೊಳೆ: ಪಂಪಭಾ, ೪. ೧೧೦)

ಒಯ್ಯನೆ
ಮೆಲ್ಲನೆ, ಮೃದುವಾಗಿ (ಎಂದು ಒಯ್ಯನೆ ಇೞಪೆ ನೆಲದೊಳ್ ದುಂದುಭಿರವದೊಡನೆ ವಿಜಯಘೋಷಣೆ ನೆಗೞ್ದತ್ತು: ಆದಿಪು, ೧೪. ೧೧೩); ಸಾವಕಾಶವಾಗಿ (ಎಱಕೆಗಳಂ ಮೆಲ್ಲನೆ ಉರ್ಚುತ್ತೆ ನಿಂದು ಒಯ್ಯನೆ ಸಾರ್ದು ಆ ತ್ರೋಟಿಯಿಂದಂ ತೊಡೆದು ಗಱಗಳಂ ನುಣ್ಣವಿರ್ ಬಿರ್ಚಿ ಮೆಯ್ಯಂ ತೊನೆದು ಉದ್ದಂ ನೀಡಿ ಗೋಣಂ ನವ ದಿನಮುಖದೊಳ್ ಕುಕ್ಕುಟಂ ಕೂಗಿತಾಗಳ್: ಶಾಂತೀಶ್ವಪು, ೧೧. ೯೬); ಕ್ರಮವಾಗಿ (ಮುನಿಪತಿ ವಾಚನೆಯಿಂ ಪೃಚ್ಛನೆಯಿಂ ಅನುಪ್ರೇಕ್ಷೆಯಿಂ ತದಾಮ್ನಾಯದಿಂ ಒಯ್ಯನೆ ಧರ್ಮಕಥನದಿಂದಂ ವಿನುತಸ್ವಾಧ್ಯಾಯಮೆಂಬ ತಪಮಮಂ ತಳೆದಂ: ಸುಕುಮಾಚ, ೪. ೧೮)

ಒಯ್ಯನೊಯ್ಯನೆ
ನಿದನಿದಾನವಾಗಿ (ಅಮರ್ದ ಲೀಲೆಯಿಂ ಪೆಂಡವಾಸದೊಳ್ ಪೆಂಡಿರೊಯ್ಯನೊಯ್ಯನೆ ನಡೆದರ್: ಆದಿಪು, ೧೧. ೪೧)

ಒಯ್ಯಾರ
ಒನಪು, ಬೆಡಗು (ಮಲ್ಲಿಗೆಯ ಮುಗುಳ ಹಾರಕ್ಕೆ ಒಯ್ಯಾರಮಪ್ಪ ಪಚ್ಚೆಸಾರಮಂ ಸಮೆಯಲೆಂದು: ಪಾರ್ಶ್ವನಾಪು, ೯. ೪೬ ವ)

ಒರಲ್
ಒರಳು, ಕುಟ್ಟಲು ರುಬ್ಬಲು ಬಳಸುವ ಸಾಧನ (ಕೊರಲಸತ್ವಮಿಲ್ಲದೆ ಒರಲಂ ನುಂಗಿದರೆಂಬ ನಾೞ್ಗಾದೆಯಂತೆ: ಧರ್ಮಾಮೃ, ೭.೧೦೮ ವ)

ಒರಸು
ಉಜ್ಜು, ಘರ್ಷಿಸು (ಬೆರಲೊಳ್ ಬೀಣೆಯ ತಂತಿಗಳ್ ಒರಸಿದ ಕೆಂಗಲೆಗಳ್ ಅಕ್ಷಮಾಲೆ: ಪಂಪಭಾ, ೬. ೧೦)

ಒರೆ
ತಿಳಿಸು, ಹೇಳು (ಈ ಪುಟ್ಟಿನೊಳ್ ದೊರೆಕೊಳ್ವಂತದು ತಾನೊಡರ್ಚು ಮುಱುವುಟ್ಟಲ್ಲಾದೊಡಂ ನೀನೆ ಎಂದು ಒರೆವನ್ನಂ ಬಿರಿದತ್ತು ಭೋಂಕನೆರ್ದೆ ತದ್ರಾಜೇಂದ್ರಚಂದ್ರಾರ್ಕನಾ: ಕಾದಂಸಂ, ೭. ೨೫); [ಚಿನ್ನವನ್ನು] ಒರೆಗೆ ಹಚ್ಚು, ಪರೀಕ್ಷಿಸು (ತಮ್ಮ ಮತಮಂ ಮತ್ತಾ ಚರಿತದೊಡನೆ ಓಜೆಯಿಂ ನಿಜಚರಿತಮಂ ಒರೆದೆಯ್ದೆ ನೋಡುವುದೆಗ್ಗೇ: ಸಮಯಪ, ೧೩. ೫); ಸಮಾನತೆ (ಕಾಗಿಣಿಗೆ ಮರಂ ಬೀೞಲ್ವೋಗಿರ್ಕುಂ ಕಡಲ ಕಡೆವರಂ ನಿಮಿರ್ದ ಮಹೀಭಾಗಮಂ ಅನುಜಂಗಿತ್ತಂ ಭಾಗಿಗಳಾರ್ ಸೀರಪಾಣಿಯ ಒರೆಗಂ ದೊರೆಗಂ: ಪಂಪರಾ, ೬. ೧೩೪)


logo