logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಭರಣಿ
(ನಾ)
ಬರಣಿ, ಕರಡಿಗೆ, ಇದನ್ನು ಉಪ್ಪಿನಕಾಯಿ ಹಾಕಿಡಲು ಬಳಸುವರು. ಪಿಂಗಾಣಿ ಭರಣಿಗಳು ಹೆಚ್ಚು ಜನಪ್ರಿಯವಾಗಿವೆ 'ಭರಣಿ' ಎಂಬುದು, ಜಾರಹ್ ಎಂಬ ಅರಬ್ಬಿ ಪದದಿಂದ ಬಂದಿದೆ ಇಂಗ್ಲಿಷ್-ನಲ್ಲಿ 'ಜಾರ್' ಎನ್ನುವರು. ತೆಲಗು ಭಾಷೆಯಲ್ಲಿ ಜಾಡಿ ಎನ್ನುವರು. ನೆಲದಲ್ಲಿ ಹೂತಿಡಲು ಅನುಕೂಲವಾಗುವಂತೆ ತಳ ಚೂಪಾದ ಭರಣಿಯನ್ನು ಕೆಲವೆಡೆ ಮಾಡುವರು.

ಭಾಂಡಾರೋ
(ನಾ)
ಕುಂಭಕ್ಕೆ ಭಾಂಡವೆಂದು ಹೆಸರು. ಇದರಿಂದ ಭಾಂಡಾರೋ (ಭಂಡಕಾರ) ಭಾಂಡಿಯೋ, ಭಾಂಡೇ ಎನ್ನುವ ಹೆಸರುಗಳು ಬಂದಿವೆ. ಕುಂಬಾರರನ್ನು ಕೆಲವು ಪ್ರದೇಶಗಳಲ್ಲಿ ಭಾಂಡರೋ ಎಂದು ಕರೆಯುವರು.

ಭಾಂಡೆ
(ನಾ)
ಪಾತ್ರೆ, ಭಾಂಡೆ, ಲೋಹದ ಪಾತ್ರೆಗಳಿಗೆ ಭಾಂಡ, ಭಾಂಡೆ ಎಂದು ಕರೆಯುವರಾದರೂ ಮಣ್ಣಿನ ಪಾತ್ರೆಗಳಿಗೂ ಕೂಡ ಭಾಂಡೆ ಎಂದು ಕರೆಯುವ ರೂಢಿ ಇದೆ. "ಮೃತ್ತಿಕೆಯೊಂದರಲಾದ ಭಾಂಡದಂತೆ" (ಸಕಲೇಶಮಾದರಸ) "ಭಾಂಡ ತತಿಗೊಂದು ಗದುಗೆಯ ಪೆಟ್ಟು ಸಾಲದೆ" (ವಿರೂಪಾಕ್ಷ ಪಂಡಿತ)
">

ಭೂತಿಮರಿಗೆ
(ನಾ)
ಮಣ್ಣಿನಿಂದ ಮಾಡಿದ ವಿಭೂತಿ ಇಡುವ ಸಾಧನ, ಬಿದಿರು ಮತ್ತು ಕಟ್ಟಿಗೆಯಲ್ಲಿ ಮಾಡಿದ ಕೈಬುಟ್ಟಿಯಂತೆ ಇದು ಇರುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ.


logo