logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಒಡನೋದಿದಂ
ಒಡನೋದಿ, ಸಹಪಾಠಿ (ಎನ್ನೊಳೆ ಮುನ್ನೆ ಮಚ್ಚರಿಪನೇ ಒಡನೋದಿದಂ ಎಂಬ ಮೇಳದಿಂದ: ಪಂಪಭಾ, ೧೨. ೨೩)

ಒಡಮೆ
ಧನ, ಒಡವೆ (ನೀಮಿಂತು ಅಱಯುತ್ತುಂ ಪೆಱರೊಡಮೆಯಂ ಉಱೆ ಸೆಱೆವಿಡಿದಿರ್ಪಿರಿ ಇನ್ನರುಂ ಉರ್ವಿಯೊಳ್ ಒಳರೇ: ಪಂಪಭಾ, ೮. ೧೮)

ಒಡರಿಸು
ಉಂಟುಮಾಡು (ಜ್ಯೋತಿರ್ಲೋಕಂ ಇದೊಂದುಂಟೆಂಬ ವಿವೇಕಮಂ ಒಡರಿಸಿದುದು ಅಮರಸಮಿತಿಯ ಮನದೊಳ್: ಆದಿಪು, ೭. ೯೪); ಪ್ರಯತ್ನಿಸು (ಅವಧರಿಸಿ ಮನದೊಳ್ ಏನಾನುವನಾಗಳ್ ಕನ್ನೆ ನುಡಿಯಲ್ ಒಡರಿಸಿ ನಿಷ್ಕಂಪವೆನಿಪ್ಪ ತಾರೆಗಳ್ವೆರಸು ಎವೆಯಿಕ್ಕದೆ ನೋಡುತಿರ್ದಳ್ ಎನ್ನಯ ಮೊಗಮಂ: ಕಾದಂಸಂ, ೬. ೫); ಒಟ್ಟುಗೂಡಿಸು (ಅಮೃತ ಕಳಾಳಿಗಳ್ ಒಡರಿಸಿ ಶಶಿಕಾಂತಮೊಸರ್ವುದೊಂದಚ್ಚರಿಯೇ: ನೇಮಿನಾಪು, ೮. ೨೧)

ಒಡರ್ಚು
ತೊಡಗು, ಆರಂಭಿಸು (ಅಗ್ರತನೂಜೋತ್ಪತ್ಯುತ್ಸವಕ್ಕೆ ಒಡರ್ಚುವ ಪದದೊಳ್: ಆದಿಪು, ೧೧. ೪); ಪ್ರಯತ್ನಿಸು (ಕಂಪಿನೊಳ್ ಪೊರೆವ ವಸಂತದ ಒಳ್ಮುಗುಳ ತಣ್ತೊಡವಂ ತುಡಿಸಲ್ಕೆ ಒಡರ್ಚಿದಳ್: ಕಾದಂಸಂ, ೮. ೫೨); ಉಂಟುಮಾಡು (ಉರುತರ ಸಿದ್ಧಲಿಂಗಯತಿತುಂಗಂ ಒಡರ್ಚುಗೆ ಸಜ್ಜನೇಷ್ಟಮಂ: ರಾಜಶೇವಿ, ೧. ೧೪)

ಒಡಲ್
ಶರೀರ (ಪಡೆದರ್ ತಾಯುಂ ತಂದೆಯುಂ ಒಡಲಂ ಪ್ರಾಣಮುಮಂ ಅವು ಅವರವು ಕೆಯ್ಯೆಡೆಯಂ ಕುಡುವುದು ಅರಿದಾಯ್ತೆ ನೀಂ ಎನಗೆ ಎಡೆಮಡಗದೆ ಬೆಸಪ ತೊೞ್ತುವೆಸನಂ ಬೆಸಸಿಂ: ಪಂಪಭಾ, ೯. ೮೧)

ಒಡಲಳವಿ
ಒಡಲ ಅಳವಿ, ದೇಹದ ಅಳತೆ (ಕುಲಗಿರಿ ಕೆಡೆವಂತೆ ಅಯ್ಗಾವುದು ನೆಲಂ ಒಡಲಳವಿಯಾಗೆ ಬಿೞರ್ದ ಘಟೋತ್ಕಚನ ಸಾವಿಂಗೆ ಕರಮೞಲ್ದು: ಪಂಪಭಾ, ೧೨. ೧೫ ವ)

ಒಡಲುರಿ
[ವಿರಹತಾಪದಿಂದ] ಮೈ ಸುಡು (ಅತ್ತ ಸುಭದ್ರೆಯುಂ ಒಡಲುರಿಯುತ್ತಿರೆ ಮರವಟ್ಟು ವಿಜಯನಿರ್ದತ್ತಲೆ ನೋಡುತ್ತಿರೆ: ಪಂಪಭಾ, ೪. ೫೪)

ಒಡವಡೆ
[ಒಡಂ ಪಡೆ] ಕೂಡಿಯೇ ಪಡೆ (ಪಡೆದೊಡೆ ಕಂಪಂ ಬಣ್ಣಬಡೆಯವು ಬಣ್ಣಮನೆ ಪಡೆದುವಪ್ಪೊಡೆ ಕಂಪಂ ಪಡೆಯವು ಉೞದ ಅಲರ್ಗಳ್ ಎರಡುಮಂ ಒಡವಡೆದ ಈ ಚಂಪಕಕ್ಕೆ ಪೂಗಳ್ ದೊರೆಯೇ: ಆದಿಪು, ೧೧. ೧೧೮)

ಒಡವರ್
ಜೊತೆಯಲ್ಲಿ ಬರು (ಒಡವಂದಂಕದ ಕೌರವರ್ ದ್ರುಪದನ ಅಂಬ ಏಱಂಗೆ ಮೆಯ್ಯೊಡ್ಡದೆ ಒಡ್ಡುತಿರೆ ಸೂಸೆ ಬೀೞ್ವ ತಲೆಗಳ್ ಸೂೞ್ಪಟ್ಟಂ: ಪಂಪಭಾ, ೨. ೬೨)

ಒಡವರಿ
ಜೊತೆಯಾಗಿ ಹರಿ (ನೆತ್ತರ ತೊಱೆಗಳ್ ಸುಲಇಸುೞದು ಒಡಬರಿದುವು: ಪಂಪಭಾ, ೧೧. ೩೬)


logo