logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಆಂಧ್ರಿ
ಆಂಧ್ರದೇಶದ ಹೆಂಗಸು (ಆಂಧ್ರೀ ನೀರಂಧ್ರಬಂಧುರ ಸ್ತನಹಾರನುದಾರಂ ಸರಸ್ವತೀಮಣಿಹಾರಂ: ಆದಿಪು, ೧. ೩೨)

ಆಂಪಂ
ಎದುರಿಸುವವನು (ಅವರಿವರ್ ಅನ್ನರಿನ್ನರ್ ಎನವೇಡ ಅರಿಕೇಸರಿಗೆ ಆಂಪನಿಲ್ಲ: ಪಂಪಭಾ, ೨. ೮೭)

ಆಂಪಾ
ಸ್ವೀಕರಿಸುತ್ತೀಯೇನು? (ಶಂಖದೊಳ್ ಪಾಲೆಱೆದಂತಿರೆ ಮಲಿನಮಿಲ್ಲದ ಒಳ್ಗುಲದ ಅರಸುಗಳಿರೆ ನೀನುಂ ಅಗ್ರಪೂಜೆಯಂ ಆಂಪಾ: ಪಂಪಭಾ, ೬. ೫೦)

ಆಂಪುದು
ತಾಳುವುದು, ತಾಳಬೇಕು (ನೀನಲ್ಲದೆ ಎನ್ನ ಶರಸಂಧಾನಮಂ ಆನಲ್ಕೆ ನೆಱೆವರಿಲ್ಲೀ ಪಡೆಯೊಳ್ ನೀನಿನಿಸು ಆಂಪುದು: ಪಂಪಭಾ, ೧. ೭೯)

ಆಕಂಠಪ್ರಮಾಣ
ಕಂಠದವರೆಗೂ (ದಿವ್ಯಾಹಾರಮಂ ಆಕಂಠಪ್ರಮಾಣಂ ಬರೆಗಂ ತಣಿಯುಂಡು: ವಡ್ಡಾರಾ, ಪು. ೭೮. ಸಾ. ೨೨)

ಆಕಂಠೋಷ್ಠಂಬರಂ
ಗಂಟಲು ಮತ್ತು ತುಟಿಯವರೆಗೆ (ಇಂಬಾಗಿರೆ ಮುದದಿಂ ಪಲವುಂ ಬಣ್ಣದ ಭಕ್ಷ್ಯರಾಶಿವೆರಸು ಆಕಂಠೋಷ್ಠಂಬರಮುಂಡೊಯ್ಯನೆ ಪಾರ್ವಂ ಬಂದಾ ಕೊಡನ ಕೆಳಗೆ ಪಟ್ಟಿರ್ದಾಗಳ್: ಪಂಚತಂತ್ರ, ೨೫೪)

ಆಕಂಪಂಗೊಳ್
ನಡುಗು, ಅಲ್ಲಾಡು (ತ್ರಿಭುವನಂಗಳ್ ಆಕಂಪಂಗೊಳೆ ಮುರಜಕೇತನವಿರಾಜಿತಮಪ್ಪ ತನ್ನ ರಥಮಂ ಅದಿರದೆ ಇದಿರಂ ಪರಿಯಿಸಿ: ಪಂಪಭಾ, ೧೩. ೧೩. ೪೪ ವ)

ಆಕಂಪನಗೊಳ್
ನಡುಗು (ಕಾಮದೇವನ ಕೂರಲಗಿನ ಧ್ವನಿಯೆಂದು ಕೋಕಿಲಧ್ವನಿಗೆ ಆಕಂಪನಗೊಳುತ್ತುಂ; ಗಿರಿಜಾಕ, ೪. ೧೨೦ ವ)

ಆಕಂಪಿಸು
ನಡುಗು (ಮುಡಿ ಸೊಪ್ಪಾಗದು ನೀವಿ ಬಿರ್ಚದು ಅಧರಂ ಬೆಳ್ಪೇಱದು ಊರುದ್ವಯಂ ಪೊಡರ್ದು ಆಕಂಪಿಸದು ಅಕ್ಷಿ ಕೆಂಪಡಸದು: ಜಗನ್ನಾವಿ, ೧೬. ೧೨೬)

ಆಕಪ್ಪು
ಗುಳಿ, ಖೆಡ್ಡ (ತಂದು ಆನೆಯಂ ಕೆಡಪು ಆಕಪ್ಪಿನೊಳ್ ಎಚ್ಚು ತೋಱ ಬಲವದ್ಭಲ್ಲೂಕಮಂ: ಉದ್ಭಟಕಾ, ೨. ೫೦)


logo