logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಒಡಕ
(ವಿ)
ಒಡಕುಗಡಿಗೆ, ಒಡಕು ಮಡಿಕೆ, ದದ್ದುಮಡಿಕೆ ಮುರುಕ ಮನೆಗೆ ಒಡಕು ಗಡಿಗೆ (ಗಾದೆ) ಮರ್ಮವಿಲ್ಲದ ಮಾತು ಒಡಮಡಕೆಯತೂತು (ದಾಸರ ಪದ)

ಒಡಹುಟ್ಟಿದ ಗಡಿಗೆ
(ನಾ)
ಗಂಡಿನ ಸೋದರಿ ಹಿಡಿದುಕೊಳ್ಳುವ ಸಣ್ಣಗಡಿಗೆ (ಕರೆಗಡಿಗೆ) ಕೆಲವೊಂದು ಜನಾಂಗದ ಮದುವೆ ಸಂದರ್ಭದಲ್ಲಿ ಈ ಕ್ರಿಯೆ ನಡೆಯುತ್ತದೆ.

ಒಡ್ಲು
(ನಾ)
ಒಡಲು, ಗಡಿಗೆಯ ಹೊಟ್ಟೆ ಗಡಿಗೆಯ ಸೊಂಟದ ಭಾಗ 'ದೊಡ್ಡ ಒಡ್ಲಿಂದ ಹರವಿಕೊಡ್ರಿ' (ಆಡು ಮಾತು)

ಒಣಮಸಿ
(ನಾ)
ಆವಿಗೆಯ ಮೇಲ್ಭಾಗಕ್ಕೆ ಸೊಪ್ಪು ಸೆದೆ ಹಾಕಿದೆ ಮೇಲೆ ಅದರ ಮೇಲ್ಭಾಗಕ್ಕೆ ಮುಚ್ಚುವ ಬೂದಿ, ಅದಕ್ಕೆ ನೀರು ಹಾಕಿರುವುದಿಲ್ಲ.

ಒಲೆ
(ನಾ)
ಬೆಂಕಿ ಹೊತ್ತಿಸುವ ಸ್ಥಳ. ಒಣ್ಣಲೆ, ಜೋಡು ಕೋಡೂಲೆ, ಕೋಡೋಲೆ, ಅಡುಗೆ ಮಾಡಲು, ನೀರು ಕಾಯಿಸಲು, ಬೆಂಕಿಯನ್ನು ಉರಿಸಲು ಉಪಯೋಗಿಸುವ ಸಲಕರಣಿ ಒಲೆಗಳಲ್ಲಿ ಬೇರೆ-ಬೇರೆ ನಮೂನೆಗಳಿವೆ. ಉರುವಲಿನ ಉಳಿತಾಯ ಮಾಡಲು ಜೋಡು ಒಲೆಗಳನ್ನು ತಯಾರಿಸುವರು. ಒಲೆಗಳನ್ನು ಮಣ್ಣಿನಿಂದ ತಯಾರಿಸಲಾಗುವುದಾದರೂ ಇತ್ತೀಚಿನ ದಿನಗಳಲ್ಲಿ ಸಿಮೆಂಟಿನಿಂದಲೂ ತಯಾರಿಸುವರು. ಒಲೆ ಸೊಟ್ಟಾದ್ರೆ ಬದ್ನೆಕಾಯಿ ಬೇಯದಿಲ್ವೆ (ಗಾದೆ) ಒಂದ್ಹೊತ್ತಿನ ಅನ್ನ ಅದೆ ಅಂತ ಒಲೆ ಕಿತ್ತು ಮಡಿಗೆದ್ಹಂಗೆ (ಗಾದೆ)

ಒಲೆಗುಂಡು
(ನಾ)
ಮಣ್ಣಿನ ಒಲೆಯ ಮೇಲೆ ಪಾತ್ರೆಗಳು ಸರಿಯಾಗಿ ಕೂಡ್ರಲು ಅನುಕೂಲವಾಗುವಂತೆ ಒಲೆಯ ಮೇಲೆ ದುಂಡಗೆ ಮಾಡಿದ ಮೂರು ಗುಂಡುಗಳು. ಅಲೆಮಾರಿ ಜನರು ಮೂರು ದುಂಡಗಿನ ಕಲ್ಲುಗಳನ್ನು ಹೂಡಿ ಒಲೆಮಾಡಿ ಅಡಿಗೆ ಮಾಡಿಕೊಳ್ಳುವರು ಇದಕ್ಕೂ ಕೂಡ "ಒಲೆಗುಂಡ" ಎಂದು ಕರೆಯಲಾಗುವುದು. "ಅಡಿಸತ್ತ ಮಡಕೆಗೆ ಜೋಡಿಸಿ ಒಲೆಗುಂಡ ಹೂಡಬಾರದು ಬಹು ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು" (ಕನಕದಾಸರು)
">

ಒಳ್ಳೆ
(ನಾ)
ಒಳಲೆ, ಮಕ್ಕಳಿಗೆ ಹಾಲು ಕುಡಿಸುವ ಬಟ್ಟಲು, ಹಾಲು ಕುಡಿಯಲು ಅನುಕೂಲವಾಗುವಂತೆ ಮುಂಭಾಗದಲ್ಲಿ ಮೂತಿ ಮಾಡಲಾಗಿರುವುದು.


logo