logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಟೆರ್ರಾಕೊಟಾ
(ನಾ)
ಕುಂಭ ಕಲೆಯ ಒಂದು ಪ್ರಭೇದ (clay sculpture) ವಿವಿಧ ಬಗೆಯ ಅಲಂಕಾರಿಕ ವಸ್ತುಗಳನ್ನು ಗೊಂಬೆಗಳನ್ನು ಮತ್ತು ಆಟಿಗೆ ಸಾಮಾನುಗಳನ್ನು ಸುಡಾವೆ ಮಣ್ಣಿನಿಂದ ತಯಾರಿಸಲಾಗುವುದು. ಈ ಮಣ್ಣಿನಿಂದ ತಯಾರಿಸಿದ ವಸ್ತುಗಳು ಸಾಮಾನ್ಯ ಮಡಿಕೆಗಳಿಗಿಂತ ಹೆಚ್ಚಿನ ಉಷ್ಣತೆಯಲ್ಲಿ ಸುಡಲಾಗುವುದು. ಟೆರ್ರಾಕೊಟಾ ವಸ್ತುಗಳು ಸಾಮಾನ್ಯವಾಗಿ ನಸುಗೆಂಪು ಬಣ್ಣದವಾಗಿರುತ್ತವೆ. ಗೃಹಬಳಕೆ ವಸ್ತುಗಳಿಗಿಂತ ಅಲಂಕಾರಿಕ ವಸ್ತುಗಳನ್ನು ಹೆಚ್ಚಾಗಿ ಇದರಿಂದ ತಯಾರಿಸುವರು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಟೆರ್ರಾಕೊಟ ಮಣ್ಣಿನ ವಸ್ತುಗಳು ಬಳಕೆಯಲ್ಲಿವೆ. ಮೌರ್ಯರ ಕಾಲದಲ್ಲಿ ಟೆರ್ರಾಕೊಟ ಶಿಲ್ಪ ಬಹಳ ಪ್ರಸಿದ್ಧಿ ಪಡೆದಿತ್ತು ಉತ್ತರ ಪ್ರದೇಶದಲ್ಲಿ ಟೆರ್ರಾಕೊಟ ಶಿಲ್ಪ ಹೆಚ್ಚಾಗಿ ಬೆಳೆದು ಬಂದಿದೆ ದಕ್ಷಿಣದಲ್ಲಿ ಶಾತವಾಹನರ ಕಾಲದಲ್ಲಿ ಈ ಕಲೆಗೆ ಹೆಚ್ಚು ಪ್ರೋತ್ಸಾಹ ದೊರೆತಿದೆ ಭಾರತದ ಮೂರ್ತಿಶಿಲ್ಪಕಲೆಯಲ್ಲಿ ಅಖನೂರಿನ ಟೆರ್ರಾಕೊಟ ಶಿಲ್ಪ ತನ್ನದೇ ಆದ ವೈಶಿಷ್ಟ್ಯ ಪಡೆದಿದೆ. ಬಂಗಾಳದ ಬಿರ್-ಬುಹಮ್ ಟೊರ್ರಾಕೊಟಾ ಶಿಲ್ಪ ಕೂಡ ಹೆಸರು ಪಡೆದಿತ್ತು. ಮಣ್ಣಿನ ಫಲಕಗಳಲ್ಲಿ ಅರಳಿದ ಟೊರ್ರಾಕೊಟ ಶಿಲ್ಪದಲ್ಲಿ ಕುಂಬಾರನ ಕಲಾ ಪ್ರತಿಭೆ - ಕೌಶಲ್ಯ ಎಲ್ಲವೂ ಅಪ್ರತಿಮವಾಗಿದೆ.


logo