logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಒಡಸಾಯ್
ಜೊತೆಯಲ್ಲಿ ಮರಣಹೊಂದು (ಬಿಡದೆ ಪೊಗೆ ಸುತ್ತೆ ತೋಳಂ ಸಡಿಲಿಸದೆ ಆ ಪ್ರಾಣವಲ್ಲಭರ್ ಪ್ರಾಣಮಂ ಅಂದು ಒಡಗಳೆದರ್ ಓಪರ್ ಓಪರೊಳ್ ಒಡಸಾಯಲ್ ಪಡೆದರ್ ಇನ್ನವೇಂ ಸೈಪು ಒಳವೇ: ಆದಿಪು, ೫. ೨೪)

ಒಡೆ
ಭಾಗವಾಗು, ಚೂರಾಗು (ಪನ್ನೆರಡು ತಲೆಯ ಪಾವುಮಂ ಚಂದ್ರನೊಡೆದುದುಮಂ .. .. ಕನಸುಗಳ ಕಂಡು: ವಡ್ಡಾರಾ, ಪು. ೮೫, ಸಾ. ೨೭); ಚೂರುಮಾಡು ಕುಮಾರನ ಎರಡುಂ ಕಣ್ಗಳುಮಂ ಒಡೆದು ಕುರುಡನಂ ಮಾಡಿದ: ವಡ್ಡಾರಾ, ಪು. ೭೫, ಸಾ. ೨೩)

ಒಡೆಬೀೞ್
ಒಡೆದು ಬೀಳು (ಪುರುಷಂ ನುಡಿಯದುದು ಏನಾಗಸದಿಂದ ಒಡೆಬಿರ್ದೊಡೆ ವೇದಮನಱವರ್ ತಿಳಿಯಿಮಿದಂ: ಸಮಯಪ, ೧೧. ೪)

ಒಡೆಯ
ಪ್ರಭು; ಯಜಮಾನ (ಒಡೆಯನ ಮನೆಗೆ ಬಂದ ಬಂಟರಂತೆ: ಧರ್ಮಾಮೃ, ೧೦. ೨೬ ವ); ಉಳ್ಳ ಅಥವಾ ಹೊಂದಿದ ಎಂಬರ್ಥದ ಪ್ರತ್ಯಯ (ಅರಸನಂ ಬಯ್ಗು ಇರುಳಿನ ಜಾವದೊಳ್ ಉದ್ಯಾನವನಕ್ಕೊಡಗೊಂಡು ಪೋಗಿ ಗುಂಡಿತಪ್ಪುದೊದು ನಾಡೆ ಕೆಸಱನೊಡೆಯ ಪೞವಾವಿಯ ತಡಿಯೊಳ್ ಇಱದು ಕೊಂದು: ವಡ್ಡಾರಾ, ಪು ೧೮೦, ಸಾ ೨೩): ಹಣವಂತ (ಸ್ವಾಮಿ ಭೃತ್ಯಸಂಬಂಧಮುಮಂ ಒಡೆಯ ಬಡವರೆಂಬ ದೇಶಭಾಷೆಯುಮಂ: ಸುಕುಮಾಚ, ೧೧. ೩೪ ವ)

ಒಡೆಯದು
ಉಳ್ಳುದು (ಇಂದ್ರನೀಲ ಮಾಣಿಕದೊಳ್ ಓರಂತಪ್ಪ ಬಣ್ಣಮಂ ಒಡೆಯದು ಮಲಯಸುಂದರನೆಂಬ ಆನೆಯುಂಟು: ವಡ್ಡಾರಾ, ಪು. ೩೪, ಸಾ. ೧೯)

ಒಡೆಯಿಕ್ಕು
ಚೂರುಮಾಡು (ತನ್ನನೆತ್ತಿಕೊಂಡು ಆಗ್ರಹಮಂ ಒಡೆಯಿಕ್ಕುವಂತೆ ಇಕ್ಕಿ ಪೋಪುದುಂ: ಚಂದ್ರಪ್ರಪು, ೫. ೪೧ ವ)

ಒಡೆಯಿಡು
ಒಡೆಯಿಕ್ಕು (ಕನಲ್ದು ಒಡೆಯಿಟ್ಟೊಡೆ ಒಂದು ಪೋೞ್ ಅನಿತಱೊಳ್ ಇರ್ದುದೊಂದು ಕಡಿ ಪೀಠದೊಳ್ ಇರ್ದಪುದೆಂಬರೆಲ್ಲರುಂ: ಸಮಯಪ, ೯. ೭)

ಒಡ್ಡ
ರಾಶಿ, ಸಮೂಹ (ವಿಳಾಸದ ಒಡ್ಡವಿನಿತುಂದಿವದಿಂದ ಒಡವಂದುದುಬನಿತ್ತಾದುದು ರೂಪು: ಆದಿಪು, ೩. ೧೦); ಜೂಜಿನ ಪಣದ್ರವ್ಯ (ನಾೞವಾಸಗೆಗಳಂ ಅರಸಾಳಂತೆ ಕಣ್ಣಱದು ಮೆಟ್ಟಿ ಮಟ್ಟಮಱದು ಇಕ್ಕುವಾಗಳ್ ಒಡ್ಡಮಂ ಪೇೞಮೆನೆ: ಪಂಪಭಾ, ೬. ೭೧ ವ)

ಒಡ್ಡಣ
ಗುಂಪು (ಮಿಸುಪ ಅಸಿಧೇನು ಮೀನಿವಹಂ ಪೊಳೆವ ಅಡ್ಡಣದ ಒಡ್ಡಣಂ ವಿರಾಜಿಸುವುದು: ಆಚವರ್ಧ, ೮. ೧೨); ಸೈನ್ಯ (ಶ್ವೇತನ ಗಂಗಾಜಾತನ ಮಾತನೆ ಪಾರ್ದು ಎರಡು ಒಡ್ಡಣಂ ಕಾದಲ್ಕೆಂದೀ ತೆಱದಿನೊಡ್ಡಿ ನಿಂದುವು ಭೂತಳಮಳ್ಳಾಡೆ ಕೆಸಱ ಕಡಿತದ ತೆಱದಿಂ: ಪಂಪಭಾ, ೧೦. ೫೩); ವ್ಯೂಹ (ಪಲವುಂ ತೆಱದಾಯುಧಂಗಳಿಂ ಪಲವು ವಿಧಂಗಳಿಂ ಪಲವುಂ ಒಡ್ಡಣದಿಂ ಪಲರುಂ ಪೊಗೞನಂ .. .. ಅದ್ಭುತಮಾಯ್ತು ಆಹವಂ: ಪಂಪರಾ, ೧೪. ೯); ಯುದ್ಧರಂಗ (ತೞತೞ ನೇಸಱ್ ಮೂಡುವುದುಂ ಒಡ್ಡಣಕೆಳ್ತಂದರ್: ಪಂಪಭಾ, ೧೧. ೬)

ಒಡ್ಡಯ್ಸು
ಸೋಲಿಸು, ಪ್ರತೀಕಾರ ಮಾಡು (ಮನೆಯೊಳ್ಮಯ್ಮೆಗೆ ಬಾತುಕೊಂಡು ಸಿರಿಯೊಳ್ ಕಣ್ಗಾಣದೆ ಒಡ್ಡಯ್ಸುವಂದಿನ ನೀಮಾರ್ಗೆ ಎಲಗೆ ನಿಮ್ಮನಾವಱಯೆಂ: ಸುಕುಮಾಚ, ೪. ೨೬)


logo