logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಆಕೃತಿವಂತ
ರೂಪವಂತ (ಅವಗತ ಅರ್ಥಶಾಸ್ತ್ರಂ ಆಕೃತಿವಂತಂ ಉದಾತ್ತೋದಂತ ಸಂಭಾಷಣಸಮುತ್ಪಾದಿತೋಷಣಂ: ಶಾಂತಿಪು, ೨. ೧೮ ವ)

ಆಕೃತಿಸಂವೃತಿ
ರೂಪು ಮರೆಮಾಚುವಿಕೆ (ವಿಸ್ಮಯಾಕ್ಷಿಪ್ತಚಿತ್ತನಾಗಿ ನಿಜ ಆಕೃತಿಸಂವೃತಿಯಿಂ ತ್ರಿಃಪ್ರದಕ್ಷಿಣಂಗೆಯ್ದು: ಆದಿಪು, ೯. ೧೦೦ ವ)

ಆಕೃಷ್ಟ
ಜಗ್ಗಿದ, ಸೆಳೆದ, ಆಕರ್ಷಣೆಗೊಂಡ (ವಿಜೃಂಭಮಾಣ ನವನಳಿನ ಪರಿಕರ ಆಕೃಷ್ಟ ಮಧುಕರರಮಣೀಯ ಪುಳಿನ ಪರಿಸರ ಪ್ರದೇಶಮಂ ಎಯ್ದೆವಂದು: ಪಂಪಭಾ, ೫. ೧೦ ವ)

ಆಕೃಷ್ಟಿ
ಹಿಡಿದೆಳೆಯುವಿಕೆ (ಜತುಗೇಹಾನಲದಾಹದಿಂ ವಿಷವಿಶೇಷ ಆಲಿಪ್ತಗುಪ್ತಾನ್ನದಿಂ ಕೃತಕದ್ಯೂತವಿನೋದದಿಂ ದ್ರುಪದಜಾ ಕೇಶಾಂಬರ ಆಕೃಷ್ಟಿಯಿಂ ಧೃತರಾಷ್ಟ್ರಾತ್ಮಜ ಪಾಂಡುರಾಜಸುತರಂ ಮುನ್ನಂ ಕೊಲಲ್ಕೊಡ್ಡಿದಯ್: ಗದಾಯು, ೭. ೪೧)

ಆಕೃಷ್ಟಿಮಂತ್ರ
ವಶೀಕರಣ ಮಂತ್ರ ರ್ಶರಂ ವಿದ್ವಿಡ್ವಿಜಯಶ್ರೀಗಂ ಇದು ಆಕೃಷ್ಟಿಮಂತ್ರಂ: ಚಂದ್ರಪ್ರಪು, ೧೦. ೧)

ಆಕೆಗಳ್
ಆಕೆಯರು, ಆ ಹೆಣ್ಣುಗಳು (ಅಂತಾಕೆಗಳಿರ್ವರುಂ ಎರಡುಂ ಕೆಲದೊಳಿರೆ ಕಲ್ಪಲತೆಗಳೆರಡಱ ನಡುವಣ ಕಲ್ಪವೃಕ್ಷಮಿರ್ಪಂತಿರ್ದ ಪಾಂಡುರಾಜಂಗೆ: ಪಂಪಭಾ, ೧. ೧೦೭ ವ)

ಆಕೇಕರ
ಅರೆತೆರೆದ ಕಣ್ಣು (ಅದು ಬಗೆಗೊಂಡಂತಿರೆ ಆಕೇಕರ ಆಲೋಕಮುಖಂ ನೋಡುತ್ತುವೇಱಲ್ ಕರೆವ ತೆಱದೆ ಹೇಷಾರವಂ ಪೊಣ್ಮೆ: ಕಾದಂಸಂ, ೨. ೪೨)

ಆಕೇಕರಾಲೋಕ
ಓರೆನೋಟ (ಅದು ಬಗೆಗೊಂಡಂತಿರೆ ಆಕೇಕರ ಆಲೋಕಮುಖಂ ನೋಡುತ್ತುವೇಱಲ್ ಕರೆವ ತೆರದೆ ಹೇಷಾರವಂ ಪೊಣ್ಮೆ: ಕಾದಂಸಂ, ೨. ೪೨)

ಆಕೌತುಕ
ತವಕದಿಂದ ಕೂಡಿದ (ವಿಸ್ಮೃತಿಪಕ್ಷ್ಮಪಾತನಂ ಅಪೂರ್ವಾಳೋಕನಾಕೌತುಕ ಆಕುಳಿತ ಅಂತಃಕರಣಂ: ಆದಿಪು, ೪. ೬೦)

ಆಕ್ರಂದತ್ಸ್ವರ
ಅಳುವಿನ ಧ್ವನಿ (ನಿಮೀಳನ್ನೇತ್ರ ಸೀವದ್ಗಾತ್ರಮುಹ್ಯನ್ಮಾದಸ ಆಕ್ರಂದತ್ಸ್ವರ ಪರಿಗತರ್ ಸೈರಿಸಲಾಱದೆ ತಡಬಡಿಸಿ: ಆದಿಪು, ೫. ೮೭ ವ)


logo