logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಆಘಾತ ಕರ್ಮ
[ಜೈನ] ಆತ್ಮನ ಗುಣಗಳನ್ನು ನಾಶಮಾಡುವ ಕರ್ಮ, ಇವು ನಾಲ್ಕ ತೆರ: ಆಯು, ನಾಮ, ಗೋತ್ರ ಮತ್ತು ವೇದನೀಯ (ದೇವನಿಕಾಯಂ ಬಂದರ್ಚಿಸಿ ಪೂಜಿಸಿ ಪೋದೊಡೆ ಅವರುಂ ಬೞಕ್ಕ ಆಘತಿಕರ್ಮಂಗಳಂ ಕಿಡಿಸಿ ಮೋಕ್ಷಕ್ಕೆ ವೋದರ್: ವಡ್ಡಾರಾ, ಪು ೧೦೪, ಸಾ ೨೫)

ಆಘ್ರಾಣಿಸು
ಮೂಸಿನೋಡು (ಸಪ್ತಚ್ಛದಗಂಧಮನೀ ವನೇಭಂ ಆಘ್ರಾಣೀಸಿ ಪೆರ್ಚಿದ ಮಸಕದಿಂದೆ: ಆದಿಪು, ೧೧. ೬೪)

ಆಘ್ರಾಯಿಸು
ಆಘ್ರಾಣಿಸು (ಜಿನಾಂಘ್ರೀಶ್ವಸದ ಅಮೃತಾನ್ಜಮಂ ಆಘ್ರಾಯಿಸಿದಂ ಜಿನಚಂದ್ರಂ: ಶಾಂತಿಪು, ೭. ೪೧)

ಆಚ
ಸಾಲವೃಕ್ಷ (ಎಲವಂ ಸಂಪಗೆ ಹೊನ್ನೆ ಚೆನ್ನೆ ಕವಳಂ ಕಾರಾಚಂ ಆಚಂ ಪುಲುಂಗಿಲು: ರಾಜಶೇವಿ, ೫. ೫೬)

ಆಚಂದ್ರತಾರಂ
ಚಂದ್ರತಾರೆಯರಿರುವವರೆಗೆ (ಗುಣಗ್ರಾಮಣಿಗಳ್ ಪಾೞಾಗೆ ತೆಗೞೆ ಬಾೞ್ವ ಬಾೞ್ ಏನಾಂದ್ರತಾರಮೋ ಮಾನಸರಾ: ಕವಿರಾಮಾ, ೩. ೧೭೭)

ಆಚಂದ್ರಸ್ಥಾಯಿ
ಚಂದ್ರನಷ್ಟು ಸ್ಥಿರ, ಶಾಶ್ವತ (ಪತ್ತೆಂಟು ಕೋಲನೆಚ್ಚು ಅಟ್ಟೆಯುಂ ನೆಲದೊಳ್ ಆಚಂದ್ರಸ್ಥಾಯಿಯಾಗೆ ಚತುರ್ದಶಭುವನಂಗಳಂ ಪಸರಿಸಿ ನಿಂದೊಡೆ: ಪಂಪಭಾ, ೧೨. ೨೧೩ ವ)

ಆಚಕ್ಷತೇ
ನೋಡುತ್ತಾನೆ (ಕಂಚ ಆಕಸ್ಮಿಕ ಪಾಂಸುಪಲ್ಲವ ಜಳಸ್ಯಂದೀ ಸದಾಸಿಂಧುರ್ ಅಪ್ರಾಗೇಯಂ ಪ್ರಿಯಗಳ್ಳಭೂಪತಿ ಚಮೂಪ್ರಸ್ಥಾನಮಾಚಕ್ಷತೇ: ಪಂಪಭಾ, ೯. ೯೭)

ಆಚಮಿತ
ಆಚಮನ ಮಾಡಿದ (ಬೞಯಂ ಆಚಮಿತ ಚಂದ್ರಕಾಂತದ್ರವಸುರಭಿಸಲಿಲನುಂ: ಆದಿಪು, ೧೧. ೨೭ ವ)

ಆಚಮಿಸು
ಆಚಮನ ಮಾಡು (ಅಂಗರಾಜಂ .. .. ಆಚಮಿಸಿ ಕನಕಕಮಳಮಗಳಿಂ ಕಮಳಾಕರಬಾಂದವಂಗೆ ಅರ್ಘ್ಯಮನೆತ್ತಿ: ಪಂಪಭಾ, ೧೨. ೧೦೮ ವ)

ಆಚರಣ
ಅನುಸರಣೆ (ಕುಲವಧುಗೆ .. .. ಪತಿಪರೋಕ್ಷದೊಳ್ ಜಿನದೀಕ್ಷಾಚರಣಂ ಮೇಣ್ ಶುಭಚರಿತದೆ ಮರಣಂ: ಅಜಿತಪು, ೧. ೪೬)


logo