logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಏಹಿ
ಹೋಗು (ಮನದೊಳ್ ನಿಷ್ಕಾರಣಂ ಕಾಯ್ವರೇಂ ಪರಚಿಂತಾಕರ ಏಹಿ ಎಂಬ ನುಡಿಯಂ ಮುಂ ಕೇಳ್ದೆನಿಲ್ಲಾಗದೇ: ಪಂಪಭಾ, ೭. ೩೫)

ಏಳಕ
ಟಗರು (ಅವಿ ಮೇಷ ಉರಭ್ರಂ ಮೇಂಡವದೇಳಕ: ಅಭಿಧಾವ, ೧. ೧೫. ೧೧)

ಏಳಾ
ಏಲಕ್ಕಿ (ನೆಗೞ ಕರ್ಪೂರ ಕಾಳಾಗರು ಮಳಯಮಹೀಜಂಗಳ್ ಏಳಾಲತಾಳೀ ಸ್ಥಗಿತಂಗಳ್ ಕಣ್ಗೆವಂದಿರ್ದುವಂ ಇವನೆ ವಲಂ ಕೊಂಬುಗೊಂಡ ಅಂಗಜಂ .. .. ಎಚ್ಚು ಮೆಚ್ಚಂ ಸಲಿಸುವಂ: ಪಂಪಭಾ, ೪. ೨೩)

ಏಳಾಗಂಧ
ಏಲಕ್ಕಿಯ ವಾಸನೆ ಮುನ್ನಿನ ಸಪ್ತಚ್ಛದಗಂಧದಿಂ ಏಳಾಗಂಧದಿಂ ಎಸೆವುದು ದೇವ: ಪುಷ್ಪದಂಪು, ೫. ೬೩)

ಏಳಾವನ
ಏಲಕ್ಕಿ ತೋಟ ಚೂತ ಸಪ್ತಚ್ಧದ ಏಳಾವನಸುರಭಿ .. .. ಆಶಾಚಕ್ರಂ ಗಂದೇಭಚಕ್ರಂ: ಆದಿಪು, ೧೧. ೩೦)

ಏಳಿದ
ತಿರಸ್ಕಾರ ಹುಟ್ಟಿಸುವ (ಕುಲಜನುಂ ಅಲ್ಲಂ ನಣ್ಪಿನ ಬಲಮುಂ ತನಗಿಲ್ಲ ಕಣ್ಗಂ ಏಳಿದಂ: ಕವಿರಾಮಾ, ೩. ೧೭೨); ಅವಮಾನ (ದೂತರಂ ಅಟ್ಟಿದೊಡೆ ಏಳಿದವಾತಂಗೆ: ಜಗನ್ನಾವಿ, ೯. ೧೮); ನಿಕೃಷ್ಟ (ಪಾದಮಾರ್ಗದಿಂ ಜಾನಕಿಯುಂ ಬಲಾಚ್ಯುತರುಂ ಏಳಿದರಂದದೆ ಬರ್ಪದಾವುದೋ: ಪಂಪರಾ, ೬. ೧೭೯)

ಏಳಿದಂಗೆಯ್
ತಿರಸ್ಕಾರ ಮಾಡು (ಏೞದಂಗೆಯ್ದು ನುಡಿದ ಕಪರ್ದಿಯ ಕಟೂಕ್ತಿಯಂ ಕೇಳ್ದು: ಶಬರಶಂ, ೪. ೩೦ ವ)

ಏಳಿದಂಬಗೆ
ತಿರಸ್ಕಾರದಿಂದ ಕಾಣು (ಶಲ್ಯನಂ ಅಂದು ಅಶಲ್ಯನಂ ಬಗೆವವೊಲ್ ಏಳಿದಂಬಗೆದು ದಂತಿಯಂ ಆಗಡೆ ತೋಱಕೊಟ್ಟು ತೊಟ್ಟಗೆ ರಥಮಂ ಪಡಲ್ವಡಿಸಿ ಪೂೞ್ದಂ ಅರಾತಿಯಂ ಅಸ್ತ್ರಕೋಟಿಯಿಂ: ಪಂಪಭಾ ಪರಿಷತ್ತು, ೧೦. ೧೧೧)

ಏಳಿದಂಮಾಡು
ಏಳಿದಂಗೆಯ್ (ಎನ್ನನೇಳಿದಂ ಮಾಡಿ ಮೂಗನರಿದು ಕನ್ನಡಿಯಂ ತೋಱುವಂತೆ: ಧರ್ಮಾಮೃ, ೯. ೧೪೦ ವ)

ಏಳಿದವಾಗು
ತಿರಸ್ಕಾರಯೋಗ್ಯವಾಗು (ಉತ್ತಮಕುಲಶೈಲಂ ಉನ್ನತಿಯಂ ಏಳಿದವಾಗೆ ಬಿಸೞ್ಪೊಡಂ ಬಿಸುೞ್ಕೆಮ ಬಿಸುಡೆಂ ಮದೀಯ ಪುರುಷವ್ರತಮೊಂದುಮಂ: ಪಂಪಭಾ, ೧. ೮೩)


logo