logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಜಂಗಿನ ಕೊಡ
(ನಾ)
ದೊಡ್ಡ ಕೊಡ, ಅಡ್ಡೆಯ ನಿಲುವುಗಳಲ್ಲಿ ಇಡುತ್ತಿದ್ದ ಕೊಡಗಳು.

ಜಗುಲಿಗುಳ್ಳ
(ನಾ)
ಎಣ್ಣೆ ಕುಳ್ಳಿ, ದೇವರ ಮುಂದೆ ದೀಪ ಹಚ್ಚಲು ಉಪಯೋಗಿಸಲು ಎಣ್ಣೆ ತುಂಬಿ ಜಗುಲಿಯ ಮೇಲೆ ಇದನ್ನು ಇಡುವರು.

ಜಜ್ಜುಕಲ್ಲು
(ನಾ)
ತದುಗಲ್ಲು, ಜಜ್ಜುವಕಲ್ಲು ಮಣ್ಣಿನ ಉಳ್ಳೆಗಳನ್ನು ಜಜ್ಜಿ ಅಗಲವಾದ ಹಲ್ಲೆಗಳನ್ನು ಮಾಡಲು ಬಳಸುವ ಕಲ್ಲು. ಹೆಣ್ಣು ಮಕ್ಕಳು ಕೈಯಿಂದ ಮಡಿಕೆ ಮಾಡುವಾಗ ಇದನ್ನು ಬಳಸುವರು. ಗಂಡಸರು ಗಡಿಗೆ ತಟ್ಟುವ ಕಲ್ಲಿನ ಹಾಗೆಯೇ ಇದರ ಆಕೃತಿ, ಗಾತ್ರದಲ್ಲಿ ದೊಡ್ಡದು.

ಜರಡಿ
(ನಾ)
ಸಾಣಿಗೆ - ನೋಡಿ

ಜಾಜಾ
(ನಾ)
ಕೆಂಪು ಬಣ್ಣದ ಮಣ್ಣು. ಕುಂಬಾರರು ಐರಾಣಿಗಡಿಗೆಗಳಿಗೆ ಜಾಜಾದಿಂದ ಬಣ್ಣ ಬಳಿಯುವರು.

ಜಾಪಣಿ
(ನಾ)
ಮುಚ್ಚಳ, ಇದು ಸ್ವಲ್ಪ ದೊಡ್ಡ ಗಾತ್ರದಲ್ಲಿರುವುದು, ಲಂಬಾಣಿ ಜನಾಂಗದಲ್ಲಿ ಈ ಪದ ಹೆಚ್ಚು ಬಳಕೆಯಲ್ಲಿದೆ.

ಜಿಗುಟು ಮಣ್ಣು
(ನಾ)
ಅಂಟಾದ ಮಿದು ಮಣ್ಣು ಮಡಕೆ ಮಾಡಲು ಯೋಗ್ಯವಾದ ಮಣ್ಣು.

ಜೆಲ್ಲಿ
(ನಾ)
ದೊಡ್ಡ ಬಿದುರಿನ ಬುಟ್ಟಿ-ಪುಟ್ಟಿ ಕುಂಬಾರರು ಮಡಿಕೆಗಳನ್ನು ಮಾರಟಕ್ಕೆ ಒಯ್ಯುವಾಗ ಇದರಲ್ಲಿ ಇಟ್ಟುಕೊಂಡು ಹೋಗುವರು.

ಜೇಡಿಮಣ್ಣು
(ನಾ)
ಮಡಕೆ ಮಾಡುವ ಕುಂಬಾರ ಮಣ್ಣು. ಜೇಡಿಮಣ್ಣಿನ ಸಾಮಾನ್ಯ ಬಣ್ಣಕ್ಕೆ ಕಬ್ಬಿಣಾಂಶವೇ ಕಾರಣ - ನೋಡಿ ಮಣ್ಣು ಜೇಡಿಮಣ್ಣು ಜಡಿದರೆ ಸಕ್ಕರೆ ಆಗುವುದೋ (ಗಾದೆ)


logo