logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಗಗರಿ
(ನಾ)
ಮಣ್ಣಿನ ಕೊಡ, ಹಿಂದಿ ಶಬ್ದ.

ಗಟಗಡ್ಲೆ
(ನಾ)
ದೀಪ ಹಚ್ಚಲು ಬಳಸುವ ಮಣ್ಣಿನ ಪಾತ್ರೆ, ಪಣತಿ.

ಗಟ್ಟಿಸು
(ಕ್ರಿ)
ಮಡಿಕೆಗಳನ್ನು ಸೊಳದಿಂದ ತಟ್ಟುವ ಕೊನೆಹಂತ.

ಗಡಿಗೆ
(ನಾ)
ಮಡಕೆ ಗಡುಗೆ, ಸ್ವಾರೆ, ಭಾಂಡಿ, ಮಣ್ಣಿನ ಪಾತ್ರೆ ಸಾಮಾನ್ಯವಾಗಿ ಮಣ್ಣಿನಿಂದ ತಯಾರಿಸಿದ ವಿವಿಧ ಪಾತ್ರೆಗಳಿಗೆ "ಗಡಿಗೆ" ಎಂದು ಕರೆಯುವರು ಗಡಿಗೆ ಮಡಕೆ ಪದಗಳಲ್ಲಿ ವ್ಯತ್ಯಾಸವಿಲ್ಲ. ಗಡಿಗೆ-ಮಡಿಕೆ ಇದು ಜೋಡುನುಡಿ ಸರ್ವಜ್ಞನ ವಚನದಲ್ಲಿ ಈ ಪದ ಪ್ರಯೋಗವಾಗಿದೆ. ಉತ್ತರ ಕರ್ನಾಟಕದಲ್ಲಿ ಗಡಿಗೆ, ದಕ್ಷಿಣ ಕರ್ನಾಟಕದಲ್ಲಿ ಮಡಕೆ ಎಂಬ ಪದಗಳು ಹೆಚ್ಚಾಗಿ ಬಳಕೆಯಲ್ಲಿದೆ. ಗಡಿಗೆಯ ಬಣ್ಣ ಸಾಮಾನ್ಯವಾಗಿ ಕಪ್ಪು ಆದರೂ ಕೆಲ ಪ್ರದೇಶಗಳಲ್ಲಿ ಬೂದಗಪ್ಪು, ಕೆಂಪು ಮತ್ತು ಕಂದು ಬಣ್ಣದ ಗಡಿಗೆಗಳನ್ನು ತಯಾರಿಸುವರು. ಇವುಗಳನ್ನು ಸಾಮಾನ್ಯವಾಗಿ ಅಡಿಗೆ ಮಾಡಲು ಹಾಗೂ ನೀರು ತರಲು ಮತ್ತು ಧಾನ್ಯ ಸಂಗ್ರಹಿಸಿ ಇಡಲು ತಯಾರಿಸಿದವು. 'ತುಪ್ಪದ ಗಡಿಗೆಯಂತೆ ಇದು ಹಸನಲ್ಲ' (ಮೋಳಿಗೆ ಮಾರಯ್ಯ) 'ಗಡಿಗೆಯ ತುಪ್ಪ ಹೆಡಿಗೆಯ ಮೃಷ್ಟಾನ್ನ ತುಡುಗಣಿಯಂತೆ ತಿಂಬವಂಗೆ ಮತ್ತೊಡೆಯರ ಕಟ್ಟಳೆಯೆ.' (ರೇವಮ್ಮ) 'ಗಡಿಗೆಯೊಳು ಕಡಲುದವ ಮೊಗೆಮೊಗೆದು ತಹೆನೆಂಬ ಸಾಹಸಿ ಕಡಲ ಕಂಡವನಲ್ಲ' (ಎಸ್. ವಿ. ಪರಮೇಶ್ವರಭಟ್ಟ) ಗಂಡಾಗುಂಡಿ ಮಾಡಿ ಗಡ್ಗಿ ತುಪ್ಪ ನುಂಗಿದಾಂಗ (ಗಾದೆ) ಕುರಡಿ ಮದುವೆ ಆದರೆ ಮನೆ ಗಡಿಗೆಗೆ ಮೂಲ (ಗಾದೆ) ಅತ್ತೆ ಒಡೆದ ಗಡಿಗೆಗೆ ಬೆಲೆ ಇಲ್ಲ (ಗಾದೆ) ಕತ್ಲದಾಗ ಕರಿಯಪ್ಪಕುಂತಾನ (ಒಗಟು)
">

