logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಏಗು
ಏನು ಮಾಡು, ಏನುಪಯೋಗ (ಮುನ್ನಂ ಎನ್ನ ಮಾಡಿದ ಪಾಪ ಫಲಂ ಈ ನೆವದಿಂ ಫಲಮನೀಯಲೆಂದು ಬಂದುದಕ್ಕೆ ನೀವೇಗುವಿರಿ: ಧರ್ಮಾಮೃ, ೭. ೬೯ ವ)

ಏಗೆಡು
ಏನು ಕೆಡು, ಹಾಳೇನಾಗು (ಎನಗರಸಿಯಾಣೆ ನಿನ್ನೊಡನೆನಗೆ ಏಗೆಟ್ಟಪುದೆಂದು ಱೋಡಾಡಲ್: ಪಂಪಭಾ, ೮. ೬೮)

ಏಗೆಯ್ದುಂ
ಏನುಮಾಡಿದರೂ (ತನ್ನ ನುಡಿದ ಪ್ರತಿಜ್ಞೆಯಂ ಏಗೆಯ್ದುಂ ತಪ್ಪಿದನಿಲ್ಲ: ಪಂಪಭಾ, ೧, ೮೩ ವ)

ಏಗೆಯ್ವುದು
ಏನು ಮಾಡಬೇಕು (ಕೃಷ್ಣದ್ವೈಪಾಯನನಂ ನೆನೆದು ಬರಿಸಿದೊಡೆ ವ್ಯಾಸಮುನೀಂದ್ರನೇಗೆಯ್ವುದೇನಂ ತೀರ್ಚುವುದೆಂದೊಡೆ ಸತ್ಯವತಿಯಿಂತೆಂದಳ್: ಪಂಪಭಾ, ೧. ೮೪ ವ)

ಏಗೆಯ್ವುದೊ
ಏನನ್ನು ಮಾಡಬೇಕಾಗಿದೆ (ಬೆಸನೇಂ ಏಗೆಯ್ವುದೊ ನಿನಗೊಸೆದೇನಂ ಕುಡುವುದು ಎಂದೊಡೆ ಅವಳ್ ಮಕ್ಕಳ ಒಸಗೆಯನೆನಗೀವುದು ನಿನ್ನೆಸಕದ ಮಸಕಮನೆ ಪೋಲ್ವ ಮಗನಂ ಮಘವಾ: ಪಂಪಭಾ, ೧. ೧೩೯)

ಏಗೊಳ್
ಒಪ್ಪು, ಸಮ್ಮತಿಸು (ನಿಮ್ಮಡಿ ನೀಮೀ ಚಾತುರ್ಮಾಸಂ ಇಲ್ಲಿರ್ಪನ್ನೆಗಂ ಸ್ವಾಧ್ಯಾಯ ಅನುಷ್ಠಾನ ನಿಯಮದಿಂ ಮೋನಗೊಂಡಿರ್ಪುದು ಇದಂ ನಿಮ್ಮನಾಂ ಕಯ್ಯನೊಡ್ಡಿ ಬೇಡಿದೆನೆಂಬುದುಂ ಮುನೀಶ್ವರರ್ ಏಗೊಂಬುದುಂ: ಸುಕುಮಾಚ, ೧೧. ೩೮ ವ)

ಏಡ
ಕಿವುಡ (ಕವಿತಾರಹಸ್ಯಮಂ ಸತ್ಕವಿಯಱಗುಮ್ ಅನೇಡಮೂಕಂ ಏಡಂ ಜಡಂನೆಂಬವನಱಗುಮೆ: ಆದಿಪು, ೧. ೨೦)

ಏಡಿಸು
ಹಾಸ್ಯಮಾಡು (ತುಂಬಿಗಳ ಬೞವಿಡಿದು ಬನದೊಳೆಡೆಯಾಡುವ ಸಬರಿಯರ ನಡೆಯಂ ಏಡಿಸುವಂತೆ ಮೆಲ್ಲಡಿಯಿಡುವ ಪೆಣ್ಣಂಚೆಗಳ: ಕಬ್ಬಿಗಕಾ, ೧೭ ವ)

ಏಡು
ಕೊಳೆ (ಮೆಯ್ಯೊಳ್ ಆವೆಡೆಯೊಳಂ ಏಡು ಕೂಡೆ: ಕರ್ಣನೇಮಿ, ೩. ೧೧೨)

ಏಣ
ಜಿಂಕೆ (ಏಣ ಶಾಬತತಿ ನೀರುಣೆ ಕಣ್ಗೊಳಿಪ ಆಳವಾಳಮಂಡಳದಿಂ ಅದೊಂದು ಮುಂದೆಸೆದು ತೋಱದುದು ಆಗಳ್ ಅಶೋಕಭೂರುಹಂ: ಕಾದಂಸಂ, ೧. ೭೩)


logo