logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಆಟವಿಕ
ಕಾಡಿನಲ್ಲಿ ವಾಸಿಸುವವನು, ಕಿರಾತ (ಅಡಂಗದ ಆಟವಿಕರುಂ ಒತ್ತಿ ಬರ್ಪ ಪಾರ್ಷ್ಣಿಗ್ರಾಹಕರುಂ: ಆದಿಪು, ೪. ೮೨ ವ)

ಆಟವಿಟಂಬರಿಸು
ಮೋಸಗೊಳಿಸು; ಗಾಯಗೊಳಿಸು (ಚಿತ್ತಮಂ ಆಟವಿಟಂಬರಿಸೆ ನೆನಹದಿಂ ಪೊಸವೇಟಂ ಕೋಟಿ ತೆಱನಾಗೆ ಕಾಮಿನಿ ಬೇಟದ ಕಥೆಗಳ್: ಲೀಲಾವತಿ, ೯. ೧೨೨)

ಆಟಿಸು
ಬಯಸು (ಪುಸಿಯದುದು ಪರಾಘನೆಗೆ ಆಟಿಸದುದು ಕೊಲಲದುದು ಮೋಹಮಿಲ್ಲದುದಱವಂ ಪೊಸಯಿಸುವುದು: ಆದಿಪು, ೫. ೭೯); ಅಲ್ಲಾಡಿಸು (ಪೆಱರ್ಕೇಳದಂತೆ ಆಟಿಸಿ ಕೀಲಂ ಕಳೆದು ನೆಲಕ್ಕೆ ಬೀೞಲೀಯದೆ ಪಿಡಿದುಕೊಂಡು ತಲೆಯೊಳಿಕ್ಕಿಕೊಡು: ಧರ್ಮಾಮೃ, ೬. ೪೯ ವ)

ಆಟೋಪ
ಅಬ್ಬರ, ದರ್ಪಪ್ರದರ್ಶನ (ಸಮದಗಜಘಟಾಟೋಪಂಬೆರಸು ನೆಲನದಿರೆವಂದು ತಾಗಿದ: ಪಂಪಭಾ, ೯. ೫೨)

ಆಟೋಪಂಬೆಱು
ಆಟೋಪವನ್ನು ಹೊಂದು (ಖೇಚರಚಯಮೆೞ್ದು ಆ ಪವನಪಥದಿಂ ಆಟೋಪಂಬೆತ್ತಂದು: ಕರ್ಣನೇಮಿ, ೧೨. ೯೦)

ಆಡಂಬರ
] ಅಬ್ಬರ (ಎಂಬುದುಂ ಸುಯೋಧನಂ ಕ್ರೋಧಾನಲ ಉದ್ದೀಪಿತಹೃದಯನಾಗಿ ಶೌರ್ಯ ಮದ ಆಡಂಬರದೊಳ್ ಅಂಬರಂಬರಂ ಸಿಡಿಲ್ದು: ಪಂಪಭಾ, ೯. ೪೩)

ಆಡಂಬರಿಸು
ಅಬ್ಬರಿಸು (ಹಿಡಿಂಬನಾಡಂಬರಂಗೈದು ತುಂಬುರುಕೊಳ್ಳಿಯಂತೆ ಅಂಬರಂಬರಂ ಸಿಡಿಲ್ದು: ಪಂಪಭಾ, ೩. ೧೭ ವ)

ಆಡಪೋರಿ
ಹೋತ (ಆಡಪೋರಿಯನೇಱ ಸಮಭೂಮಿಯೊಳ್ ಇೞದು ತಿದಿಯಂ ಪೊಕ್ಕೊರ್ದೊಡೆ: ಹರಿವಂಶ, ೪. ೩೩ ವ)

ಆಡಿಸು
ಅಲುಗಾಡಿಸು (ಕೈಯುಂ ಕಾಲುಂ ಆಡಿಸದೆ ಒಂದು ಕೆಲದಿಂದೊಂದು ಕೆಲಕ್ಕೆ ಮಗುೞದೆ: ವಡ್ಡಾರಾ, ಪು. ೧೦೧, ಸಾ. ೧೨); ನಟಿಸುವಂತೆ ಮಾಡು (ವಿರಾಟನ ಮಗಳು ಉತ್ತರೆ ಮೊದಲಾಗೆ ಪಲವುಂ ಪಾತ್ರಂಗನಾಡಿಸುತ್ತುಂ: ಪಂಪಭಾ, ೮. ೫೫ ವ); ನರ್ತಿಸುವಂತೆ ಮಾಡು (ಮಾಣದೆ ಆಡಿಸಿದಾತಂ ಅಂಗಜನೆಂಬ ನಟ್ಟುವಂ: ಆದಿಪು, ೪. ೧೫)

ಆಡು
ನುಡಿ (ಆ ಪಾಣ್ಬರಂಕುಸಂ ಆ ಪಾಣ್ಬೆಯರ ಗೆಯ್ದ ಗೆಯ್ತಂಗಳುಮಂ ತೋರ್ಪ ಸನ್ನೆಗಳುಮಂ ಆಡುವ ಮಿೞ್ತುಗೊಡ್ಡಂಗಳುಮಂ ಕಂಡು ಚೋದ್ಯಂಬಟ್ಟು: ಪಂಪಭಾ, ೪. ೮೩ ವ); ಚಲಿಸು (ಧ್ಯಾನದೊಳಭವಂ ನೆಱೆದಿನಿಸಾನುಮನರೆಮುಚ್ಚಿ ಕಣ್ಗಳಂ ನಿಶ್ಚಳಿತಂ ತಾನಿರ್ದು ಮಱೆದು ಕೆಂದಿದ ಮೀನಂ ತಾತಾಡರ್ದಿ ಮಡುವಂ ಪೋಲ್ತಂ: ಪಂಪಭಾ, ೮. ೧೩); ವಾಗ್ದಾನ ಮಾಡು (ಚಾಳುಕ್ಯವಂಶದೊಳೇಲ್ಲಿಯುಂ ಇನ್ನೆವರೆಗಂ ನುಡಿದು ಪುಸಿವುದುಂ ಆಡಿ ಅಳುಪುವುದುಂ .. .. ಇಲ್ಲಂ: ಗದಾಯು, ೨. ೭ ವ); ಪಗಡೆ ಮುಂತಾದ ಆಟಗಳಲ್ಲಿ ಕಾಯಿ ನಡೆಸು; ಮೇಕೆ; ನರ್ತಸು (ಆಡುವ ಮರುಳ್ಗಳಂ ನಡೆ ನೋಡಿದುದಱನಿಂತು ಕನಸಿನೊಳ್ ಮಕ್ಕಳ್ಗಂ ಕೂಡೆ ಪೆಸರಿಟ್ಟು ಸಲೆ ಕೊಂಡಾಡಿದರಾರ್: ಆದಿಪು, ೧೫. ೩೯); ಆಟದಲ್ಲಿ ತೊಡಗು (ಮಧುವುಂ ಮನೋಭವನೂಂ ಅೞಯೊಳಾಡುವ ಪೊನ್ನಬಟ್ಟಂ: ಶಾಂತಿಪು, ೧. ೫೮)


logo