ಗಡಿಗೆಈಡ
(ನಾ)
ಗಡಿಗೆ, ಆಹಾರ ಬೇಯಿಸುವ ಪಾತ್ರೆ, ದಕ್ಷಿಣ ಕರ್ನಾಟಕದಲ್ಲಿ ಈ ಪದ ಬಳಕೆಯಲ್ಲಿದೆ.

ಗಡಿಗೆ ಚಿಕ್ಕ
(ನಾ)
ಜಾಳಿಗೆ, ಕಲ್ಲಿ, ನಾರಿನಿಂದ ತಯಾರಿಸಿದ ಬಲೆ ಗಡಿಗೆ ಮಾರಲು ಹೋಗುವಾಗ ಇದರಲ್ಲಿ ಕಟ್ಟಿಕೊಂಡು ಹೋಗುವರು.

ಗಡಿಗೆ ಬಡಿ
(ಕ್ರಿ)
ಹಸಿ ಗಡಿಗೆಯನ್ನು ಸೊಳದಿಂದ ತಟ್ಟುವುದು. ಪದ ಉತ್ತರ ಕರ್ನಾಟಕದ ಕುಂಬಾರರಲ್ಲಿ ಹೆಚ್ಚು ಬಳಕೆಯಲ್ಲಿದೆ.

ಗಡಿಗೆಮ್ಮ
(ನಾ)
ಕ್ಷುದ್ರದೇವತೆ

ಗಡಿಗೆ ಸರ
(ನಾ)
ಹಗ್ಗ, ಹುರಿ, ಗಡಿಗೆಗಳನ್ನು ಬಂಡಿಮೇಲೆ ಇಲ್ಲವೆ ಪ್ರಾಣಿಗಳ ಮೇಲೆ ಹೇರಿಕೊಂಡು ದೂರ ದೂರದ ಊರುಗಳಿಗೆ ಹೋಗುವಾಗ ಗಡಿಗೆಗಳನ್ನು ಕಟ್ಟಲು ಬಳಸುವ ಹಗ್ಗಕ್ಕೆ ಗಡಿಗೆ ಸರ ಎನ್ನುವರು.

ಗಡಿಗೆ ಮನೆ
(ನಾ)
ಕುಂಬಾರ ಸಾಲೆ, ಕುಂಬಾರನ ಕಾರ್ಯಾಗಾರ ದೊಡ್ಡ ಕುಟುಂಬದ ಕುಂಬಾರರ ಮನೆಗಳಲ್ಲಿ ವಾಸದ ಮನೆಯಿಂದ ಪ್ರತ್ಯೇಕವಾಗಿ ಗಡಿಗೆ ಮನೆ ಇರುತ್ತದೆ. ಅಲ್ಲಿಯೆ ಕುಂಬಾರರು ಹದಮಾಡಿದ ಮಣ್ಣನ್ನು ಒಟ್ಟುವರು. ತಿಗುರಿ ಹೂಡಿ ಮಡಕೆ ಗೇಯುವರು ಒಣಗಿದ ಹಸಿ ಮಡಕೆಗಳನ್ನು ಕೂಡ ಗಡಿಗೆ ಮನೆಯಲ್ಲಿ ಒಟ್ಟುವರು.


logo