logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಒಪ್ಪಿಡಿ
ಒಂದು ಹಿಡಿ (ಅದಱಂ ಕುಲಂ ಒಪ್ಪಿಡಿ ತವುಡುಂ ಇರದು ಚರಿತಂ ಅಮೂಲ್ಯಂ: ಸಮಯಪ, ೧೦. ೧೩೭)

ಒಪ್ಪಿಸು
[ಮರಳಿ] ವಶಕ್ಕೆ ಕೊಟ್ಟುಬಿಡು (ಮಗನ ಕರೆದು ಒಪ್ಪಿಸವೇೞ ಯುಧಿಷ್ಠಿರಂಗೆ ಮುನ್ ಗೆಲ್ದ ವಸ್ತುವಾಹನಚಯಮಂ: ಪಂಪಭಾ, ೬. ೭೬)

ಒಪ್ಪು
ಅಂದವಾಗು (ಕಳಹಂಸನಾದರಮಣೀಯತರಂ ಮದದಂತಿದಾನಗಂಧೋತ್ಕಟಂ ಒಪ್ಪುಗುಂ .. .. ಆ ವಿಜಯಾರ್ಧಪರ್ವತಂ: ಆದಿಪು, ೧. ೬೩)

ಒಪ್ಪುಗೊಳ್
ವಹಿಸಿಕೊ (ತನುವನಿನ್ನೊಪ್ಪುಗೊಳ್ ಮುನ್ನಮಿನ್ನುಂ ಕರಣೀಯಂ ನಿನ್ನ ವಾಕ್ಯಂ ನಿಜಮತಮೆ ಮತಂ: ಆದಿಪು, ೨. ೪೯); ಒಪ್ಪಿಸಿಕೊ (ಒಪ್ಪುಗೊಳ್ಗೆ ತನ್ನಳಿಯನಂ ಎಯ್ದೆ ಪಾಲಿಸುಗೆ ಬಂದಿದಂ ಈಗಳ್ ಅನಾಥಯೂಥಮಂ: ಆದಿಪು, ೪. ೮೪)

ಒಪ್ಪುವೆಱು
ಅಂದವನ್ನು ಹೊಂದು (ಸೂಸಕಂಗಳಿಂ ಒಪ್ಪುವೆತ್ತ ಉನ್ನತಧ್ವದೋಳಿಯಿಂ ಬಿಡುಮುತ್ತಿನಿಂ ಕಡುಶಫಭೆವೆತ್ತು: ಧರ್ಮಾಮೃ, ೬. ೩೧)

ಒಬ್ಬಳ
[ಒರ್+ಬಳ] ಒಂದು ಬಳ್ಳ (ಕಱೆವುವು ಗೋಸಹಸ್ರಂ ಒಳವಾದೊಡಂ ಒಬ್ಬಳ ಪಾಲೆ: ಸಮಯಪ, ೫. ೭೯)

ಒಬ್ಬುಳಿ
ರಾಶಿ (ನಿಬ್ಬೆರಗುವಟ್ಟು ಸೌಂದರಿ ಒಬ್ಬುಳಿಗೊಂಡಳದಣ್ಮದಿನೀಕ್ಷಿಸಿ ನೃಪನಂ: ಉದ್ಭಟಕಾ, ೧೧. ೨೩)

ಒಬ್ಬುಳಿಕ್ಕು
ಕೂಡಿಡು (ಅದೃಶ್ಯಾಕಾರದಿಂ ಕೊಯ್ದು ಒಬ್ಬುಳಿಕ್ಕಳ್ ಅದಂ ವಿಪ್ರಂ ಕಂಡು: ತ್ರಿಷಷ್ಟಿಪು, ೫೬. ೧೦ ವ)

ಒಮ್ಮು
ಅನುಸರಿಸಿ ನಡೆ (ಒಮ್ಮು ಅನುವರ್ತನೇ: ಶಬ್ದಮದ, ಧಾ ೪೯೯)

ಒಮ್ಮುಕ್ಕುಳ್
ಒಂದು ಮುಕ್ಕು, ಬಾಯಿ ಹಿಡಿಯುವಷ್ಟು (ತಮಮೆಂಬ ತಮಕ್ಕೆ ಒಮ್ಮುಕ್ಕುಳಾದುದು ಜಗದ್ವಿಧುಬಿಂಬಂ: ಲೀಲಾವತಿ, ೧೪. ೧೦೪)


logo