logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಆಂತರ್
ಎದುರಿಸಿದವರು (ವಿಕ್ರಮದಿಂದೆ ನಿಂದಗುರ್ವೆನಲಿಱದಾಂತರಂ: ಪಂಪಭಾ, ೧. ೨೬)

ಆಂತುಕೊಳ್
ಇರಿಸಿಕೊ (ಇದು ರಿತುವಿಮಾನಮಂ ತನ್ನುದಗ್ರಚೂಳಿಕೆಯೊಳ್ ಆಂತುಕೊಂಡಿರೆ ಸಗ್ಗಕ್ಕಿದು ನಿಚ್ಚಣಿಗಿಪ್ಪವೊಲ್ ಇರ್ದುದಲ್ತೆ: ಆದಿಪು, ೨. ೩೦)

ಆಂದೆ
ಒಂದು ಹಕ್ಕಿ, ಗೂಬೆ (ಕಾಗೆ ಗೂಗೆ ಪರ್ದು ಚಕೋರಂ ಹಂಸೆ ಕುರ್ಕು ಗಿಳಿ ಪುರುಳಿ ಪೆಂಗುರು ಕಾರಂಡಂ ಆಂದೆ ಮೊದಲಾಗೊಡೆಯ ಗಗನಚರಂ: ವಡ್ಡಾರಾ, ಪು ೯೭, ಸಾ ೯)

ಆಂದೆಗೀರ
ಆಂದೆ, ಗೂಬೆ (ಅಂತಾ ಪಿಂಗಲಿಯೆಂಬ ಆಂದೆಗೀರಂಆ ಹಂಸಗೆ ಕಾಪುರುಷನಂತೆ ತನಗಿಲ್ಲದ ಮೈಮೆಯನುಮಟುಮಾಡಿ: ಪಂಚತಂತ್ರ, ೧೯೭ ವ)

ಆಂದೋಲನ
ತೂಗಾಟ (ಅನುಕೂಲಮಾರುತ ಆಂದೋಲದಿಂ ಗಿರಿಶಿಖರಾವನಿಯೊಳ್ ಮಿಳ್ಳಿಸಿದುದು ಕೇತನಪಲ್ಲವಂ: ಪಂಪರಾ, ೧೦. ೪೯)

ಆಂದೋಳ
ತೂಗಾಟ (ಪಂಡಿತಸಂದೋಹಶಿರಶ್ಶಿಂಖಡಿ ನಟನಾ ಆಂದೋಳಪ್ರದಂ .. .. ಮಾಡಳೇ: ಅನಂತಪು, ೧. ೪೧); ಉಯ್ಯಾಲೆ (ಸುರವಿರಚಿತ ಆಂದೋಳದಿಂದಂ: ಆದಿಪು, ೧೦. ೧೮); ಪಲ್ಲಕ್ಕಿ (ಕರಿಣಿಗಳ್ ಮೇಲೆ ಕೆಬರ್ ತುರಂಗಗಳ ಮೇಲೆ ಕೆಲಬರ್ ಎಸೆವ ಆಂದೋಳಿರದರೆಬರ್ ಸತಿಯರ್: ತ್ರಿಷಷ್ಟಿಪು, ೨೪. ೩೫)

ಆಂದೋಳನ
ಉಯ್ಯಾಲೆ (ಲೀಲಾವತಿನದೊಳೆ ವಿಹರಿಪ ಲೀಳಾಸರದೊಳಗೆ ಮೂಡಿ ಮುೞ್ಕುವ ಲೀಲಾಂದೋಳಮನೇಱುವ ಲೀಲಾಕೇಳಿಗಳೆ ವಿಲಾಸಕೇಳಿಗಳ್ ನೃಪಸತಿಯಾ: ಅಜಿತಪು, ೩. ೯); ತೂಗಾಟ, ತುಳುಕಾಟ (ಲಾವಣ್ಯರಸಾವಿಳಂ ಆಂದೋಳಿತದಿಂ ಎಸೆದುದಾಸ್ಯಂ ನಟಿಯಾ: ರಾಜಶೇವಿ, ೧೨. ೭೪); ಮೇನೆ (ಕಳಶಂ ಆದರ್ಶಂ ಆದೋಳನಂ ದಂತಿಸಮೂಹಂ ವಾಜಿವೃಂದಂ: ರಾಜಶೇವಿ, ೯. ೪೦)

ಆಂದೋಳಮನಾಡು
ಹೊಯ್ದಾಡು (ಮಾಡದೊಡೆ ತಾಯ್ಗೆ ಮರಣಂ ಮಾಡಿದೊಡೆ ಎನ್ನೊಂದು ಗತಿಗೆ ಕೇಡುಂ ಅದೇನಂ ಮಾಡುವೆಂ ಎಂದು ಆಂದೋಳಮನಾಡೆ ಮನಂ: ಯಶೋಧಚ, ೩. ೨೨)

ಆಂದೋಳಾಯಮಾನ
ಉಯ್ಯಾಲೆಯಂತಹ ತೂಗಾಟ (ಅನುಕೂಲ ಆಂದೋಳಾಯಮಾನ ರಾಜಕುಂಜರ ವಿಜಯಕದಳಿಕಾತರಂಗಿತ ಗಗನಾಂಗಣನುಂ: ಆದಿಪು, ೧೨. ೬೧ ವ)

ಆಂದೋಳಿತ
ತೂಗುವ (ಮುಹುರ್ಮುರುಹಾಂದೋಳಿತ ಮಸ್ತಕನುಂ ಉದಂಚದ್ರೋಮಾಂಚಕಂಚುಕಿತನುಂ ಆಗಿ: ಆದಿಪು, ೧೦. ೫೨ ವ)


logo