logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಆೞವಡು
ಆಳವನ್ನು ಹೊಂದು (ಆೞವಟ್ಟು ದಿಟ್ಟಿಗೊಲವನೋಗಿಪ ಲೀಲಾಸರೋವರಮಂ ರಾಜಹಂಸಂ ಲೀಲಾವತೀ ಜನಸಮೇತಂ ಪುಗೆ: ಚಂದ್ರಪ್ರಪು, ೭. ೧೧೯ ವ)

ಆೞಾೞ
ಹಟಮಾರಿತನ (ಆೞಾೞಗೆ ಬಲ್ಲಾಳನ ದಾೞಯ ದಾವಣಿಯ ತುರಗದೞಖುರಹತಿಯಿಂ ಪೇೞೆ ಪೆಸರಿಲ್ಲದಂತಿರೆ ಪಾೞಾದುದು: ಯಶೋಧಚ, ೧. ೧೪)

ಆೞಾೞಗ
ಮಾಲೆ, ಹಾರ (ಆೞಾೞಗಮೆಂದು ಒಂದು ಸಾಮಾನ್ಯ ಮಾಲಾಬಂಧಂ: ಶಬ್ದಮದ, ೩೩, ವೃತ್ತಿ, ಒಂದರ್ಥಕ್ಕೆ, ೧೦)

ಆೞ
ಮೋಸ ಹಾಗೂ ಏಕಗ್ರಾಹಿತ್ವ (ಎರಡರ್ಥಕ್ಕೆ: ಆೞಯೆಂದು ವಂಚನೆಯುಂ ಏಕಗ್ರಾಹಿತ್ವಮುಂ ಅಕ್ಕುಂ: ಶಬ್ದಮದ, ೩೩, ವೃತ್ತಿ, , ೧೩೧)

ಆೞಕಾಱ
ಮೋಸಗಾರ (ಜಾಱುವವಂ ಪಲುಂಬುವಂ ಅಸ್ಥಿರನಪ್ಪಂ ಆೞಕಾಱನಂ .. .. ನೃಪಾಳಲನಕ್ಕುಮೇ: ಸೂಕ್ತಿಸುಧಾ, ೧೬. ೪೫)

ಆೞಗೊಳ್
ವಂಚಿಸು (ಮುನಿಗಳ ನುಡಿಯಂ ಕೇಳ್ದು ಆೞಗೊಳ್ಳದಿರ್ಪರೆ ಚದುರರ್: ಸಮಯಪ, ೧೪. ೮೧)

ಆೞಸು
ಮುಳುಗಿಸು (ಪುನ್ನಾಗದ ಬಾಸಿಗಂ ಬಗೆದ ಬಣ್ಣದ ಪುಟ್ಟಿಗೆ ನಾಗಜಾಲಮೆಂದಾಗಡೆ ನಾಗಲೋಕವಿಭವಂಗಳೊಳ್ ಆೞಸಿ: ಪಂಪಭಾ, ೪. ೧೭)

ಆೞ
ಆಳ (ಮೊದಲೊಳ್ ನೂಱು ಯೋಜನದಗಲಮುಂ ಅನಿತು ಉತ್ಸೇಧಮುಂ ಮೇಗಯ್ವತ್ತು ಯೋಜನ ವಿಸ್ತಾರಮುಂ ಅಯ್ವತ್ತು ಯೋಜನಂ ಆೞಯುಮನವಗಯ್ಸಿ: ಶಾಂತಿಪು, ೧೧. ೬೦ ವ)

ಆೞ್ಕೆವೆಱು
ಅಚ್ಚೊತ್ತು (ತಂದೆಯ ರೂಪೆ ತಂದೆಯ ವಿಳಾಸಮೆ ತಂದೆಯ ಚೆಲ್ವೆ ತಂದೆಯೊಂದಂದಮೆ ತಂದೆಯೊಂದು ನುಡಿವೋಜೆಯೆ ತನ್ನೊಳಮಾೞ್ಕೆವೆತ್ತುದು: ಆದಿಪು, ೮. ೪೩) [ತನ್ನೊಳಮಾೞ್ಕೆವೆತ್ತುದಾ ಎಂದುದರ ಬದಲು ವೆಂಕಟಾಚಲಶಾಸ್ತ್ರಿಗಳು ತನ್ನೊಳಮರ್ಕೆವೆತ್ತುದಾ ಎಂಬ ಪಾಠವನ್ನು ಸ್ವೀಕರಿಸುತ್ತಾರೆ]


logo