logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಒದಱು
ಭುಜ ಅಥವಾ ತೊಡೆಯನ್ನು ತಟ್ಟು (ಗಿರಿಶನಂ ಆರಾಧಿಪ ದೈತ್ಯರೆ ಗಿರಿಶನೊಳ್ ಒದಱ ಕಾದುತಿರ್ಪರ್: ಸಮಯಪ, ೧೦. ೬೬); ಕೊಡಹು; ಕಿರುಚು (ನಾಗಂಗಳ್ ಪಡೆಗಳನೆತ್ತಿ ನಾಲಗೆಗಳಂ ಪೊಳೆಯಿಸುತ್ತುಂ ಬಂದೊಡೆ ನೀಂ ಒದಱ ಅವಂ ಬಗ್ಗಿಸಿದೊಡೆ: ವಡ್ಡಾರಾ, ಪು ೧೦೦, ಸಾ ೮)

ಒದೆ
ಕಾಲಿನಿಂದ ತುಳಿ (ಕಾಲಿಂದಂ ತಲೆಯನೊದೆದು: ವಡ್ಡಾರಾ, ಪು. ೮. ಸಾ. ೧೭)

ಒದೆವಡೆ
ಒದೆತವನ್ನು ಪಡೆ; ಏಟು ತಿನ್ನು (ಲಲನೆಯರಿಂದ ಅಂದು ಒದೆವಡೆದಾ ನಲವಂ ತಳೆದ: ಕುಸುಮಾಕಾ, ೫. ೪೩)

ಒದ್ದೆ
ರಾಶಿ (ಬದ್ದವಣದ ಪಱೆಗಳ್ ಕಿವಿ ಸದ್ದಂಗಿಡೆಮೊೞಗೆ ದೇವದುಂದುಭಿರವಂ ಒಂದು ಉದ್ದಾನಿ ನೆಗೞೆ ಮುಗುಳ ಅಲರ ಒದ್ದೆ ಕರಂ ಸಿದ್ಧಮಾದುದು ಅಂಬರತಲದೊಳ್: ಪಂಪಭಾ, ೧೨. ೨೧೮); ನೆನೆದಿರುವುದು (ದೇವದುಂದುಭಿ ರವದೊಂದುದ್ದಾನಿ ನೆಗೞೆ ಮುಗುಳಲರೊದ್ದೆ ಕರಂ ಸಿದ್ಮಾದುದು ಅಂಬರತಲದೊಳ್: ಪಂಪಭಾ, ೧೨. ೨೧೮)

ಒನಕೆ
ಕುಟ್ಟುವ ಸಾಧನ,; ಮುಸಲ (ದಂತದ ಒನಕೆಯನೆತ್ತು ನುಣ್ದನಿಯ ಸುವ್ವಿಯ ಗಾವರದೊಳ್ ತೊಡರ್ಚಿ: ಲೀಲಾವತಿ, ೮. ೩೦)

ಒನಕೆವಾಡು
ಕುಟ್ಟುವಾಗ ಹೇಳುವ ಹಾಡು (ಎನಿತೋದನೋದಿಯುಂ ಮನದನಿತೆ ವಲಂ ಬುದ್ಧಿಯಕ್ಕುಂ ಎಂದು ಸಮಸ್ತಾವನಿಯ ಜನಂ ಒನಕೆವಾಡಪ್ಪಿನೆಗಂ ಸಲೆ ನುಡಿದ ನುಡಿ ಯಥಾರ್ಥಂ ನಿನ್ನೊಳ್: ಪಂಚತಂತ್ರ, ೬೮)

ಒನಲ್
ಕ್ರೋಧಗೊಳ್ಳು (ಬಿರಿಯಿಸೆ ಬೇಟದೊಳ್ ಬಿರಿದ ನಲ್ಲರಗಲ್ದು ಕನಲ್ದು ಒನಲ್ದು ನಲ್ಲರ ದೆಸೆಯಿಂದಂ ಅೞವರೆ: ಆದಿಪು, ೩, ೮೬)

ಒನಲಿ
ಜರಡಿ (ಒನಲಿಯಂತೆ ಪೊಲ್ಲಮೆಯಂ ಪಿಡಿಯದೆ ಕೋಣನಂತೆ ಕದಡದೆ ಬಕನಂತೆ ಧೂರ್ತನಾಗದೆ: ಧರ್ಮಾಮೃ, ೧. ೧೩೮ ವ)

ಒನಲಿಸು
ಕೆರಳಿಸು (ಆವಡವಿಗಳೊಳ್ ಪಣ್ಪಲಂ ಆವಗಂ ಒಳವು ಅಲ್ಲಿಗಱಸಿ ಪರಿಪರಿದು ಕರಂ ತಾವಡಿಗೊಳ್ವ ಈ ಭೀಮನ ಬೇವಸಮಿದು ನಿನ್ನ ಮನಮಂ ಒನಲಿಸಿತಿಲ್ಲಾ: ಪಂಪಭಾ, ೭. ೪೬)

ಒನೆ
ಧಾನ್ಯವನ್ನು ಮೊರದಲ್ಲಿ ಶುದ್ಧಗೊಳಿಸು (ಒನೆ ಶೂರ್ಪಕರಣೇ: ಶಬ್ದಮದ, ಧಾ ೪೩೨)


logo