logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಆಕಾಶದ್ರವ್ಯ
[ಜೈನ] ಷಡ್ದ್ರವ್ಯಗಳಲ್ಲಿ ಒಂದು (ಜೀವದ್ರವ್ಯ ಪುದ್ಗಲದ್ರವ್ಯ ಧರ್ಮದ್ರವ್ಯ ಅಧರ್ಮದ್ರವ್ಯ ಆಕಾಶದ್ರವ್ಯ ಕಾಲದ್ರವ್ಯಗಳೆಂಬ ಷಡ್ದ್ರವ್ಯಂಗಳ ಗುಣಪರ್ಯಾಯಮುಮಂ: ಸುಕುಮಾಚ, ೩. ೩೯ ವ)

ಆಕಾಶವಚನ
ಆಕಾಶದಿಂದ ಬಂದ ಮಾತು (ಆಕಾಶವಚನಮಿದು ಸುತಶೋಕಮಂ ಎನಗೆ ಅಱಪಿದಪ್ಪುದು ಅಸ್ಮತ್ತನಯಂಗೆ .. .. ಆದುದಾಗಲೆವೇೞ್ಕುಂ: ಪಂಪಭಾ, ೧೧. ೧೧೩)

ಆಕಾಶಸ್ಫಟಿಕ
ಸೂರ್ಯಕಾಂತಶಿಲೆ (ರತ್ನಂ ಪ್ರತಿಬಿಂಬಿತ ಮಣಿದೀಪಪ್ರತಿಬಿಂಬದತಾನುಂ ಆಕಾಶಸ್ಫಟಿಕಾಂತರಿತ ದಹನಾರ್ಚಿಯಂತಾನುಂ .. .. ತನ್ನ ಬೆಳಗೆ ಬೆಳಗಾಗೆ: ಶಾಂತಿಪು, ೯. ೨೧೪ ವ)

ಆಕಾಶಾಸ್ತಿಕಾಯ
[ಜೈನ] ಐದು ಬಗೆಯ ಅಸ್ತಿಕಾಯಗಳಲ್ಲಿ ಒಂದು (ಆಕಾಶಾಸ್ತಿಕಾಯಮೆಂಬ ಪಂಚಾಸ್ತಕಾಯ ನಿಕಾಯಮುಮಂ: ಸುಕುಮಾಚ, ೩. ೩೬ ವ); ನೋಡಿ, ಅಸ್ತಿಕಾಯ

ಆಕಾಸವನಿ
ಮಳೆಯ ಹನಿ (ಚಾದಗೆಯಂತೆ ಆಕಾಸವನಿಗೆ ಬಾಯಂ ಬಿಡುತ್ತುಂ ದಾಹಜ್ವರಂಬೆತ್ತಂತೆ ಗಾಳಿಗಾಸೆಗೆಯ್ಯುತ್ತುಂ: ಧರ್ಮಾಮೃ, ೧. ೧೨೪ ವ)

ಆಕಾಳಿಕೀ
ಕ್ಷಣಿಕವಾದದ್ದು (ಜಲದಾಟೋಪಮಂ ಬುದ್ಬುದನಿವಹನಿಭಂ ಫೇನಪಿಂಡಾಯಮಾನಂ ಜಲರೇಖಾಕಾರಂ ಆಖಂಡಲ ಲಲಿತ ಧನುರ್ಲೀಲಂ ಆಕಾಳಿಕೀಸಂಚಳಂ ಈ ಸೌಂದರ್ಯಂ: ಅಜಿತಪು, ೬. ೫೦); ಮಿಂಚು (ಆಖಂಡಲ ಲಲಿತ ಧನುರ್ಲೀಂ ಆಕಾಳಿಕೀಸಂಚಲಂ ಈ ಸೌಂದರ್ಯಮಿಂತೀ ನವರಸಚಯಮೀ ದೇಹಂ: ಅಜಿತಪು, ೬. ೫೦)

ಆಕಿಂಚನ್ಯ
ತನ್ನದೆಂದು ಏನೂ ಹೊಂದದಿರುವುದು, ಬಡತನ (ತ್ಯಾಗಂ ಲಸತ್ಕೀರ್ತಿ ಸಂಯಮ ಆಚಾರಗುಣಂ ತಪಂಛಲಂ ಆಕಿಂಚನ್ಯಂ ನಯಂ ಬ್ರಹ್ಮಚರ್ಯಮೆ ಮಾನೋನ್ನತಿ ವರ್ಧಮಾನಮುನಿಗಕ್ಕುಂ ಪೆಱರ್ಗಕ್ಕುಮೇ: ಸುಕುಮಾಚ, ೧. ೨೬)

ಆಕೀರ್ಣ
ತುಂಬಿದ, ವ್ಯಾಪಿಸಿದ (ಕುಸುಮಾಸ್ತ್ರನ ಶಸ್ತ್ರಶಾಲೆಯೆನಿಸಿ ಕುಸುಮಾಕೀರ್ಣಮಾದ ಕರ್ಣಿಕಾರಲತೆಗಳುಮಂ: ಮಲ್ಲಿನಾಪು, ೬. ೧೪ ವ)

ಆಕುಂಚಿತ
ಕುಗ್ಗಿದ (ಊಪಸಂಜಾತ ರೋಮಾಂಚಂ ಆಕುಂಚಿತ ಗಾತ್ರಂ .. .. ವೈಭಾತಿಕವಿಧಿವಿಹಿತಾಮೋಘಂ ದ್ವಿಜೌಘಂ: ಲೀಲಾವತಿ, ೯. ೨೫); ಗದಾಯುದ್ಧದಲ್ಲಿನ ಒಂದು ಹೊಡೆತದ ಬಗೆ

ಆಕುಲ
ಕ್ಷೆಭೆ, ತೊಂದರೆ (ಈ ಕಲಹದೊಳ್ ಅಣ್ಣ ನಿಮ್ಮ ಕುಲಂ ನಿಮಗೆ ಆಕುಲಮಂ ಉಂಟುಮಾಡುಗುಂ: ಪಂಪಭಾ, ೧೦. ೨೧); ಕಳವಳಗೊಂಡ (ಪೋಗು ಬೇಗಂ ಎಂಬಂತೆಯುಂ ಎನ್ನಂ ಅಶ್ರುಪಿಹಿತ ಆಕುಲದೃಷ್ಟಿಗಳಿಂದೆ ನೋಡಿದಳ್: ಕಾದಂಸಂ, ೬. ೧೯)


logo