logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಆಕರಿಸು
ವ್ಯಾಪಿಸು, ಆವರಿಸು (ಕರಮೆಸೆದಂ ವಿಸ್ತರಚಂದ್ರಿಕೆ ಆಕರಿಸಿದ ಹರನೀಳನಗೇಂದ್ದಂದದಿಂ: ಕರ್ಣನೇಮಿ, ೧೨. ೨೭೫)

ಆಕರ್ಣಕೃಷ್ಟ
ಕಿವಿಯವರೆಗೆ ಸೆಳೆಯಲ್ಪಟ್ಟ (ಆಕಣ್ಕೃಷ್ಟ ಉತ್ಸೃಷ್ಟ ನಿಜ ವಿಕೀರ್ಣಟಂಕಂಗಳಿಂದಂ: ಆದಿಪು, ೧೪. ೧೦೩ ವ)

ಆಕರ್ಣನ
ಆಲಿಸುವುದು, ಕೇಳು (ತತ್ ವಾರ್ತಾ ಆಕರ್ಣನದಿಂ ಸಂತೋಷಂಬಟ್ಟು: ಚಾವುಂಪು, ಪು. ೪೫೩. ಸಾ. ೧೯)

ಆಕರ್ಣನೀಯ
ಆಲಿಸಲು ಯೋಗ್ಯವಾದ (ದ್ವಿರೇಫೋದಿತನಾದ ಆಕರ್ಣನೀಯಂ ಪಂಚೇಂದ್ರಿಯಸುಖದೊದವಂ ನಂದನಂ ಮಾೞ್ಪುದೆಂದು: ಚಂದ್ರಪ್ರಪು, ೧. ೧೧೨)

ಆಕರ್ಣಾಂತಂ
ಕಿವಿಯವರೆಗೂ (ಒಂದೆ ಸೂೞೆ ತೆಗೆದು ಆಕರ್ಣಾಂತಮಂ ತಾಗೆ .. .. ಸಮಂತೆಚ್ಚು ಮೆಚ್ಚಿಸಿದಂ: ಪಂಪಭಾ, ೩. ೬೩)

ಆಕರ್ಣಾಂತಂಬರಂ
ಕಿವಿಯವರೆಗೂ (ಧನಂಜಯಂ ಆಕರ್ಣಾಂತಂಬರಂ ತೆಗೆದು ಆ ಕರ್ಣಾಂತಂ ಮಾಡಲ್ ಬಗೆದು: ಪಂಪಭಾ, ೧೨. ೨೧೨ ವ)

ಆಕರ್ಣಾಂತವಿಶ್ರಾಂತ
ಕಿವಿಯವರೆಗೂ ಹರಡಿದ (ಜಗತೀನಾಥಂ ಆ ಕುಮಾರಂ ಒಸೆದು ಆಕರ್ಣಾಂತವಿಶ್ರಾಂತ ದೃಷ್ಟಿಗಳಿಂ ನೋಡುತ ಎಯ್ದೆವರ್ಪುದುಂ: ಸುಕುಮಾಚ, ೧೧. ೨)

ಆಕರ್ಣಿಸು
ಆಲಿಸು (ರಾಜನೀತಿಯ ಕ್ರಮಂಗಳಂ ಅತಿಕ್ರಮಿಸಿ ನಡೆವುದು ಉಚಿತಮಲ್ಲೆಂದು ನುಡಿದ ದವನಕನ ಮಾತನಾಕರ್ಣಿಸಿ: ಪಂಚತಂತ್ರ, ೧೬೯ ವ)

ಆಕರ್ಷಣ
[ಬಾಣವನ್ನು ತೊಟ್ಟು] ಎಳೆಯುವಿಕೆ (ಶರಸಂಧಾನ ಆಕರ್ಷಣ ಹರಣಾದಿ ವಿಶೇಷವಿವಿಧಸಂಕಲ್ಪಕಳಾಪರಿಣತಿಯಂ ಮೆಱೆದುದು: ಪಂಪಭಾ, ೧೨. ೧೮೬)

ಆಕಸ್ಮಿಕ
ಅನಿರೀಕ್ಷಿತ (ನರಕ ನಗರ ಲಗ್ನಕೆ ಆಕಸ್ಮಿಕ ಅಗ್ನಿದ್ಫುಲಿಂಗಸ್ಫುರದವಿರಳ ಲಾಕ್ಷಾಗೇಹಪೂರಂ: ಆದಿಪು, ೫. ೮೯)


logo