logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಕಪ್ಪು-ಬಸಿ
(ನಾ)
ಚಹ ಕುಡಿಯುವ ಬಟ್ಟಲು ಮತ್ತು ಲೋಟ, ಜೇಡಿ ಮಣ್ಣಿನಲ್ಲಿ ಇವುಗಳನ್ನು ತಯಾರಿಸುವರು. ಜಪಾನಿಯರು ಅಂದವಾದ ಕಪ್ಪು-ಬಸಿಗಳನ್ನು ತಯಾರಿಸುವರು. ಪಿಂಗಾಣಿ ಕಪ್ಪು ಬಸಿ ಬಹಳ ಬಳಕೆಯಲ್ಲಿದೆ.

ಕಮಂಡಲ
(ನಾ)
ಋಷಿಗಳು ಉಪಯೋಗಿಸುವ ಮಣ್ಣಿನ ನೀರಿನ ಪಾತ್ರೆ. ಇದಕ್ಕೆ ಒಡಲಲ್ಲಿ ಸೊಂಡಿಲಿರುತ್ತದೆ.

ಕಮ್ಟಿ
(ನಾ)
ಚಿಕ್ಕ ಅಗ್ಗಿಷ್ಟಿಗೆ

ಕರಗ
(ನಾ)
ನೀರಿನ ಪಾತ್ರೆ, ಪವಿತ್ರಪಾತ್ರೆ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕರಗ ಉತ್ಸವ ಆಚರಿಸುವರು. ಕರಗವು ಅತ್ಯಂತ ಶಕ್ತಿಯುತ ದೇವತೆಯ ಉತ್ಸವ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಕರಗದ ಉತ್ಸವ ನಡೆಯುವುದು.

ಕರಗದ ಕುಡಿಕಿ
(ನಾ)
ಹಾಲು-ತುಪ್ಪ ಹಾಕಿ ಇಡುವ ಪಾತ್ರೆ. ಇದರ ತಳ ದಪ್ಪವಾಗಿರುವುದು. ಬೆಳಗಾಂವ ಜಿಲ್ಲೆಯಲ್ಲಿ ಈ ಪದ ಬಳಕೆಯಲ್ಲಿದೆ.

ಕರೆ
(ನಾ)
ಹಾಲು ಕಾಯಿಸಿಡಲು ಬಳಸುವ ಗಡಿಗೆ, ಕರೆಗಡಿಗೆ.

ಕಲಶ
(ನಾ)
ಕಲಸ, ಕಳಸ, ಮಂಗಲ ಫಟ, ಶುಭಕಾರ್ಯಗಳಲ್ಲಿ ಮಂಗಲ ಕಲಶವನ್ನು ಪೂಜಿಸುವವರು ನೋಡಿ - ಕಳಸ

ಕಲಶ ಪೂಜೆ
(ಕ್ರಿ)
ಕುಂಭ ಪೂಜೆ

ಕಲಶಾಂಬು
(ನಾ)
ಕೊಡದಲ್ಲಿನ ನೀರು

ಕಲಗಚ್ಚು
(ನಾ)
ಕಲಗಂಚು, ಮಣ್ಣಿನಿಂದ ಮಾಡಿದ ಅಗಲಬಾಯಿಯ ಪಾತ್ರೆ. ಬಾನಿ, ನೀರನ್ನು ಮತ್ತು ಮುಸರೆ ನೀರನ್ನು ಸಂಗ್ರಹಿಸಲು ಉಪಯೋಗಿಸುವರು. ಸೋಡಾ ಬಾಟಲಿಗಳನ್ನು ತಂಪಾಗಿಡಲು ಕಲ್ಗಂಚನ್ನು ಬಳಸುವರು.


logo