logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಏೞ್ಗೆವೆಱು
ಏೞ್ಗೆವಡೆ (ವಿಶ್ವಜಗಜ್ಜನ ಕೀರ್ತನಾರವಂಗಳಿಂ ಇನಿಸು ಏೞ್ಗೆವೆತ್ತು .. .. ಪುಗುತಂದಂ ಅಚ್ಯುತಂ: ಜಗನ್ನಾವಿ, ೧೦. ೧೩೧)

ಏೞ್ತರ್
ಹೊರಟು ಬಾ (ಆದಿಬ್ರಹ್ಮನೆೞ್ತರ್ಪುದನೆ ಕನಸುವೇೞ್ದಪ್ಪುದು ಎಂದು ಅಗ್ರಜಂಗೆ ಆದರದಿಂದಮ ಪೇೞ್ದು: ಆದಿಪು, ೯. ೧೩೦)

ಏೞ್ತರ
ಆಡಂಬರ (ವದನ ವಿಕಾಸದಿಂ ಬರವಿನ ಏೞ್ತರದಿಂದಮೆ ಕಾರ್ಯಸಿದ್ಧಿಯಾದುದು: ಪಂಪರಾ, ೧೧. ೧೬೨)

ಏೞ್ಪೋಗು
ಎದ್ದು ಹೋಗು (ಏೞ್ಪೋಗು ದೂತನಪ್ಪನ ಬೇೞ್ಪನ ನುಡಿಗೇೞ್ದು ಮುಳಿಯಲಾಗದು ನೀನುಂ ಮೆೞ್ಪಟ್ಟು ವಿದುರನೆಂಬೀ ತೊೞ್ಪುಟ್ಟಿಯ ಮನೆಯ ಕೂೞೆ ನುಡಿಯಿಸೆ ನುಡಿದೈ: ಪಂಪಭಾ, ೯. ೫೮)


logo