logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಸಣ್ಣ ಗುಂಡಾಲು
(ನಾ)
ಕಿವಿಹಚ್ಚಿದ ಚಿಕ್ಕ ಚಟಿಗೆ

ಸಬಸರಬಿ
(ನಾ)
ಹಸಿ ಅರಿವೆ, ಮಡಕೆ ತಟ್ಟುವಾಗ ಮಡಿಕೆಗೆ ನೀರು ಹಚ್ಚಲು ಬಳಸುವ ಒದ್ದೆ ಬಟ್ಟೆ, ಕುಂಬಾರಗಿತ್ತಿಯರು ಮಡಕೆ ತೀಡುವಾಗ ಕೂಡ ಇದನ್ನು ಬಳಸುವರು. ತಿಗುರಿಯ ಮೇಲೆ ಮಡಕೆ ಗೇಯುವಾಗ ತಗ್ಗು ಏರುಗಳು, ಹಾಗೂ ಹುಳುಕುಗಳನ್ನು ಸಮಗೊಳಿಸಿ ನುಣುಪು ಮಾಡಲು ಒದ್ದೆ ಅರಿವೆ ಬಳಸಲಾಗುತ್ತದೆ.

ಸಮೇವು
(ನಾ)
ಕಾಲು ದೀಪ, ಸಾಮಾನ್ಯವಾಗಿ 15 ಸೆ.ಮೀ. ನಿಂದ 45 ಸೆಂ.ಮೀ. ಎತ್ತರವಿರುತ್ತದೆ. ಅದರ ಮೇಲೆ ಮಣ್ಣಿನ ಪ್ರಣತಿ ಇಟ್ಟು ದೀಪ ಹಚ್ಚುವರು. ಪಣತಿ ಸಮೇತ ಸಮೇವು ಕೂಡ ಮಾಡುವರು.

ಸರಗಲ್ಲು
(ನಾ)
ಕಡಬು ಬೇಯಿಸುವ ಮಣ್ಣಿನ ಪಾತ್ರೆ, ಇಡ್ಲಿ ಪಾತ್ರೆ ಹಾಗೆ ಇರುವುದು, ಮಲೆನಾಡಿನ ಜನರು ಇದನ್ನು ಹೆಚ್ಚಾಗಿ ಬಳಸುವರು. ಈ ಪಾತ್ರೆಯಲ್ಲಿ ಎರಡು ಅರೆಗಳಿದ್ದು, ಮೇಲಿನ ಭಾಗದಲ್ಲಿ ಕಡಬು ಇಡುವರು ತಳಭಾಗದಲ್ಲಿ ರಂಧ್ರದ ಮೂಲಕ ನೀರು ತುಂಬುವರು, ಮೇಲ್ಭಾಗದಲ್ಲಿ ಮುಚ್ಚಳ ಮುಚ್ಚಿರುವುದರಿಂದ ನೀರಿನ ಆವಿಯಲ್ಲಿ ಕಡಬುಗಳು ಬೇಯುವವು.

ಸರಬು
(ನಾ)
ಮಡಿಕೆ ಸುಡುವ ಉರುವಲು, ನಾನಾ ತರದ ಗಿಡ - ಗಂಟಿಗಳಿಂದ ಇದನ್ನು ಸಂಗ್ರಹಿಸುವರು.

ಸರಬೆ
(ನಾ)
ಮಡಕೆ ತುಂಬಿದ ಗಾಡಿಯ ಎರಡು ಕಡೆಯ ಬಿದುರು ತಟ್ಟೆಗಳಿಗೆ ಉದ್ದನೆಯ ಹಗ್ಗದ ಸಹಾಯದಿಂದ ಕಟ್ಟಿದ ಗಡಿಗೆಗಳ ಸಾಲು. ಮಡಿಕೆಗಳನ್ನು ಕಟ್ಟುವ ಹಗ್ಗ ಕ್ಕೂ ಕೂಡ ಸರಬೆ ಎನ್ನುವರು.

ಸಲಕಿ
(ನಾ)
ಕುಂಬಾರ ಗುಂಡಿಯಿಂದ ಮಣ್ಣನ್ನು ತುಂಬಲು, ಆವಿಗೆ ಬೂದಿ ಎಳೆಯಲು, ಹೀಗೆ ಬೇರೆ ಬೇರೆ ಕಾರ್ಯಗಳಿಗೆ ಬಳಸುವರು.

ಸಾಣಿಗೆ
(ನಾ)
ಜರಡಿ, ಮರಳು, ಬೂದಿಯನ್ನು ಸಾಣಿಸಲು ಕುಂಬಾರರು ಬಳಸುವರು.

ಸ್ವಾರಿಗಾಡಿ
(ನಾ)
ಮಾರಾಟಕ್ಕೆ ಕೊಂಡೊಯ್ಯಲು ಮಡಕೆಗಳನ್ನು ತುಂಬಿಟ್ಟ ಎತ್ತಿನಗಾಡಿ ಬಳ್ಳಾರಿ, ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲಿ ಈ ಪದ ಹೆಚ್ಚು ಬಳಕೆಯಲ್ಲಿದೆ. ಗಡಿಗೆಗಾಡಿ, ಮಡಕೆಗಾಡಿ ಎಂತಲೂ ಕರೆಯುವರು.

ಸೀಳು
(ಕ್ರಿ)
ಎರಡುಭಾಗ ಮಾಡು ಅರೆ ಹಸಿ ಇದ್ದಾಗ ಹಂಚನ್ನು ಎರಡು ಭಾಗ ಮಾಡುವರು. ಸೀಳು ಮುಚ್ಚುವರು. ಸುಟ್ಟ ನಂತರ ಹೋಳು ಮಾಡಲು ಅನುಕೂಲವಾಗುವದು.


logo