logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಬಂಗರಿ
(ನಾ)
ಬಂಗ್ರಿ, ಸಿಹಿ ಅಡಿಗೆ ಮಾಡುವ ಪಾತ್ರೆ, ಕಡುಬು, ಗಿಣ್ಣು ಕುಚ್ಚ ಕಡುಬು ಮೊದಲಾದ ಅಡುಗೆ ಮಾಡಲು ಬಳಸುವ ಮುಚ್ಚಳವಿರುವ ದುಂಡು ಪಾತ್ರೆ.

ಬಂಗ್ಲ
(ನಾ)
ದೊಡ್ಡ ಗಾತ್ರದ ಗಡಿಗೆ ಉತ್ತರ ಕನ್ನಡ ಜಿಲ್ಲೆಯ ಅಗೇರರು ಬಳಸುವ ಭಾಷೆ.

ಬಂಡಿ ಕುಡಗೋಲು
(ನಾ)
ಆವಿಗೆಗೆ ಬೇಕಾದ ಉರುವಲು, ಕಂಟಿ, ಮುಳ್ಳು, ಪೊದೆಗಳನ್ನು ಕೊಯ್ಯಲು ಉಪಯೋಗಿಸುವ ದೊಡ್ಡ ಗಾತ್ರದ ಕುಡಗೋಲು.

ಬಂದ್ಲ
(ನಾ)
ತಿಗುರಿಯ ಮೇಲೆ ತಯಾರಿಸಿದ ನೀರು ಕಾಯಿಸುವ ಪಚೇಲಿ ಹತ್ತರಿಂದ ಐವತ್ತು ಲೀಟರ್ ನೀರು ಹಿಡಿಯ ಬಲ್ಲದು ಇದರ ವಿಶೇಷವೆಂದರೆ ಇದರ ತಳವನ್ನು ಬಹಳ ತೆಳುವಾಗಿ ಮಾಡುವರು. ಇದರಿಂದಾಗಿ ನೀರು ಬೇಗನೆ ಕಾಯುತ್ತದೆ.

ಬಟ್ಟಲು
(ಕ್ರಿ)
ದುಂಡಾದ ಮಣ್ಣಿನ ಪಾತ್ರೆ

ಬಡಿ
(ನಾ)
ತಟ್ಟು

ಬಡಿಗಲ್ಲು
(ನಾ)
ತಟ್ಟುವ ಕಲ್ಲು, ಕುಂಬಾರರು ಹಸಿ ಮಡಿಕೆಗಳಿಗೆ ರೂಪ ಕೊಡಲು ಕಲ್ಲು ಮತ್ತು ಸೊಳದಿಂದ ತಟ್ಟುವರು.

ಬತ್ತಿಸ್ಥಾಪಕ
(ನಾ)
ಊದಬತ್ತಿ, ಮೇಣದಬತ್ತಿ ಹಚ್ಚಿ ಇಡಲು ಮಾಡಿದ ಸಾಧನ, ಪಿಂಗಾಣಿ ವಸ್ತುಗಳಲ್ಲಿ ಇದನ್ನು ಕಾಣಬಹುದು.

ಬಲಗೊಂಬಿ
(ನಾ)
ಮಣ್ಣಿನ ಗೊಂಬೆ, ಅರಿಶಿಣ - ಕುಂಕುಮ ಸವರಿ ನಿವಾಳಿಸಿ ಊರ ಹೊರಗೆ ಒಗೆಯುವ ನಿವಾರಣೆ ಗೊಂಬಿ, ಮಾಂತ್ರಿಕರು ಬಳಸುವರು.

ಬಸಿಪೈಪು
(ನಾ)
ಮಣ್ಣಿನ ಪೈಪು, ಸುಮಾರು ಮೂವತ್ತು ಸೆಂ.ಮೀ.ನಿಂದ ಎರಡು ಮೀ. ಉದ್ದದವರೆಗೂ ಇದನ್ನು ತಯಾರಿಸುವರು. ರೈತರು ಭೂಮಿಯಲ್ಲಿ ಜವಳು ಹತ್ತಿದಾಗ ನೀರನ್ನು ಹರಿಬಿಡಲು ಬಳಸುವರು. ದಾವಣಗೆರೆ, ಶಿವಮೊಗ್ಗಾ, ರಾಯಚೂರ ಜಿಲ್ಲೆಗಳ ರೈತರು ತಮ್ಮ ಗದ್ದೆಗಳಲ್ಲಿ ಬಸಿ ಪೈಪನ್ನು ಹೆಚ್ಚಾಗಿ ಬಳಸುವರು.


logo