logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಒತ್ತೆಗೊಡು
[ಸೂಳೆಯರಿಗೆ] ಒತ್ತೆ ನೀಡು (ಅನಂಗಸೌಂದರಿಯೆಂಬ ಸೂಳೆಯಂ ಕಂಡು ಕಣ್ಬೇಟಂಗೊಂಡು ಒತ್ತೆಗೊಟ್ಟು: ಧರ್ಮಾಮೃ, ೨. ೭೨ ವ)

ಒತ್ತೆಗೊಳ್
ವಿಟರಿಂದ ಮುಂಗಣ ಹಣ ಪಡೆ, ವಶವಾಗು (ನಿಱಗಳನಿಕ್ಕಿ ದಾಂಟಿಸದೆ ದುಂಡಿಸುವಾಕೆಯಂ ಒತ್ತೆಗೊಳ್ಳದಂತೆಱೆಯದೆ ತೇಪೆಗುಳ್ಳ ಬಳಿ ನೀರ್ಗಳನಗ್ಗದ ಪೆಣ್ಗೆ: ಲೀಲಾವತಿ, ೨. ೯೩)

ಒತ್ತೆಯಿಡು
ಅಡವಿಡು (ಸಮಂತಾವಗಂ ತಲೆಯಂ ಮೂಗುಮಂ ಒತ್ತೆಯಿಟ್ಟು ನೆರೆವಂತುಟೇನವರ್ ಗಾಂಪರೇ: ಪಂಪಭಾ, ೪. ೮೪)

ಒತ್ತೆವಿಡಿ
ಒತ್ತೆಯಾಗಿ ಸ್ವೀಕರಿಸು (ನಿನ್ನ ನನ್ನಿಯೊಳಂ ವರ್ಷಾವಧಿಯೊಳಲ್ಲದೆ ನೆಲನಂ ಒತ್ತೆವಿಡಿಯೆಂ ಎಂದೊಡೆ; ಪಂಪಭಾ, ೭. ೩ ವ)

ಒತ್ತೆವಿಡಿಸು
ಒತ್ತೆಯಿಂದ ಬಿಡಿಸು (ಸುಣ್ಣದೆಲೆಯಂ ಒತ್ತೆಯಿಟ್ಟು ಮದದಾನೆಯುಮಂ ಮಾಣಿಕಮುಮಂ ಒತ್ತೆವಿಡಿಸಲಟ್ಟುವ: ಪಂಪಭಾ, ೪. ೮೭ ವ)

ಒತ್ತೆವೋಗು
ಒತ್ತೆಯಾಗಿ ಹೋಗು (ದಾಯಿಗಂಗೆ ನೆಲಂ ಜೂದಿನೊಳ್ ಒತ್ತೆವೋಗೆ: ಪಂಪಭಾ, ೮. ೫)

ಒದವಿಸು
ಉಂಟುಮಾಡು (ಅಶೇಷ ಭವ್ಯಸಸ್ಯಸಂಪತ್ತಿಯಂ ನಿತಯಂ ಒದವಿಸುತ್ತುಂ ಒರ್ಮೆ ಸಕಳಸಂಪದುತ್ತರಮೆನಿಸಿ ಉತ್ತರ ಮಧುರೆ: ಆಚವರ್ಧ, ೩. ೧ ವ)

ಒದವು
ಉಂಟಾಗು (ಅರಗಿನ ಮನೆಯೊಳ್ ಪಾಂಡವರ್ ಉರಿದು ಅೞದರ್ ಅಕ್ಕಟ ಅಯ್ಯೊ ದುರ್ಯೋಧನನೆಂಬ ಎರಲೆಯಿಂ ಎಂದು ಅೞುತುಂ ತತ್ಪುರಜನಂ ಅೞಲ್ ಒದವೆ ಪರಿದು ನೋಡಿತ್ತಾಗಳ್: ಪಂಪಭಾ, ೩. ೮); ವಯಸ್ಸಿಗೆ ಬರು (ಒದವಿದ ಲತೆಗಂಕುರ ಗರ್ಭದ ಚಿಹ್ನಂ ಮೂಡುವಂದದಿಂ ದೇವಕಿಗುರ್ವಿದ ಗರ್ಭದ ಚಿಹ್ನಂ ಮೂಡಿದುದಾ ಕಂಸಂಗೆ ಮಿೞ್ತು ಮೂಡುವ ತೆಱದಿಂ: ನೇಮಿನಾಪು, ೭. ೩೭); ತೋಡು (ಒದವಿದರೆ ಬಿಳಿದೆನಿಪ ಬರಿವದಣೆಯ ಕಿಱುದೆಂಗು .. .. ನೀರಕ್ಕುಂ: ಲೋಕೋಪಕಾ, ೫. ೧೭); ಏಳಿಗೆ ಹೊಂದು, ಅಧಿಕವಾಗು (ಪದೆಪಿಂ ತನ್ನಯ ಸಾರ್ಗೆ ವಂದ ಸುತೆಯೊಂದಾಶ್ಚರ್ಯ ಸೌಂದರ್ಯಸಂಪದಮಂ ಶ್ರೀಜಿನಪಾದಭಕ್ತಿಯ ಒದವಂ ಕಂಡು: ಶಾಂತೀಶ್ವಪು, ೨. ೨೦); ಅಭಿವೃದ್ಧಿ (ಮದೀಯ ಮನೋಗತ ಕಾಮಸಾಗರದ ಒದವಿಂಗೆ ನಲ್ಲಳ ವಿಲೋಚನಚಂದ್ರಿಕೆಯೊಂದೆ ಸಾಲದೇ: ಪಂಪಭಾ, ೫. ೧೧); ಸಾಧಿಸು (ಶ್ರೀವಿಜಯನೊಳಂ ಉರ್ವರಾಸ್ಯ ತಿಲಕನೊಳಂ ಅನಿಬರ್ ನೆರೆದುಂ ಕಾದಿಯುಂ ಒದವಲಾಱದುದಱಂ: ಶಾಂತಿಪು, ೬. ೩ ವ)

ಒದವುಗೆ
ಉಂಟಾಗಲಿ (ಒದವುಗೆ ನಿನ್ನ ಸಂತತಿಗೆ ನೂರ್ವರ್ ಉದಗ್ರ ಸುತರ್ಕಳ್ ಒಂದೆ ಗರ್ಭದೊಳ್ ಎನೆ ಕೆಮ್ಮನಿಂತು ಪೊಸೆದಿಕ್ಕಿದೆ ಪೊಲ್ಲದುಗೆಯ್ದೆ: ಪಂಪಭಾ, ೧, ೧೩೧)

ಒದವೇಱು
[ಒದ+ಪೇಱು] ಬಹಳವಾಗಿ ತುಂಬಿಕೊ (ಪಸರಿಸಿ ದುಗ್ಧಾಬ್ಧಿಜಳಪ್ರಸರಂನೊದವೇಱ ಬಂದು ಕಱೆವುವು ಮೇಘಪ್ರಸರಂಗಳ್: ಆದಿಪು, ೧. ೫೯) [ಎಲ್. ಬಸವರಾಜು ಅವರು ಸ್ವೀಕರಿಸಿರುವ ಪಾಠ]


logo